ಎಚ್.ಡಿ. ಕೋಟೆ: ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಅನಿಲ್ ಚಿಕ್ಕಮಾದು ಮಾತಾನಾಡಿ, ಶತ ಶತಮಾನಗಳಿಂದ ಹಸಿವು, ಬಡತನ, ದೌರ್ಜನ್ಯ, ದಬ್ಬಾಳಿಕೆ, ಶೋಷಣೆಗಳಿಗೆ ಒಳಗಾಗಿದ್ದ ಶೋಷಿತ ಸಮುದಾಯಗಳ ವಿಮೋಚನೆ ನಾಂದಿ ಹಾಡಿದ ಮಹಾನ್ ವ್ಯಕ್ತಿ ಅಂಬೇಡ್ಕರ್, ಅಂಬೇಡ್ಕರ್ ಈ ದೇಶದಲ್ಲಿ ಹುಟ್ಟಿ ಸಂವಿಧಾನ ರಚಿಸಲಿಲ್ಲ ಎಂದಿದ್ದರೆ ನಾನು ಶಾಸಕನಾಗಲು ಸಾಧ್ಯವಿರಲಿಲ್ಲ ಎಂದು ಶ್ಲಾಘಿಸಿದರು.
ಮುಖ್ಯ ಭಾಷಣಾರ ಎಂ. ಮಹೇಶ ಮಾತಾನಾಡಿ, ಜಗತ್ತಿನ ಐವತ್ತಕ್ಕೂ ಹೆಚ್ಚು ದೇಶಗಳ ಸಂವಿಧಾನವನ್ನ ಮತ್ತು ಈ ದೇಶದ ವೇದ ಉಪನಿಷತ್ತು ಗಳನ್ನ ಸಂಪೂರ್ಣ ವಾಗಿ ಅಧ್ಯಯನ ಮಾಡಿ ಈ ದೇಶದ ಎಲ್ಲ ಜಾತಿ ಸಮುದಾಯಗಳಿಗೂ ಅಗತ್ಯವಾದ ಸಂವಿಧಾನವನ್ನು ಎರಡು ವರ್ಷ ಹನ್ನೊಂದು ತಿಂಗಳು ಹದಿನೇಳು ದಿನಗಳ ಕಾಲ ಸುಧೀರ್ಘ ಅಧ್ಯಯನ ಮಾಡಿ ಭವ್ಯ ಭಾರತಕ್ಕೆ ಪ್ರಬುದ್ಧ ಸಂವಿಧಾನ ರಚಿಸಿದ ಕೀರ್ತಿ ಡಾ, ಅಂಬೇಡ್ಕರ್ ರವರಿಗೆ ಸಲ್ಲುತ್ತದೆ ಎಂದರು.
ಮೂರನೇ ತರಗತಿ ವಿಧ್ಯಾರ್ಥಿ ಯು.ಎಸ್. ಸುನೋಜ್ ಸಂವಿಧಾನ ಪೀಠಿಕೆ ಯನ್ನು ಓದಿಸಿದ್ದು ವಿಶೇಷವಾಗಿತ್ತು. ಗೌಸ್ ಮೋಹಿನ್ ಅವರ ಕಾಕನಕೋಟೆ ಬಾನಾಡಿಗಳು ಪುಸ್ತಕವನ್ನು ಬಿಡುಗಡೆ ಗೊಳಿಸಲಾಯಿತು.

ಈ ವೇಳೆ ಉನ್ಮೀಲ್, ಮಧುಕುಮಾರ್, ಆದಿ ಕರ್ನಾಟಕ ಮಹಾ ಸಭಾ ಅಧ್ಯಕ್ಷ ನರಸಿಂಹಮೂರ್ತಿ, ಪುರಸಭಾ ಸದಸ್ಯರಾದ ಗೀತಾ ಗಿರಿಗೌಡ, ಸುಹಾಸಿನಿ ದಿನೇಶ್, ಅನಿಲ್, ವೃತ್ತಾ ನಿರೀಕ್ಷಕ ಗಂಗಾಧರ, ಅಬಕಾರಿ ಇನ್ಸ್ಪೇಕ್ಟರ್ ಶಿವರಾಜ್, ಈರೇಗೌಡ, ಹಿರೇಹಳ್ಳಿ ಸೋಮೇಶ್, ಡಾ. ಯಶ್ವಂತ್, ಲಾಟರಿ ನಾಗರಾಜ್, ತೇಜುಗುರುಮಲ್ಲು, ಜಸ್ಸಿಲ್ಲಾ, ದೇವರಾಜ್, ಸ್ವಾಮಿ ಉಯ್ಯಂಬಳ್ಳಿ, ಕೆಂಪಯ್ಯ, ವೆಂಕಟೇಶ, ಪ್ರಕಾಶ್, ಕೆ, ಜಿ, ಶಿವಕುಮಾರ್ ನಂಜಯ್ಯ, ಜಯಣ್ಣ, ಶಿವಕುಮಾರ್, ಮೋಹನ್ ರಾಜ್, ಗೋಪಾಲ್, ಸುರೇಂದ್ರ ಸಿಂಗ್, ಲ್ಯಾಂಡ್ ಆರ್ಮಿ ಬಸವರಾಜ್, ಧರ್ಮ, ಕೃಷ್ಣರಾಜ್, ಮಹದೇವಯ್ಯ, ಚಾ. ನಂಜುಂಡ ಮೂರ್ತಿ, ಆನಂದ್, ಪ್ರಮೋದ್ ಕುಮಾರ್, ಗೌಸ್ ಮೋಹಿನ್, ಸದಾಶಿವ, ಚಿಕ್ಕಣ್ಣ, ಭೀಮಪ್ಪ,ಸ್ಟೀಫನ್ ಸಿದ್ದು, ಲೈಟ್ ಮಹದೇವ, ಶಿವಲಿಂಗ ಹಾಗೂ ಕೆಂಪಾಲಮ್ಮ ಬಡಾವಣೆ, ಡ್ರೈವರ್ ಕಾಲೋನಿ, ನಾಗಶೆಟ್ಟರ ಬಡಾವಣೆ, ಹೌಸಿಂಗ್ ಬೋರ್ಡ್ ಕಾಲೋನಿಯ ನಿವಾಸಿಗಳು ಇದ್ದರು.
– ಶಿವಕುಮಾರ