ಎಚ್.ಡಿ.ಕೋಟೆ-ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಸದಾಶಿವ ಆಯೋಗದ ಒಳ ಮೀಸಲಾತಿ ಹೋರಾಟಕ್ಕೆ ಕೋಟೆ ಮತ್ತು ಸರಗೂರು ತಾಲೂಕಿನಿಂದ ಸುಮಾರು 150ಕ್ಕೂ ಹೆಚ್ಚು ಜನ ಭಾಗವಹಿಸಿ ಬೆಂಬಲ ಸೂಚಿಸಿದರು.
ನಂತರ ಮಾತನಾಡಿದ ಸಮುದಾಯದ ಮುಖಂಡರು ರಾಜ್ಯ ಸರ್ಕಾರ ನಮ್ಮ ಜನಾಂಗದ ಬಹುಮುಖ್ಯ ಬೇಡಿಕೆಯಾದ ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಬೇಕು ಸುಮಾರು 35 ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ ಇದಕ್ಕೆ ಒಂದು ಅಂತಿಮ ವಿರಾಮವನ್ನ ಹಾಕಬೇಕು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಂದಲೂ ಸುಮಾರು ಲಕ್ಷಾಂತರ ಸಮುದಾಯದ ಮುಖಂಡರು ಸೇರಿ ಫ್ರೀಡಂಪಾರ್ಕ್ ನಲ್ಲಿ ನಮ್ಮ ನ್ಯಾಯಯುತ ಬೇಡಿಕೆಯಾದ ಒಳ ಮೀಸಲಾತಿಗೆ ಹೋರಾಟವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.

ಹೋರಾಟದಲ್ಲಿ ಡಾಕ್ಟರ್ ಬಾಬು ಜಗಜೀವನ್ ವಿಚಾರ ವೇದಿಕೆ ಮಾಜಿ ಅಧ್ಯಕ್ಷ ಪಿ.ನಾಗರಾಜು, ಸರಗೂರು ಹೆಚ್, ಹನು, ನಾಗಯ್ಯ, ಉಡ ನಾಗರಾಜ್, ಬೂದನೂರು ಶ್ರೀನಿವಾಸ್, ಹೀರಳ್ಳಿ ಪ್ರಕಾಶ್, ಬೂದನೂರು ವೆಂಕಟೇಶ್, ಕುರ್ಣೇಗಾಲ ಬೆಟ್ಟಸ್ವಾಮಿ, ಎಡತೊರೆ ನಾಗರಾಜ್, ಹಂಚೀಪುರ ನಾಗರಾಜ್, ವೆಂಕಟಪ್ಪ, ಗಿರಿಪ್ರಸಾದ್, ಕಾಳಪ್ಪಾಜಿ ಸಿ, ಮಹೇಂದ್ರ, ಚಿಕ್ಕ ಸ್ವಾಮಿ, ಚೇತನ್, ಹನು, ಕುಮಾರ್ ಸೇರಿದಂತೆ ಸಮುದಾಯದ ಸುತ್ತಮುತ್ತಲಿನ ಗ್ರಾಮಸ್ಥರು ಮುಖಂಡರು ಹಾಜರಿದ್ದರು.
- ಶಿವಕುಮಾರ, ಕೋಟೆ