ಎಚ್.ಡಿ.ಕೋಟೆ: ಪಟ್ಟಣದ ಪೊಲೀಸ್ ಠಾಣೆಗೆ ನೂತನವಾಗಿ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಬಂದ ಎಸ್. ಗಂಗಾಧರ್ ಅವರನ್ನು ಅವರ ಸ್ವ ಗ್ರಾಮದ ರತ್ನಪುರಿ ಗ್ರಾಮಸ್ಥರು ಹಾಗೂ ಮುಖಂಡರು ಠಾಣೆಗೆ ಭೇಟಿ ಮಾಡಿ ಸನ್ಮಾನಿಸಿದರು.
ಗ್ರಾಮದ ದಸಂಸ ಮುಖಂಡ ರತ್ನಪುರಿ ಪುಟ್ಟಸ್ವಾಮಿ ಮಾತನಾಡಿ ಎಸ್.ಗಂಗಾಧರ್ ಅವರ ಕುಟುಂಬ ಕಡುಬಡತನದಲ್ಲಿ ಇದ್ದರು ಕೂಡ ಗಂಗಾಧರ್ ಅವರು ಶಿಕ್ಷಣವನ್ನು ಸವಾಲಾಗಿ ತೆಗೆದುಕೊಂಡು ವಿದ್ಯಾಭ್ಯಾಸ ಮಾಡಿ ಉದ್ಯೋಗ ಪಡೆದು ಗ್ರಾಮಕ್ಕೆ ಕೀರ್ತಿ ತರುವ ಕೆಲಸವನ್ನು ಮಾಡಿದ್ದಾರೆ. ಅವರು ತಮ್ಮ ಸೇವ ಅವಧಿಯಲ್ಲಿ ನಿಯೋಜನೆ ಗೊಂಡ ಪೊಲೀಸ್ ಠಾಣೆಗಳಲ್ಲಿ ಕಾನೂನಿನ ಅಡಿಯಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡಿ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದರು.
ಎಚ್.ಡಿ.ಕೋಟೆ ಪೊಲೀಸ್ ಠಾಣೆಗೆ ಬರುವುದಕ್ಕಿಂತ ಮುಂಚೆ ಹಾಸನ ಆಲೂರಿನಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡಿ ಇಲ್ಲಿಗೆ ವರ್ಗಾವಣೆ ಆಗಿ ಬಂದಿದ್ದಾರೆ. ಅವರು ತಾಲ್ಲೂಕಿನಲ್ಲಿ ಉತ್ತಮ ಸೇವೆಯನ್ನು ಮಾಡಿ ನಮ್ಮ ಗ್ರಾಮಕ್ಕೆ ಹೆಸರು ತರುವ ಕೆಲಸ ಮಾಡಲಿ ಎಂದು ಆಶಿಸಿದರು.

ಈ ವೇಳೆ ಹುಣಸೂರು ಡಿವೈಎಸ್ಪಿ ಗೋಪಾಲಕೃಷ್ಣ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಡಿ.ವೈ ಪ್ರಸನ್ನ, ಮಹಾದೇವ ಸ್ವಾಮಿ, ಶಿವರಾಮು, ಶಿವು, ಹೆಗ್ಗನೂರು ನಿಂಗರಾಜು, ಮುತ್ತು ಉಯ್ಯಂಬಳ್ಳಿ ಇದ್ದರು.
- ಶಿವು, ಕೋಟೆ