ಹೆಚ್.ಡಿ,ಕೋಟೆ-ತಾಲೂಕು ಶಿಕ್ಷಣ ಇಲಾಖೆ,ಆರೋಗ್ಯ ಇಲಾಖೆ,ತಾಲೂಕು ಪಂಚಾಯತಿ ಹಾಗೂ ಅಲೀಂ ಕೋ ಸಹಯೋಗದೊಂದಿಗೆ,ವಿಶೇಷ ಚೇತನ ಮಕ್ಕಳಿಗೆ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು,ತಹಶೀಲ್ದಾರ್ ಶ್ರೀನಿವಾಸ್ ಅವರು ವಹಿಸಿ ದೀಪ ಬೆಳಗಿಸುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ,ರವಿಕುಮಾರ್ ಮಾತನಾಡಿ,ವಿಶೇಷ ಚೇತನ ಮಕ್ಕಳು ಹುಟ್ಟುವುದು ಶಾಪವಲ್ಲ,ಗರ್ಭ ವ್ಯವಸ್ಥೆಯಲ್ಲಿ,ಹಾಗೂ ಹೆರಿಗೆ ಸಮಯದಲ್ಲಿ,ಆಗುವ ಏರುಪೇರಿನಿಂದ ಇಂತಹ ಮಕ್ಕಳು ಜನಿಸುತ್ತಾರೆ ಎಂದು ತಿಳಿಸಿ ಸರಕಾರ ಈ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು ಅವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಪೋಷಕರಿಗೆ ಸಲಹೆ ನೀಡಿದರು.
ಶಿಬಿರದಲ್ಲಿ,ತಾಲೂಕು ಪಂಚಾಯತಿ ಇ.ಓ ರಘುನಂದನ್,ಮುತ್ತುರಾಜು,ಬಿ.ಆರ್.ಸಿ ಕೃಷ್ಣಯ್ಯ ಮತ್ತು ವೈದ್ಯರು ಹಾಜರಿದ್ದರು.
———-ಶಿವು ಕೋಟೆ