ಎಚ್.ಡಿ.ಕೋಟೆ-ಯುವಕನ-ಬಲಿ-ಪಡೆದ-ಕಾಡಾನೆಗಳ-ಹಿಂಡು

ಎಚ್.ಡಿ.ಕೋಟೆ: ಜಮೀನಿನಲ್ಲಿ ಬೆಳೆದಿದ್ದ ಬೆಳೆಗೆ ನೀರು ಹಾಯಿಸಲು ಹೋಗಿದ್ದ ಯುವಕ‌ ಆನೆದಾಳಿಗೊಳಗಾಗಿ ಮೃತಪಟ್ಟಿರುವ ಘಟನೆ ಗದ್ದೇಹಳ್ಳ ಗ್ರಾಮದಲ್ಲಿ ನಡೆದಿದೆ.

ಯುವಕ ಅವಿನಾಶ್(23) ಮೃತ ದುರ್ದೈವಿ. ಮುಂಜಾನೆ 6 ಗಂಟೆಯ ಸಮಯದಲ್ಲಿ ಬೆಳೆಗೆ ನೀರುಣಿಸಲು ಹೋಗಿದ್ದಾಗ ಕಾಡಾನೆಗಳ ಹಿಂಡೊಂದು ಆತನ ಮೇಲೆ ಏಕಾಏಕಿ‌ದಾಳಿ ಮಾಡಿದಾಗ, ಅಕ್ಕ-ಪಕ್ಕದ ಜಮೀನಿನವರು ಕಿರುಚಾಡಿದ ನಂತರ ಒಂಟಿ‌ಸಲಗವೊಂದು ಯುವಕನನ್ನು ಸೊಂಡಿಲಿನಿಂದ ನೆಲಕ್ಕಪ್ಪಳಿಸಿದ ಪರಿ‌ಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಘಟನೆ ನಡೆದು ನಾಲ್ಕೈದು ಗಂಟೆಗಳು ಕಳೆದರೂ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕಾಗಮಿಸದೆ ಇರುವುದರಿಂದ ಕುಪಿತಗೊಂಡ ಗ್ರಾಮಸ್ಥರು ಊರಿನ ಮಧ್ಯೆ ಭಾಗದಲ್ಲಿ ಪ್ರತಿಭಟನೆ ನಡೆಸಲು ಮುಂದಾದರು.

ವಿಷಯ ತಿಳಿಯುತ್ತಿದ್ದಂತಯೇ ಸ್ಥಳಕ್ಕಾಗಮಿಸಿದ ಪೊಲೀಸ್ ಇಲಾಖೆ ಅಧಿಕಾರಿಗ,ಳು ಅರಣ್ಯ ಅಧಿಕಾರಿಗಳು ಹಾಗೂ ತಾಲೂಕಿನ ಮಾಜಿ ಶಾಸಕ ಬಿಚನಹಳ್ಳಿ ಚಿಕ್ಕಣ್ಣ ರವರು ಅನೇಕ ಮುಖಂಡರು ಮೃತನ ಕುಟುಂಬಸ್ಥರಿಗೆ ಸಾಂತ್ವಾನ‌ ಹೇಳಿದರ.

ಅರಣ್ಯಾಧಿಕಾರಿ ಪ್ರಭಾಕರ್ ಅವರು ಇಲಾಖೆಯಿಂದ ನೀಡುವ ಪರಿಹಾರದ ಚೆಕ್ ವಿತರಿಸಿ, ಯುವಕನ ಅಣ್ಣನಿಗೆ ಇಲಾಖೆಯಲ್ಲಿ ಸರ್ಕಾರಿ ಉದ್ಯೋಗವನ್ನು ನೀಡುವ ಜೊತೆಗೆ, ಪ್ರತಿ ತಿಂಗಳು ನಾಲ್ಕು ಸಾವಿರ ಮಾಸಾಸನ ನೀಡುವ ಭರವಸೆ ನೀಡಿದರು.

ತಾಲೂಕು ದಂಡಾಧಿಕಾರಿ ಮೋಹನ್ ಕುಮಾರಿ ರವರು ಮೃತನ ಕುಟುಂಬಕ್ಕೆ ಸರ್ಕಾರಿ ಯೋಜನೆಯಿಂದ ಒಂದು ಮನೆ ಕೊಡಿಸುವುದಾಗಿ ಭರವಸೆ ನೀಡಿದರು.

ರೈತ ಮುಖಂಡ ಚಂದನ್ ಗೌಡ ಮಾತನಾಡಿ, ಮುಂದಿನ ದಿನದಲ್ಲಿ ಈ ರೀತಿಯ ಪ್ರಕರಣಗಳು ಮರುಕಳಿಸಿದಂತೆ ಅಧಿಕಾರಿಗಳಯ ಕ್ರಮವಹಿಸಬೇಕೆಂದು ತಿಳಿಸಿದರು.

  • ಶಿವು ಕೋಟೆ, ಎಚ್.ಡಿ.ಕೋಟೆ

Leave a Reply

Your email address will not be published. Required fields are marked *

× How can I help you?