ಹಾಸನ, ಮೇ 5: ಕಷ್ಟಗಳನ್ನು ಮೌನವಾಗಿ ದಾಟಬೇಕು, ಪರಿಶ್ರಮ ಸದ್ದಿಲ್ಲದೆ ಸಾಗಬೇಕು. ಯಶಸ್ಸು ಧ್ವನಿಯಾಗಿ ಕೇಳಿಸಬೇಕು. ದೇಹದ ರೂಪಕ್ಕಿಂತ ಬದುಕಿನ ರೂಪ ಹೆಚ್ಚು ಮುಖ್ಯ,” ಎಂದು ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಹೇಳಿದರು.
ಅವರು ಹಾಸನ ತಾಲೂಕು ಆಡಳಿತ ಭವನದ ಸಭಾಂಗಣದಲ್ಲಿ ನಡೆದ ಈ ಸಮಾರಂಭದಲ್ಲಿ ಲ್ಲಾ ಫೈನಾನ್ಸಿಯಲ್ ಅಸೋಸಿಯೇಶನ್ (ರಿ.) ಉದ್ಘಾಟನಾ ಸಮಾರಂಭವು ಪಾಲ್ಗೊಂಡು ಆಶೀರ್ವಾಚನ ನೀಡಿದರು.
ಕಾರ್ಯಕ್ರಮದಲ್ಲಿ ಸಾಮಾನ್ಯ ಜನರಿಗೆ ಲಭ್ಯವಿರುವ ಸಾಲ ಸೌಲಭ್ಯಗಳ ಬಗ್ಗೆ ವಿವರ ನೀಡಲಾಯಿತು. ಜೊತೆಗೆ, ಫೈನಾನ್ಸಿಯರ್‌ಗಳಿಗೆ ಆಗುವ ಕಾನೂನು ತೊಂದರೆಗಳನ್ನು ಪರಿಹರಿಸಲು ರಾಜ್ಯ ಅಸೋಸಿಯೇಶನ್ ನಿಂದ ಮಾರ್ಗದರ್ಶನ ಹಾಗೂ ಕಾನೂನು ನೆರವಿನ ಭರವಸೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಜಿಲ್ಲಾ ಫೈನಾನ್ಸಿಯರ್ ಅಸೋಸಿಯೇಶನ್ ಅಧ್ಯಕ್ಷರಾದ ಕೆ. ನಾಗೇಂದ್ರ ವಹಿಸಿದ್ದರು. ಅಖಿಲ ಕರ್ನಾಟಕ ಫೈನಾನ್ಸಿಯರ್ ಅಸೋಸಿಯೇಟ್ಸ್, ಬೆಂಗಳೂರು ಸಂಸ್ಥಾಪಕ ಮತ್ತು ಮಾಜಿ ಗೌರವಾಧ್ಯಕ್ಷರಾದ ಜಯರಾಮ ಸೂಡ, ರಾಜ್ಯಾಧ್ಯಕ್ಷ ಸಿ.ಕೆ. ಮೂರ್ತಿ, ಹಾಗೂ ಹಾಸನ ಜಿಲ್ಲೆಯ ವಿವಿಧ ತಾಲೂಕುಗಳ ಫೈನಾನ್ಸಿಯರ್ ಅಸೋಸಿಯೇಷನ್‌ಗಳ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.