ಹಾಸನ-ಡೈರಿ ವೃತ್ತದಿಂದ ಸಾಲಗಾಮೆ ಕಡೆ ಹೋಗುವ ಏಕ ಮುಖ ಸಂಚಾರಿ ಮಾರ್ಗದಲ್ಲಿ ದಿನಾಂಕ ಜ.3ರ ಶುಕ್ರವಾರ ಬೆಳಿಗ್ಗೆ 9 ಗಂಟೆ ಸಮಯದಲ್ಲಿ ಕಾಲೇಜು ಕೆಲಸಕ್ಕೆ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ತೆರಳುತ್ತಿದ್ದ ಶಿಕ್ಷಕರೊಬ್ಬರಿಗೆ ಸಾರಿಗೆ ವಾಹನ ತರಬೇತಿ ಕೇಂದ್ರದ ಬಳಿ ಒನ್ ವೇ ನಲ್ಲಿ ಎದುರಿನಿಂದ ರಾಂಗ್ ವೇ ನಲ್ಲಿ ಬಂದ ಕೆಎ13ಇಕ್ಯೂ111 ಟಿ.ವಿ.ಎಸ ಸ್ಕೂಟರ್ ಗುದ್ದಿದ ಪರಿಣಾಮ ಶಿಕ್ಷಕರು ವಾಹನದಿಂದ ಹಾರಿಬಿದ್ದು ಇಪ್ಪತ್ತು ಅಡಿ ಉರುಳಿಕೊಂಡು ಹೋಗಿ ಕಾಲಿನ ಎರಡು ಮಂಡಿ ಮತ್ತು ಕೈಗಳಿಗೆ ಗಾಯವಾಗಿದೆ.
ವಾಹನದಿಂದ ಬಿದ್ದ ಪರಿಣಾಮವಾಗಿ ಸೊಂಟದ ಮೂಳೆಗೆ ಪೆಟ್ಟಾಗಿದ್ದು ಅಲ್ಲಿ ಸೇರಿದ ಜನರು ಎತ್ತಿ ಕೂರಿಸಿ ಆಂಬುಲೆನ್ಸ್‌ನಲ್ಲಿ ಮಂಗಳ ಆಸ್ಪತ್ರೆ ಗೆ ಕಳಿಸಿದರು.
ಒನ್ ವೇ ನಲ್ಲಿ ರಾಂಗ್ ಸೈಡ್ ನಿಂದ ಬಂದು ಗುದ್ದಿದ ಚಾಲಕ ಮತ್ತು ಅವರ ಪೋಷಕರು ಶಿಕ್ಷಕರ ಕುಟುಂಬದವರಾಗಿದ್ದರೂ ಮಾನವೀಯತೆ ಮರೆತು ಗಾಯಾಳುವಿಗೆ ಚಿಕಿತ್ಸೆ ಕೊಡಿಸದೆ ಗಲಾಟೆ ಮಾಡಿರುವುದಲ್ಲದೆ ಪೊಲೀಸರ ಜೊತೆಯಲ್ಲಿ ಗಾಡಿ ಯಾಕೆ ಸೀಜ್ ಮಾಡಿರುವಿರಿ ನಿಮಗೇನು ಅಧಿಕಾರವಿದೆ ಎಂದು ದರ್ಪ ತೋರಿದ್ದಾರೆ ಎಂದು ತಿಳಿದುಬಂದಿದೆ.
ಕನಿಷ್ಠ ಮಾನವೀಯತೆಯಿಲ್ಲದೆ ಗಾಯಾಳುವಿಗೆ ಚಿಕಿತ್ಸೆ ಕೊಡಿಸದೆ ಇರುವುದು ಮಾನವ ಸಮಾಜಕ್ಕೆ ಅವಮಾನ ಕರ ಸಂಗತಿಯಾಗಿದ್ದು, ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.