ಹಾಸನ-ಮೂರ್ಛೆ-ರೋಗದ-ಬಗ್ಗೆ-ಇರುವ-ಮೂಡನಂಬಿಕೆ- ಹೋಗಲಾಡಿಸಿ-ಜಿಲ್ಲಾ ಪಂಚಾಯಿತಿ-ಮುಖ್ಯ-ಕಾರ್ಯ-ನಿರ್ವಾಹಕ ಅಧಿಕಾರಿ-ಪೂರ್ಣಿಮ ಬಿ.ಆರ್

ಹಾಸನ-ಸಾಮಾನ್ಯ ಜನರಿಗೆ ಮೂರ್ಛೆ ರೋಗದ ಬಗ್ಗೆ ಇರುವ ಮೂಡನಂಬಿಕೆಯನ್ನು ಹೋಗಲಾಡಿಸಿ ಸರಿಯಾದ ತಿಳುವಳಿಕೆ ನೀಡುವುದು ಮತ್ತು ಮೂರ್ಛೆ ರೋಗದ ವ್ಯಕ್ತಿಯು ಸಾಮಾನ್ಯರಂತೆ ಜೀವನ ನಡೆಸಲು ಸಹಾಯ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪೂರ್ಣಿಮ ಬಿ.ಆರ್ ತಿಳಿಸಿದ್ದಾರೆ.

ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮ ಇವರುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಅಪಸ್ಮಾರ ದಿನ-2025 ಕ್ಕೆ ಸಂಬಂಧಿಸಿದ ಆರೋಗ್ಯ ಶಿಕ್ಷಣ ಸಾಮಾಗ್ರಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಜಿಲ್ಲಾ ಪಂಚಾಯತ್ ಡಿಆರ್ ಡಿ ಎ ಶಾಖೆಯ ಯೋಜನಾ ನಿರ್ದೇಶಕರಾದ ಚಂದ್ರಮೌಳಿ ವೈ.ಎನ್. ಮಾತನಾಡಿ ಮೂರ್ಚೆ ರೋಗದ ಬಗ್ಗೆ ಜನಸಾಮಾನ್ಯರಲ್ಲಿ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ ಸಕಾಲದಲ್ಲಿ ವೈದ್ಯರ ನೆರವು ಮತ್ತು ಚಿಕಿತ್ಸೆ ಪಡೆದಲ್ಲಿ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಎಂಬುದಾಗಿ ತಿಳಿಸಿದರು.

ಜಿಲ್ಲಾ ಪಂಚಾಯತ್ ಡಿಆರ್ ಡಿ ಎ ಶಾಖೆಯ ಸಹಾಯಕ ಯೋಜನಾಧಿಕಾರಿಗಳಾದ ಸುನೀತಾ ಎ.ಎಸ್ ಮಾತನಾಡಿ ಗ್ರಾಮೀಣ ಮಟ್ಟದಲ್ಲಿ ಸ್ವ ಸಹಾಯ ಸಂಘಗಳ ಸದಸ್ಯರುಗಳ ಸಭೆಗಳಲ್ಲಿ ಮೂರ್ಛೆ ರೋಗದ ಬಗ್ಗೆ ಮಾಹಿತಿಯನ್ನು ನೀಡಿ ಈ ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆಯನ್ನು ಕೊಡಿಸುವುದು, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿಗಳಾದ ಡಾ|| ನಾಗೇಶ್ ಪಿ ಆರಾಧ್ಯ ರವರು ಮಾತನಾಡಿ ೨೦೨೫ರ ಘೋಷ ವಾಕ್ಯವಾದ “ರೋಗಗ್ರಸ್ತತೆಯನ್ನು ಮೀರಿ ಅಪಸ್ಮಾರ ಅರಿವಿನೊಂದಿಗೆ ಜೀವನವನ್ನು ಸಶಕ್ತಗೊಳಿಸುವುದು”(Beyond the seizure empowering lives with epilepsy awareness) ಇದರ ಬಗ್ಗೆ ಮಾತನಾಡುತ್ತಾ ಈ ಖಾಯಿಲೆಗೆ ಬಹು ಮುಖ್ಯವಾಗಿ ಅರಿವಿನ ಅವಶ್ಯಕತೆ ಇದ್ದು ಇವತ್ತಿಗೂ ಸಹ ಮೂರ್ಛೆ ರೋಗದಿಂದ ಬಳಲುತ್ತಿರುವ ವ್ಯಕ್ತಿಗೆ ಕಬ್ಬಿಣದ ಕೀಲಿಯನ್ನೋ ಅಥವಾ ಕಬ್ಬಿಣದ ಸಲಾಖೆಯನ್ನು ಕೊಡುವ ಪ್ರವೃತ್ತಿಯು ಕಾಣಸಿಗುತ್ತದೆ, ಈ ತರಹದ ಮೂಡನಂಬಿಕೆಗಳನ್ನು ಹೋಗಲಾಡಿಸಿ ರೋಗದ ಬಗ್ಗೆ ಹಾಗೂ ಅದಕ್ಕೆ ಲಭ್ಯವಿರುವ ಚಿಕಿತ್ಸೆಯ ಬಗ್ಗೆ ವಿವರಿಸಿದರು.

ಹಾಸನ ವೈದ್ಯಕೀಯ ವಿದ್ಯಾಲಯದಲ್ಲಿ ಮೊದಲನೆ ಮಹಡಿ ಕೊಠಡಿ ಸಂಖ್ಯೆ 13ಡಿ ಇಲ್ಲಿ  Beyond the seizure empowering lives with epilepsy awareness) ಅದನ್ನು ಸ್ಥಾಪಿಸಿದ್ದು, ಇಲ್ಲಿ ವಿಶೇಷವಾಗಿ ಪಾರ್ಶ್ವ ವಾಯು, ಮೂರ್ಛೆ ರೋಗ, ತಲೆ ನೋವು ಮತ್ತು ಮರೆವಿನ ಖಾಯಿಲೆಗಳಿಗೆ ಚಿಕಿತ್ಸೆ ಲಭ್ಯವಿದ್ದು ಪ್ರತೀ ಮಂಗಳವಾರ ಮತ್ತು ಶುಕ್ರವಾರದಂದು ನರ ಶಸ್ತ್ರ ಚಿಕಿತ್ಸಕರು ಇವರು ಲಭ್ಯವಿತ್ತಾರೆ.

ಇದರ ಸಾರ್ವಜನಿಕರು ಸದುಉಪಯೋಗವನ್ನು ಪಡೆದುಕೊಳ್ಳಲು ತಿಳಿಸಿದರು. ಈ ವಿಭಾಗದಲ್ಲಿ ಫಿಜಿಯೋಥೆರಫಿ, ಸ್ಪೀಚ್ ಥೆರಫಿ, ಮತ್ತು ಸೈಕೋಥೆರಫಿ ಇಂತಹ ಸೌಲಭ್ಯಗಳು ಕೂಡ ಉಚಿತವಾಗಿ ಲಭ್ಯವಿರುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮ ಹಾಸನದ ಸಿಬ್ಬಂದಿ ವರ್ಗದವರು, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಸಿಬ್ಬಂದಿ ವರ್ಗದವರು ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಅಡಿಯಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ಕೆಲಸ ನಿರ್ವಹಿಸುತ್ತಿರುವ 50 ಕ್ಕೂ ಹೆಚ್ಚು ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?