ಹಾಸನ- ಸಮಾನತೆಯ-ಹರಿಕಾರ-ರೇಣುಕಾಚಾರ್ಯರ-ತತ್ವ- ಸಿದ್ಧಾಂತ-ಅನುಸರಿಸಿ-ಚನ್ನಸಿದ್ದೇಶ್ವರ-ಶಿವಚಾರ್ಯಸ್ವಾಮಿ-ಕರೆ


ಹಾಸನ – ಸ್ವಾತಂತ್ಯ ಪೂರ್ವದಲ್ಲೇ, ಮನುಕುಲದ ಉದ್ಧಾರಕ್ಕಾಗಿ, ಜನರಲ್ಲಿ ಸಮಾನತೆಯ ಹರಿಕಾರರಾಗಿ ಬಂದಂತಹ ರೇಣುಕಾಚಾರ್ಯರ ತತ್ವ ಸಿದ್ಧಾಂತಗಳನ್ನು ಎಲ್ಲರೂ ಅನುಸರಿಸಿ ನಡೆಯುವಂತೆ ಯಳಸೂರಿನ ತೆಂಕಲಗೋಡು ಬೃಹನ್ಮಠದ ಮಠಧ್ಯಕ್ಷರಾದ ಚನ್ನಸಿದ್ದೇಶ್ವರ ಶಿವಚಾರ್ಯಸ್ವಾಮಿಗಳು ಹೇಳಿದ್ದಾರೆ.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಾಸನಾಂಬ ಕಲಾಕ್ಷೇತ್ರದಲ್ಲಿಂದು ಆಯೋಜಿಸಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಗಸ್ತö್ಯ ಮಹರ್ಷಿಗಳ ಗೊಂದಲಗಳ ನಿವಾರಣೆ ಮಾಡಲು ರೇಣುಕಾಚಾರ್ಯರು ನೀಡಿದ ಉಪನ್ಯಾಸ, ಶ್ಲೋಕಗಳು ಸಿದ್ಧಾರ್ಥ ಶಿಕಾಮಣಿ ಪುಸ್ತಕವಾಗಿದೆ. ಬಸವಣ್ಣನವರು ಕೂಡಾ ರೇಣುಕಾಚಾರ್ಯರು ಹಾಕಿದ ಮಾರ್ಗದಲ್ಲೇ ಬಂದವರಾಗಿದ್ದಾರೆ ಎಂದರು. 

ಯಾರು ಸಮಾಜಕ್ಕಾಗಿ ನಿಸ್ವಾರ್ಥ ಸೇವೆ ಮಾಡುತ್ತಾರೋ, ಸಮಾಜದ ಉದ್ಧಾರಕ್ಕಾಗಿ ಹಗಲಿರುಳು ಶ್ರಮಿಸುತ್ತಾರೆ ಅಂತವರ ಜನ್ಮದಿನವನ್ನು ಜಯಂತಿಗಳಾಗಿ ಆಚರಿಸಲಾಗುತ್ತದೆ ಅಂತಹ ಮಹನೀಯರಲ್ಲಿ ರೇಣುಕಾಚಾರ್ಯರು ಒಬ್ಬರು ಎಂದು ತಿಳಿಸಿದರು.


ತಣ್ಣೀರು ಹಳ್ಳ ಮಠದ ಮಠಾಧೀಶರಾದ ವಿಜಯಕುಮಾರ್ ಸ್ವಾಮಿಗಳು ಮಾತನಾಡಿ ಧರ್ಮ ರಕ್ಷಣೆಗಾಗಿ ಅವತರಿಸಿ ಶಿವ ಜ್ಞಾನದ ಬೆಳಕನ್ನ ಬೀರುವ ಮೂಲಕ ಕರ್ಮವನ್ನು ಕಳೆದು ಧರ್ಮವನ್ನು ಬಿತ್ತಿ ಬದುಕನ್ನು ಬಂಗಾರ ಮಾಡಿದ ಕೀರ್ತಿ ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಇವರು ಸಂಸ್ಕಾರ ಸಂಸ್ಕೃತಿಯನ್ನು ಅರುಹಿದ ಯುಗಪುರುಷರಾಗಿದ್ದಾರೆ ಎಂದರು.


