ತುಮಕೂರು: ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ ಹೆಚ್.ಕೆಂಪರಾಜಯ್ಯರವರು 2025-27ನೇ ಸಾಲಿಗೆ 2 ವರ್ಷದ ಮತ್ತೊಂದು ಅವಧಿಗೆ ಚುನಾಯಿತರಾದರು. ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರ ಆಯ್ಕೆಗೆ ಶುಕ್ರವಾರ ಚುನಾವಣೆ ನಡೆಯಿತು.ನಂತರ ತಡರಾತ್ರಿ 1ರವರೆಗೂ ಮತ ಎಣಿಕೆ ನಡೆದು ಹೆಚ್.ಕೆಂಪರಾಜಯ್ಯನವರು 514 ಮತಗಳನ್ನು ಪಡೆದು 2ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದರು.

ಇದೇ ವೇಳೆ ಸಂಘದ ಉಪಾಧ್ಯಕ್ಷರಾಗಿ ಎಂ.ಎಲ್.ರವಿಗೌಡರವರು 513 ಮತಗಳನ್ನು ಪಡೆದು ಆಯ್ಕೆಯಾದರು, ಪ್ರಧಾನ ಕಾರ್ಯದರ್ಶಿಯಾಗಿ ಹಿರೇಹಳ್ಳಿ ಮಹೇಶ್ ರವರು 506 ಮತಗಳನ್ನು ಪಡೆದು ವಿಜೇತರಾದರು, ಜಂಟಿ ಕಾರ್ಯದರ್ಶಿಯಾಗಿ ಟಿ.ಎಂ.ಧನಂಜಯರವರು 477 ಮತಗಳನ್ನು ಪಡೆದು ವಿಜೇತರಾದರು, ಖಜಾಂಚಿಯಾಗಿ ಸಿಂಧು.ಬಿ.ಎಂ.ರವರು 572 ಮತಗಳನ್ನು ಪಡೆದು ಆಯ್ಕೆಯಾದರು.
ಇದೇ ವೇಳೆ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಗೋವಿಂದರಾಜು.ಪಿ ರವರು 806 ಮತಗಳು,ಡಿ.ಎ.ಜಗದೀಶ್ 894,ಶ್ರೀನಿವಾಸಮೂರ್ತಿ.ಕೆ.ವಿ.844,ಶ್ರೀನಿವಾಸಮೂರ್ತಿ ವಿ.ಕೆ.622,ಸುರೇಶ್.ಎಸ್.791,ಮಹಿಳಾ ಮೀಸಲು ಸ್ಥಾನಕ್ಕೆ ಪದ್ಮಶ್ರೀ.ಸಿ.ಆರ್.696, ಮತ್ತು ಸೇವಾಪ್ರಿಯ.ಜೆ.ಎಸ್.855 ಮತಗಳನ್ನು ಪಡದು ಆಯ್ಕೆಯಾದರು.
ಆಯ್ಕೆ ನಂತರ ಮಾತನಾಡಿದ ಅಧ್ಯಕ್ಷ ಹೆಚ್.ಕೆಂಪರಾಜಯ್ಯ ನವರು ವಕೀಲ ಮಿತ್ರರ ಪ್ರೀತಿ, ವಿಶ್ವಾಸ,ನಂಬಿಕೆ, ಬೆಂಬಲದಿಂದ ಈ ಗೆಲುವು ಸಾಧ್ಯವಾಯಿತು ಹಿಂದಿನ 2 ವರ್ಷದಲ್ಲಿ ನಾವು ಮಾಡಿದ ಉತ್ತಮ ಕೆಲಸಗಳನ್ನು ಗಮನಿಸಿ ನನ್ನನ್ನು 2ನೇ ಬಾರಿ ಆಯ್ಕೆ ಮಾಡಿದ್ದಾರೆ ಮುಂದೆ ಮಾಡಬೇಕಾದ ಕೆಲಸಗಳು ಬಹಳಷ್ಟಿದೆ ಕಾಯಾ,ವಾಚಾ,ಮನಸಾ ವಕೀಲರ ಅಭ್ಯುದಯಕ್ಕಾಗಿ ದುಡಿಯುತ್ತೇನೆ,ವಕೀಲರ ಸಂಘದ 3ನೇ ಮಹಡಿ,ಲಿಫ್ಟ್,ನೂತನ ನ್ಯಾಯಾಲಯಕ್ಕೆ ಜಾಗ,ಗಣೇಶ ದೇವಸ್ಥಾನ,ಎಟಿಎಂ ಉದ್ಘಾಟನೆ,ಹೈಟೆಕ್ ಶೌಚಾಲಯ ಹೀಗೆ ಸಾಲು,ಸಾಲು ಕೆಲಸಗಳು ನನ್ನ ಮುಂದಿದೆ ಎಲ್ಲವನ್ನೂ ಸಾಧಿಸಿ ವಕೀಲರ ಏಳ್ಗೆಗಾಗಿ ದಿನದ 24 ಗಂಟೆ ಕೆಲಸ ಮಾಡುತ್ತೇನೆ ಎಂದು ಮತ ನೀಡಿದ ಹಿರಿಯ,ಕಿರಿಯ,ಮಹಿಳಾ ವಕೀಲರುಗಳಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯನವರ ಅಭಿಮಾನಿಗಳು,ಸ್ನೇಹಿತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
- ಕೆ.ಬಿ.ಚಂದ್ರಚೂಡ