
ಎಚ್.ಡಿ.ಕೋಟೆ:ಪಿ.ಎಸ್.ಅರುಣ್ ಕುಮಾರ್ ಅವರ ಐದನೇ ವರ್ಷದ ಪುಣ್ಯ ಸ್ಮರಣೆಯಂದು ಜಯಪುರ ಸಮೀಪದ ಸಾಲುಂಡಿ ಹಾಗೂ ಸುತ್ತಮುತ್ತಲ ಗ್ರಾಮಗಳ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್,ನೋಟ್ ಪುಸ್ತಕ ಹಾಗೂ ಲೇಖನ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಅರುಣೋದಯ ಫಾರಂ ಹೌಸ್ ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪಿ.ಎಸ್.ಅರುಣ್ ಕುಮಾರ್ ಅವರ ಪತ್ನಿ ಸ್ತ್ರೀ ರೋಗ ಹಾಗು ಪ್ರಸೂತಿ ತಜ್ಞೆ ಡಾ.ರೇಖಾ ಅರುಣ್ ಅವರು ವಿತರಣಾ ಕಾರ್ಯ ನಡೆಸಿದರು.

ಈ ಸಂದರ್ಭದಲ್ಲಿ ಪುತ್ರ ಆಕಾಶ್ ಅರುಣ್, ಪುತ್ರಿ ಸ್ಪರ್ಶ ಅರುಣ್, ಗಾಯಕ ಗುರುರಾಜ್, ಶಿವಣ್ಣ, ನಾದಮಯ ಪ್ರೇಮ್, ರೂಪ, ಕುಮಾರ್, ಶಿಕ್ಷಕ ಆರ್.ರಂಗಸ್ವಾಮಿ ಸೇರಿದಂತೆ ಮತ್ತಿತರದ್ದರು.
–ವರದಿ-ಶಿವು ಕೋಟೆ