ಎಚ್.ಡಿ. ಕೋಟೆ-ರಸ್ತೆ ಅಪಘಾತ – ಪ್ರಾಣಾಪಯಾದಿಂದ ಪಾರಾದ ಯುವಕರು

ಎಚ್.ಡಿ. ಕೋಟೆ: ತಾಲ್ಲೂಕಿನ ಕಟ್ಟೆ ಮನಗನಹಳ್ಳಿ ಗ್ರಾಮದಿಂದ ಮೈಸೂರಿನ ಬಸವ ಜಯಂತಿಯ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ತಾಲ್ಲೂಕಿನ ಮಂಡನಹಳ್ಳಿ ಸಮೀಪದಲ್ಲಿ ಲಾರಿಗೆ ಡಿಕ್ಕಿ ಹೊಡೆದು ತೀವ್ರ ಅಪಾಯ ಸಂಭವಿಸಿ ಮೂವರು ಚಿಂತಾ ಜನಕವಾಗಿದ್ದು, ಇನ್ನುಳಿದವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿತರಿಸಿಕೊಳ್ಳುತ್ತಿದ್ದಾರೆ.

ತಾಲ್ಲೂಕಿನ ಕಾರೇಹುಂಡಿ ಗ್ರಾಮದಿಂದ ಸಂಬಂಧಿಕರ ಮನೆಗೆ ಬಂದಿದ್ದ ತೇಜಸ್ (12) ಕಟ್ಟೆಮನಗನಹಳ್ಳಿ ಗ್ರಾಮದ ನಿತೀಶ್ (15) ಮಹದೇವಸ್ವಾಮಿ (20) ನಿಕಿತ್ (23) ಆದರ್ಶ (22) ಮಹದೇವಪ್ಪ (60) ಗುರುಪ್ರಸಾದ್ (24) ಮಹದೇವಸ್ವಾಮಿ (25) ಮನೋಜ್ (20) ವಿವೇಕ್ (22) ಶರತ್ (18) ಮಹಾಂತೇಶ್ (18) ಗಾಯಗೊಂಡಿದ್ದಾರೆ.

ಜಯಂತಿ ಮತ್ತು ಇತರೆ ಕಾರ್ಯಕ್ರಮಗಳಲ್ಲಿ ಬಳಸಲಾಗುವ ಪೇಪರ್ ಬ್ಲಾಸ್ಟರ್ ಅನ್ನು ಗೂಡ್ಸ್ ವಾಹನದಲ್ಲಿ ಹಾಕಿಕೊಂಡು ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ತೆರಳುತ್ತಿದ್ದರು.

ಬಸವ ಜಯಂತಿ ಕಾರ್ಯಕ್ರಮಕ್ಕೆ ಬರುತ್ತಿದ್ದ ಕಟ್ಟೆಮನಗನಹಳ್ಳಿ ಗ್ರಾಮದ ಬಿಸತೀಶ್ ಬಹದ್ದೂರ್ ಮತ್ತು ಮಹದೇವಸ್ವಾಮಿ ಇಬ್ಬರು ಆಂಬುಲೆನ್ಸ್ ಗೆ ಕರೆ ಮಾಡಿ ಎಲ್ಲರನ್ನು ಆಂಬುಲೆನ್ಸ್ ನಲ್ಲಿ ಕಳುಹಿಸಿ ತಮ್ಮ ಕಾರಿನಲ್ಲಿ ಇನ್ನುಳಿದವರನ್ನು ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಸ್ಪತ್ರೆಗೆ ಶಾಸಕ ಅನಿಲ್ ಚಿಕ್ಕಮಾದು ಭೇಟಿ ನೀಡಿ ಗಾಯಗೊಂಡಿರುವವರ ಚಿಕಿತ್ಸೆಗೆ ಎಲ್ಲಾ ರೀತಿಯ ನೆರವು ನೀಡುವ ಭರವಸೆಯನ್ನು ನೀಡಿದ್ದಾರೆ.

– ಶಿವಕುಮಾರ ಕೋಟೆ

Leave a Reply

Your email address will not be published. Required fields are marked *