ಪುರುಷರಂತೆ ಮಹಿಳೆಯರಿಗೂ ಕೂಡ ಧಾರ್ಮಿಕ ಸ್ವಾತಂತ್ರ‍್ಯ ತಂದು ಕೊಟ್ಟವರಲ್ಲಿ ರೇಣುಕಾಚಾರ್ಯರು ಪ್ರಥಮರಾಗಿದ್ದಾರೆ. ಕಾಯಕ ಮತ್ತು ದಾಸೋಹ ಭಾವನೆಯ ಮೂಲಕ ಕ್ರಿಯಾತ್ಮಕ ಬದುಕಿಗೆ ಕರೆಕೊಟ್ಟವರಾಗಿದ್ದಾರೆ. ಲೋಕ ಕಲ್ಯಾಣ ಹಾಗೂ ವಿಶ್ವ ಶಾಂತಿಗಾಗಿ ಸದಾ ಕಾಲ ಶ್ರಮಿಸಿದವರಾಗಿದ್ದಾರೆ, ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯೋಣ ಎಂದು ಹೇಳಿದರು.


ಹಾಸನ ಪೊಲೀಸ್ ಉಪ ಅಧೀಕ್ಷಕರಾದ ಪಿ.ಕೆ ಮುರಳೀಧರ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಎಲ್ಲರಿಗೂ ಜಗದ್ಗುರು ರೇಣುಕಾಚಾರ್ಯ ಜಯಂತಿಯ ಶುಭಾಶಯಗಳನ್ನು ತಿಳಿಸಿದರಲ್ಲದೆ, ಇಂತಹ ಮಹನೀಯರ ಜಯಂತಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.


ಹಾಸನ ಗ್ರೇಡ್-2 ತಹಶೀಲ್ದಾರರಾದ ಹುಲಿವಾಲ ಮೋಹನ್ ಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ದ್ವೇಷ, ಅಸೂಯೆಗಳನ್ನು ಬಿಟ್ಟು ಶಾಂತಿ, ಸಹಬಾಳ್ವೆಯ ಮಹತ್ವವನ್ನು ಸಾರಿದವರು ರೇಣುಕಾಚಾರ್ಯರಾಗಿದ್ದಾರೆ ಎಂದರು.


ದೊಡ್ಡಗದ್ದೇವಳ್ಳಿಯ ವೇ.ಡಿ.ಎ. ದೇವರಾಜ್ ಶಾಸ್ತಿçà ಅವರು ಮಾತನಾಡಿ ಸ್ವಚ್ಛತೆಯನ್ನು ಬೋಧಿಸಿದ ಅಗ್ರಗಣ್ಯರಲ್ಲಿ ರೇಣುಕಾಚಾರ್ಯರು ಒಬ್ಬರಾಗಿದ್ದಾರೆ. ಯುಗ ಯುಗಗಳಲ್ಲಿ ಅವತಾರವೆತ್ತಿ ಬಂದಿದ್ದಾರೆ. ಇವರು ಲಿಂಗದ ಸ್ವರೂಪದಲ್ಲಿದ್ದಾರೆ. ನಾಲ್ಕೂ ಯುಗದಲ್ಲಿಯೂ ಇದ್ದವರಾಗಿದ್ದಾರೆ. ಯಾವುದೇ ರೀತಿಯ ಜಾತಿ, ಧರ್ಮ, ಲಿಂಗ ತಾರತಮ್ಯವಿಲ್ಲದೆ ಎಲ್ಲರಿಗಾಗಿ ಹದಿನೆಂಟು ಮಠಗಳನ್ನು ಕಟ್ಟಿಸಿದ್ದಾರೆ. ಹಾಸನಕ್ಕೂ ರೇಣುಕಾಚಾರ್ಯರು ಬಂದಿದ್ದರ ಕುರಿತು ಮಾಹಿತಿಗಳಿವೆ, ಬಹಳಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ ಎಂದು ಸವಿವರವಾಗಿ ಉಪನ್ಯಾಸ ನೀಡಿದರು


ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಚ್.ಪಿ ತಾರಾನಾಥ್, ಹಾಸನದ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಹಶೀಲ್ದಾರರಾಗಿರುವ ಎಲ್.ಎಸ್ ರಮೇಶ್, ಹಾಸನ ನೌಕರರ ಸಂಘದ ಅಧ್ಯಕ್ಷ ಬಿ.ಪಿ ಕೃಷ್ಣೇಗೌಡ, ಹಾಸನ ನೌಕರರ ಸಂಘದ ಗೌವಾಧ್ಯಕ್ಷ ಈ.ಕೃಷ್ಣೇಗೌಡ ಹಾಗೂ ಸಮುದಾಯದ ಇತರ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?