ತುಮಕೂರು: ಜಿಲ್ಲಾ ವಕೀಲರ ಸಂಘಕ್ಕೆ 2025-27ನೇ ಸಾಲಿಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಹೆಚ್.ಕೆಂಪರಾಜಯ್ಯನವರು ತಮ್ಮ ನೂತನ ಕಾರ್ಯಕಾರಿ ಮಂಡಳಿಯ ಸದಸ್ಯರೊಂದಿಗೆ ಅಧಿಕಾರ ಸ್ವೀಕಾರ ಮಾಡಿದರು.

ಜಿಲ್ಲಾ ವಕೀಲರ ಕಚೇರಿಯಲ್ಲಿ ತುಮಕೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯ, ಉಪಾಧ್ಯಕ್ಷ ಎಂ.ಎಲ್.ರವಿಗೌಡ,ಪ್ರಧಾನ ಕಾರ್ಯದರ್ಶಿ ಮಹೇಶ್ ಹಿರೇಹಳ್ಳಿ,ಜಂಟಿ ಕಾರ್ಯದರ್ಶಿ ಟಿ.ಎಂ.ಧನಂಜಯ,ಖಜಾಂಚಿ ಸಿಂಧು.ಬಿ.ಎಂ. ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಗೋವಿಂದರಾಜು.ಪಿ, ಡಿ.ಎ.ಜಗದೀಶ್,ಶ್ರೀನಿವಾಸಮೂರ್ತಿ.ಕೆ.ವಿ.ಶ್ರೀನಿವಾಸಮೂರ್ತಿ ವಿ.ಕೆ,ಸುರೇಶ್.ಎಸ್, ಪದ್ಮಶ್ರೀ.ಸಿ.ಆರ್.ಸೇವಾಪ್ರಿಯ.ಜೆ.ಎಸ್.ರವರುಗಳು ಹಿಂದಿನ ಪದಾಧಿಕಾರಿಗಳಿಂದ ಅಧಿಕಾರ ಸ್ವೀಕರಿಸಿದರು.
ಈ ವೇಳೆ ಹಿರಿಯ,ಕಿರಿಯ,ಮಹಿಳಾ ವಕೀಲ ಮಿತ್ರರು ಆಗಮಿಸಿ ನೂತನ ಪದಾಧಿಕಾರಿಗಳಿಗೆ ಶುಭಕೋರಿದರು.
– ಕೆ.ಬಿ.ಚಂದ್ರಚೂಡ