ಹಾಸನ-ಅಹಿಂದ ಚಳುವಳಿ-ಪದಾಧಿಕಾರಿಗಳ ಆಯ್ಕೆ-ಸಭೆ

ಹಾಸನ: ರಾಜ್ಯ ಸಮಿತಿಯ ಮುಖ್ಯ ಸಂಚಾಲಕರಾದ ಎಸ್ . ಮೂರ್ತಿ ಅವರ ನಿರ್ದೇಶನದ ಮೇರೆಗೆ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಅಹಿಂದ ಚಳುವಳಿಯ ಜಿಲ್ಲಾ ಘಟಕದ ಪದಾಧಿಕಾರಿಗಳ ಆಯ್ಕೆ ಕುರಿತು ಸಂಘಟನೆಯ ರಾಜ್ಯ ಜಂಟಿ ಸಂಚಾಲಕರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಜಗದೀಶ್ ಚೌಡವಳ್ಳಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕರ್ತರ ಸಭೆ  ನಡೆಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಹಿಂದ ಸಮುದಾಯಗಳ ಬದುಕನ್ನು ಬದಲಾಯಿಸಲು ಈ ಸಂಘಟನೆ ಕೆಲಸ ಮಾಡಲಿದೆ, ಸಂಘಟನೆ ಉದ್ಯೋಗ ಅಲ್ಲ ಇದೊಂದು ಸಾಮಾಜಿಕ ಜವಾಬ್ದಾರಿಯಾಗಿದೆ ಯಾವುದೇ ವೇತನ ಭತ್ಯಗಳನ್ನು ಅಪೇಕ್ಷಿಸದೆ ಸಂಘಟನೆ ಮುಖಂಡರು ಕೆಲಸ ಮಾಡಲಿದ್ದಾರೆ ಎಂದರು.

ಹಾಸನ ಜಿಲ್ಲೆಯಲ್ಲಿ ಅಹಿಂದ ಸಮುದಾಯಗಳ ಆರ್ಥಿಕ ಶಕ್ತಿಯಾಗಿ ಅಹಿಂದ ಸಬಲೀಕರಣ ಸೌಹಾರ್ದ ಸಹಕಾರ ಸಂಘ ನಿಯಮಿತ ಅಥವಾ ಬ್ಯಾಂಕ್ ಸ್ಥಾಪನೆ ಮಾಡಲು ಸಂಘಟನೆ ಮುಂದಾಗಿದ್ದು ಅದಕ್ಕಾಗಿ ಷೇರುದಾರರನ್ನು ಗುರುತಿಸಿ, ಸಂಗ್ರಹಿಸಿದ ಷೇರು ಹಣವನ್ನು ಬ್ಯಾಂಕ್ ಮೂಲಕ ಪಾವತಿಸಿ ಪಾರದರ್ಶಕ ವ್ಯವಹಾರಕ್ಕೆ ಸಂಘಟನೆ ಮುಂದಾಗಿದೆ ಎಂದರು.

oplus_0

ಜಿಲ್ಲೆಯಾದ್ಯಂತ ಅಹಿಂದ ಚಳುವಳಿ ಸಂಘನೆ ಮೂಲಕ ಸಂಘಟನೆ ಬೈಲಾ ಉದ್ದೇಶಗಳನ್ನು ಈಡೇರಿಸುವ ಹಾಗೂ ರಾಜ್ಯ ಮುಖ್ಯ ಸಂಚಾಲಕರು ಹಾಗೂ ರಾಜ್ಯ ಸಮಿತಿಗೆ ವರದಿ ನೀಡುವ ಮೂಲಕ ಸಂಘಟನಾತ್ಮಕ ಹಾಗೂ ಆರ್ಥಿಕ ಸಬಲೀಕರಣಕ್ಕೆ ಸಂಘಟನೆ ಕೆಲಸ ಮಾಡುತ್ತಿದೆ ಎಂದರು.

ಇದೆ ವೇಳೆ ಎಲ್ಲಾ ಸಮುದಾಯಕ್ಕೂ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಸಣ್ಣ – ಸಣ್ಣ  ಸಮುದಾಯಗಳ ಮುಖಂಡರನ್ನು ಗುರುತಿಸಿ ಅವರಿಗೆ ಜವಾಬ್ದಾರಿಗಳನ್ನು ನೀಡಲಾಯಿತು, ಜಿಲ್ಲಾ ಮುಖ್ಯ  ಸಂಚಾಲಕರುಗಳಾಗಿ ಎಸ್.ಆರ್ ಲೋಕೇಶ್, ಎ.ಬಿ ಪ್ರಕಾಶ್ ಮತ್ತು ಮಹಿಳಾ ವಿಭಾಗದ ಸಂಚಾಲಕರಾಗಿ ಕೆ.ಆರ್ ರೂಪ ಅವರನ್ನು ಆಯ್ಕೆ ಮಾಡಿ ಘೋಷಿಸಿದರು.

ಜಿಲ್ಲಾ ಸಂಚಾಲಕರಾಗಿ  ಕೃಷ್ಣ, ಹಬೀಬ್ ವುಲ್ಲಾ, ನಾಗರಾಜು, ಕಿರಣ್ ,ಪ್ರೇಮ್ ಕುಮಾರ್, ದೇವರಾಜು ಹೊಂಗೆರೆ, ಮಂಜುನಾಥ್, ಸಂತೋಷ್ ಕುಮಾರ್, ರವಿ ಅರೆಕೆರೆ, ಸತೀಶ್ ಕಬ್ಬಳಿ, ಎಂ.ಜೆ ಸಂಜೀವ, ಶಿವಣ್ಣ MS ಮಾರನಹಳ್ಳಿ, ಗೋವಿಂದರಾಜು, ಸತ್ಯರಾಜು, ಶಿವಪ್ಪ ನಾಯ್ಕ, ಶಿವಣ್ಣ, ಕುಮಾರ್ ಶೆಟ್ಟಿ, ರಮೇಶ್, ಸೋಮೇಶ್, ಚಾಂದಿನಿ, ಪ್ರದೀಪ್ ಕಬ್ಬಳಿ, ದಿನೇಶ್, ಜವರ ಬೋವಿ, ದೇವರಾಜು ಅವರುಗಳನ್ನು ಆಯ್ಕೆ ಮಾಡಲಾಯಿತು.

Leave a Reply

Your email address will not be published. Required fields are marked *

× How can I help you?