ಹಾಸನ: ಬೆಂಗಳೂರಿನ ಬಿ.ಎಂ.ಎಸ್ ಇಂಜಿನಿಯರಿoಗ್ ಕಾಲೇಜಿನ ವಿದ್ಯಾರ್ಥಿ ಪ್ರಜ್ವಲ್,ಪ್ರಾಧ್ಯಾಪಕ ಡಾ.ಸಿ.ಆರ್. ರಾಮಕೃಷ್ಣಯ್ಯ ಅವರ ಮಾರ್ಗದರ್ಶನದಲ್ಲಿ ಹಾಸನ ನಗರಕ್ಕಾಗಿ ತ್ಯಾಜ್ಯ ನೆಲಹಾಸುವ ಸ್ಥಳ ಆಯ್ಕೆ ಮತ್ತು ಮಾರ್ಗ ಸುಧಾರಣೆ ಎಂಬ ಯೋಜನಾ ವರದಿಯನ್ನು ಹಾಸನ ನಗರ ಪಾಲಿಕೆಗೆ ಸಲ್ಲಿಸಿದರು.
ಈ ವರದಿಯನ್ನು ನಗರಪಾಲಿಕೆ ಅಧ್ಯಕ್ಷ ಎಂ.ಚoದ್ರೇಗೌಡ ಹಾಗೂ ನಗರಸಭಾ ಸದಸ್ಯ ವಾಸುದೇವ್ ಅವರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.
ಈ ಯೋಜನೆಯು ತ್ಯಾಜ್ಯ ನಿರ್ವಹಣೆ ಸುಧಾರಣೆ ಮತ್ತು ದಕ್ಷ ಸಾರಿಗೆ ಮಾರ್ಗಗಳ ಅಭಿವೃದ್ಧಿಯ ಉದ್ದೇಶ ಹೊಂದಿದೆ. ಈ ವೇಳೆ ಸದಸ್ಯ ಮಂಜುನಾಥ್, ಇಂಜಿನಿಯರ್ ಕೆ.ಆರ್.ಕವಿತಾ ಮೊದಲಾದವರಿದ್ದರು.