ಹಾಸನ;ಜೀವನಜ್ಯೋತಿ ಒಕ್ಕೂಟದ 25 ನೇ ವಾರ್ಷಿಕೋತ್ಸವ-ಜೀವನಜ್ಯೋತಿ ಸ್ತ್ರೀ ಶಕ್ತಿ ಸೌಹಾರ್ದ ಸಹಕಾರಿ ನಿಯಮಿತದ 3 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ

ಹಾಸನ;ಜೀವನಜ್ಯೋತಿ ಒಕ್ಕೂಟದ 25 ನೇ ವಾರ್ಷಿಕೋತ್ಸವ ಮತ್ತು ಜೀವನಜ್ಯೋತಿ ಸ್ತ್ರೀ ಶಕ್ತಿ ಸೌಹಾರ್ದ ಸಹಕಾರಿ ನಿಯಮಿತದ 3 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ಹಾಸನದ ಸಂತ ಅಂತೋಣಿಯವರ ದೇವಾಲಯದ ಆವರಣದಲ್ಲಿ ಜೀವನಜ್ಯೋತಿ ಸ್ತ್ರೀ ಶಕ್ತಿ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷೆ ಭಾಗ್ಯಮೇರಿ ರವರ ಅಧ್ಯಕ್ಷತೆಯಲ್ಲಿ ಜರುಗಿತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಫಾ. ಪ್ಯಾಟ್ರಿಕ್‌ಜೆ. ರಾವ್, ಮಹಿಳೆಯು ತನ್ನ ಜೀವತಾವಧಿಯಲ್ಲಿ ಹಲವಾರು ಜವಾಬ್ಧಾರಿಯನ್ನು ನಿರ್ವಹಿಸುತ್ತಾಳೆ. ಹೆಣ್ಣಿನ ಮಹತ್ವವನ್ನು ಅರಿಯಬೇಕಾದದ್ದು ಇಂದಿನ ದಿನಗಳಲ್ಲಿ ಅಗತ್ಯವಿರುವುದರಿಂದ ಹೆಣ್ಣು ಹೇಗೆ ಕುಟುಂಬವನ್ನು ನಿರ್ವಹಿಸಿ ಸಮಾಜವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಿದ್ದಾಳೆ ಎಂಬುದನ್ನು ತಿಳಿದು ಗೌರವಿಸಬೇಕು ಎಂದರು.

ಸಿ.ಎಮ್.ಎಸ್.ಎಸ್.ಎಸ್.‌ಸಂಸ್ಥೆಯ ನಿರ್ದೇಶಕ ಫಾ. ಶಾಂತರಾಜ್‌ಆರ್.ರವರು ಮಾತನಾಡಿ, 1978 ರಲ್ಲಿ ನಮ್ಮ ಸಂಸ್ಥೆಯು ನೋಂದಣಿಯಾಗಿ ಇಂದಿನವರೆಗೂ ಸಮಾಜದಲ್ಲಿ ಯಾವ ಜಾತಿ ,ಮತ, ಬೇಧ-ಭಾವವಿಲ್ಲದೆ ಪ್ರೀತಿಯಿಂದ ಸೇವೆ ಮಾಡುತ್ತಿದೆ. ಹಲವಾರು ಬಡ ಕುಟುಂಬಗಳಿಗೆ ಆರ್ಥಿಕ ಸ್ವಾವಲಂಬನೆಯಲ್ಲಿ ಸಂಸ್ಥೆಯು ತನ್ನದೇ ಆದ ನಿಸ್ವಾರ್ಥ ಸೇವೆ ನೀಡುತ್ತಿದೆ ಎಂದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅನುಪಮ ಕೆ ಆರ್ ಮಾತನಾಡಿ, ಸಿ ಎಂ ಎಸ್ ಎಸ್ ಎಸ್ ಸಂಸ್ಥೆಯು ಸಾಗರವಿದ್ದಂತೆ.ಈ ಸಂಸ್ಥೆಯು ಎಲ್ಲ ರಂಗಗಳಲ್ಲೂ ಕಾರ್ಯ ನಿರ್ವಹಿಸುವುದನ್ನು ಇಲ್ಲಿ ಭಾಗವಹಿಸುತ್ತಿರುವ ಮಹಿಳೆಯರನ್ನು ನೋಡಿದರೆ ಅರ್ಥವಾಗುತ್ತದೆ.ಈ ಸಂಸ್ಥೆಯು ಎಲ್ಲಾ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಆಯಾ ಫಲಾನುಭವಿಗಳಿಗೆ ದೊರಕುವಂತೆ ಮಾಡಲು ಸಾಕಷ್ಟು ಶ್ರಮಿಸುತ್ತಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಸಿ .ಎಮ್.ಎಸ್.ಎಸ್. ನಿಯೋಜಿತ ನಿರ್ದೇಶಕರಾದ ಫಾ. ಆಲ್ವಿನ್ ಡಿʼಸೋಜಾ, ಜೀವನಜ್ಯೋತಿ ಒಕ್ಕೂಟದ ಅಧ್ಯಕ್ಷೆ ಲೈಸಾ ಜಾಯ್, ಉಪಾಧ್ಯಕ್ಷೆ ನೇತ್ರಾವತಿ, ಜೀವನಜ್ಯೋತಿ ಹಾಗೂ ಸ್ತ್ರೀ ಶಕ್ತಿ ಸೌಹಾರ್ದ ಸಹಕಾರಿ ನಿಯಮಿತದ ಉಪಾಧ್ಯಕ್ಷೆ ಪ್ರಮೀಳಾ, ಲಿಡಿಯ ಕ್ರಿಸ್ಟಿನಾ ಹಾಗೂ ಇನ್ನಿತರರು ಹಾಜರಿದ್ದರು.

—————————–ಮೂರ್ತಿ

Leave a Reply

Your email address will not be published. Required fields are marked *

× How can I help you?