
ಹಾಸನ-ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ರತ್ನ ವೈ.ಡಿ.ರವರವರಿಗೆ ಪಿ.ಹೆಚ್.ಡಿ ಪದವಿ ದೊರೆತಿದೆ.
ರತ್ನ ವೈ.ಡಿ ಮಂಡಿಸಿದ್ದ “AN ECONOMIC ANALYSIS OF POTATO PRODUCTION AND MARKETING: A STUDY OF HASSAN DISTRICT IN KARNATAKA ” ಎಂಬ ಮಹಾ ಪ್ರಬಂಧವನ್ನು ಅಂಗೀಕರಿಸಿರುವ ಮೈಸೂರು ವಿಶ್ವವಿದ್ಯಾಲಯವು ಪಿ.ಹೆಚ್.ಡಿ ಪದವಿ ನೀಡಿ ಗೌರವಿಸಿದೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ಇದರ ಅರ್ಥಶಾಸ್ತ್ರ ಮತ್ತು ಸಂಶೋಧನಾ ಅಧ್ಯಯನ ವಿಭಾಗದ ಪ್ರಾದ್ಯಾಪಕ ಡಾ.ಟಿ.ಪಿ ಶಶಿಕುಮಾರ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ್ದ ಮಹಾ ಪ್ರಬಂಧವನ್ನು ಸಿಂಡಿಕೇಟಿನಿಂದ ಕುಲಪತಿಗಳಿಗೆ ದತ್ತವಾದ ಅಧಿಕಾರಕ್ಕೆ ಅನುಗುಣವಾಗಿ ಮತ್ತು ಪರೀಕ್ಷಾ ಮಂಡಳಿಯ ಶಿಫಾರಸ್ಸಿನ ಮೇರೆಗೆ ಅಂಗೀಕರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ರತ್ನ ವೈ.ಡಿ ಯವರಿಗೆ ಪಿ.ಹೆಚ್.ಡಿ ಪದವಿ ದೊರೆತಿದ್ದಕ್ಕಾಗಿ ಕಾಲೇಜು ಆಡಳಿತ ಮಂಡಳಿ ಸಂತಸ ವ್ಯಕ್ತಪಡಿಸಿದೆ..
———–ಶ್ರುತಿ