ಹಾಸನ;ಸಾರ್ವಜನಿಕ ಗ್ರಂಥಾಲಯವು 21ನೇ ಸಾಲಿಗೆ ವಿವಿಧ ಪ್ರಕಾರದ ಸುಮಾರು 3000 ಕೃತಿಗಳನ್ನು ಏಕಗವಾಕ್ಷಿ ಯೋಜನೆ ಅಡಿ ಆಯ್ಕೆ ಮಾಡಿಕೊಂಡಿದೆ. ಆದರೆ ಈ ಆಯ್ಕೆಯಲ್ಲಿ ಚುಟುಕು ಸಾಹಿತ್ಯ ಪ್ರಕಾರಕ್ಕೆ ಸಂಬoಧಿಸಿದ ಯಾವುದೇ ಕೃತಿಗಳನ್ನು ಆಯ್ಕೆ
ಮಾಡಿಕೊಂಡಿರುವುದಿಲ್ಲ.ಇದು ಆಯ್ಕೆ ಸಮಿತಿಯ ಅಕ್ಷಮ್ಯ ಲೋಪವಾಗಿದೆ ಎಂದು ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬಾ.ನಂ. ಲೋಕೇಶ್ ಖಂಡಿಸಿದ್ದಾರೆ.
ಚುಟುಕು ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕಲ್ಲಿನ ಮೇಲೆ ಶಾಸನಗಳನ್ನು ಕೆತ್ತುವಾಗಿನಿಂದ ರಚಿಸಲ್ಪಟ್ಟ ವಚನಕಾರರಿಂದ ಹಿಡಿದು ಜಪಾನಿ ಭಾಷೆಯ ಸಮೇತ ನೂರಾರು ಭಾಷೆಗಳಲ್ಲಿ ರಚನೆಯಾಗುತ್ತಿರುವ ಸಾಹಿತ್ಯ ಪ್ರಕಾರ ಚುಟುಕು ಸಾಹಿತ್ಯ ಪ್ರಕಾರವಾಗಿದೆ.
ಸಮಾಜದಲ್ಲಿ ಜನಜಾಗೃತಿ ಮೂಡಿಸುವ ಸಾಹಿತ್ಯ ಇದಾಗಿದೆ. ಸರ್ವಜ್ಞ, ಬಸವಾದಿ ಪ್ರಮಥರು, ದಿನಕರ ದೇಸಾಯಿ, ದುಂಡಿರಾಜ್,ಡಾ. ಎಂ ಜಿ ಆರ್ ಅರಸ್,ದೇ ಜ ಗೌ, ಜರಗನಹಳ್ಳಿ ಶಿವಶಂಕರ್, ಸಿಪಿಕೆ ಹಾಗೂ ಇತ್ತೀಚಿನ ಸಾವಿರಾರು ಚುಟುಕು ಸಾಹಿತಿಗಳು ಬರೆಯುತ್ತಿರುವ ಸಾಹಿತ್ಯ ಇದಾಗಿದೆ.
ಚುಟುಕು ಸಾಹಿತ್ಯ ಪ್ರಕಾರವನ್ನು ಕೈ ಬಿಟ್ಟು ಇತ್ತೀಚಿನ ಸಾಹಿತ್ಯ ಪ್ರಕಾರ ಗಜಲ್ಗೆ ಸಂಬoಧಿಸಿದ ಕೃತಿಗಳನ್ನು ಆಯ್ಕೆ ಮಾಡಿಕೊಂಡಿದ್ದು ಶುದ್ಧ ತಪ್ಪಾಗಿದೆ. ಗಜಲ್ ಪ್ರಕಾರ ಕೃತಿ ಕೈ ಬಿಡಬೇಕು ಎಂಬುದು ನಮ್ಮ ಆಶಯವಲ್ಲ ಆದರೆ ಚುಟುಕು ಸಾಹಿತ್ಯ ಕೃತಿಗಳನ್ನು ಆಯ್ಕೆ ಮಾಡಿ ಕೊಳ್ಳ ಬೇಕು. ಸಂಬoಧಿಸಿದವರು ಇದನ್ನು ಪುನರ್ ಪರಿಶೀಲಿಸಿ ಸೂಕ್ತ ಆಯ್ಕೆ ಸಮಿತಿಯನ್ನು ನೇಮಿಸಿ ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಿಗೆ ಸಂಬoಧಿಸಿದ ಕೃತಿಗಳನ್ನು ಸಮ ಪ್ರಮಾಣದಲ್ಲಿ ಆಯ್ಕೆ ಮಾಡಿಕೊಳ್ಳಬೇಕು.ಆಯ್ಕೆಮಾಡಿಕೊಳ್ಳದಿದ್ದರೆ ಆಯ್ಕೆ ಮಾಡದಿರಲು ಕಾರಣಗಳನ್ನು ನೀಡಬೇಕೆಂದು ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬಾ. ನಂ.ಲೋಕೇಶ್ ಆಗ್ರಹಿಸಿದ್ದಾರೆ.
———————ಮೂರ್ತಿ