ಹಾಸನ – ನಗರದ ಪ್ರತಿಷ್ಠಿತ ಆಸ್ಪತ್ರೆ ಜನಪ್ರಿಯ ಆಸ್ಪತ್ರೆಯ ‘ಜನಪ್ರಿಯೋತ್ಸವ, ಆಸ್ಪತ್ರೆಯ ಸಭಾಂಗಣದಲ್ಲಿ ಭಾನುವಾರ ರಾತ್ರಿ ವಿವಿಧ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರುಗಿತು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಅಬ್ದುಲ್ ಬಷೀರ್ ಪ್ರಾಸ್ತಾವಿಕವಾಗಿ ಮಾತನಾಡಿ, ಒಂದು ಆಸ್ಪತ್ರೆಯಲ್ಲಿ ಒಬ್ಬ ಸಾಮಾನ್ಯ ಸಿಬ್ಬಂದಿಯಿಂದ ಹಿಡಿದು ವೈದ್ಯಕೀಯ ತಂಡ ಸೇವೆಯಿಂದ ಈ ಆಸ್ಪತ್ರೆ ಬಡ ರೋಗಿಗಳ ಪಾಲಿನ ಸಂಜೀವಿನಿ ಯಾಗಿದೆ.ಹಾಸನ ಜನತೆಯ ಸಹಕಾರದಿಂದ ಇಂದು ಜನಪ್ರಿಯ ಆಸ್ಪತ್ರೆಯ ಯಶಸ್ವಿಯಾಗಿ 10 ವರ್ಷ ಪೂರೈಸಿಸಿ 11ನೇ ವರ್ಷಕ್ಕೆ ಕಾಲಿಟ್ಟಿದೆ ಎಂದರು.

ಈ ವೇಳೆ ಸಂಸ್ಥೆಯ ಬೆಳವಣಿಗೆ ಸಹಕರಿಸಿದ ಸಿಬ್ಬಂದಿಗಳನ್ನು ನೆನೆದು ಭಾವುಕರಾದರು. ಸಿಬ್ಬಂದಿಗಳ ಸೇವೆಯಿಂದಲೆ ಆಸ್ಪತ್ರೆ ದೊಡ್ಡಮಟ್ಟದಲ್ಲಿ ಬೆಳೆಯಲು ಸಾಧ್ಯವಾಗಿದೆ. ಯಾವುದೇ ಸಮಯ ಸಂದರ್ಭ ನೆಪ ಹೇಳದೆ ರೋಗಿಗಳ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ಜನ ಸೇವೆ ಜನಾರ್ಧನ ಸೇವೆ ಹೀಗೆ ಮುಂದುವರೆಯಲಿ ಎಂದು ತಿಳಿಸಿದರು.

ನಮ್ಮ ಜನಪ್ರಿಯ ಆಸ್ಪತ್ರೆಯೂ ಈಗಾಗಲೇ ಸುಮಾರು 750ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ ಹಾಸನ ಜಿಲ್ಲೆಯ ಜನರು ನಮಗೆ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ. ಆಸ್ಪತ್ರೆ ಪ್ರಾರಂಭವಾದ ದಿನದಿಂದಲೂ ಇಂದಿಗೂ ಸಮಾಜಕ್ಕೆ ನಮ್ಮ ಕೈಲಾದ ಸಹಾಯ ಮಾಡುತ್ತಾ ಬಂದಿದಿದ್ದೇವೆ.ಹಾಸನ ಜಿಲ್ಲೆಗೆ ಮೊದಲ ಬಾರಿ ನರರೋಗ ಚಿಕಿತ್ಸೆ, ಹೃದಯರೋಗ ಚಿಕಿತ್ಸಾ ವಿಧಾನ ಮೊದಲು ನಮ್ಮ ಆಸ್ಪತ್ರೆಯಲ್ಲಿ ಆರಂಭಿಸಿದ್ದು ಎಂದು ಹೇಳಲು ಹೆಮ್ಮೆ ಎನಿಸುತ್ತಿದೆ ಎಂದರು.
ಡಾಕ್ಟರ್ ಶಿವಪ್ರಸಾದ್ ಮಾತನಾಡಿ, ವೈದ್ಯರೆಂದರೆ ಡಾಕ್ಟರ್ ಬಷೀರ್ ಸರ್ ರೀತಿ ಇರಬೇಕು. ಕಾರಣ ಸಮಯ ಸಂದರ್ಭಮತ್ತು ನಿಖರವಾಗಿ ಸಾವುದಾನದಿಂದ ರೋಗಿಗಳಿಗೆ ವಿವರಣೆ ನೀಡುತ್ತದ್ದಾರೆ. 750ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದಾರೆ. ಕೋವಿಡ್ ಸಂಸ್ಥೆಯಲ್ಲಿ ಸಾಕಷ್ಟು ಪ್ರಾಣ ಉಳಿಸಿದ ಪುಣ್ಯ ನಿಜಕ್ಕೂ ಶ್ಲಾಘನೀಯ ಎಂದರು.

ಸಮಾಜ ಸೇವಕ ಎಸ್ ಎಸ್ ಪಾಷ ಅವರು ಮಾತನಾಡಿ, ಆಸ್ಪತ್ರೆ ಹೀಗೆ ಶತಕದತ್ತ ಯಶಸ್ವಿಯಾಗಿ ಸಾಗಲಿ, ಗ್ರಾಮೀಣ ಭಾಗದ ಜನರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ದೊರೆಯಲಿ. ಸಾರ್ವಜನಿಕರಿಗೆ ಭೂಮಿಯ ಮೇಲೆ ದೇವರ ರೂಪದಲ್ಲಿ ಇರುವುದು ವೈದ್ಯರು. ಆಸ್ಪತ್ರೆಯಲ್ಲಿ ಮಾತ್ರೆ ಚಿಕಿತ್ಸೆಗಿಂತ ಮಿಗಿಲಾಗಿದ್ದು ವೈದ್ಯರ ಹಾಗೂ ಸಿಬ್ಬಂದಿಗಳು ತಾಳ್ಮೆ. ಜನಪ್ರಿಯ ಆಸ್ಪತ್ರೆಯ ಮುಖ್ಯಸ್ಥರಾದ ಅಬ್ದುಲ್ ಬಷೀರ್ ಅವರು ಕೇವಲ ಆಸ್ಪತ್ರೆಯಲ್ಲಿ ಉತ್ತಮ ವೈದ್ಯರಾಗಿ ಕೆಲಸ ಮಾಡುವುದರ ಜೊತೆಗೆ ಸಾಮಾಜಿಕ ಸೇವೆ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಪಡುವ ವಿಚಾರ ಎಂದರು.

ಆಡಿಷನಲ್ ಎಸ್ಪಿ ವೆಂಕಟೇಶ್ ನಾಯ್ಡು ಮಾತನಾಡಿ, ಪೊಲೀಸ್ ಹಾಗೂ ವೈದ್ಯಕೀಯ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವವರು ದಿನದ ಇಪ್ಪತ್ತಾಲ್ಕು ಗಂಟೆಗಳ ಶ್ರಮ ಪಡುವವರು. ನಮ್ಮ ಸಮಯ ಈ ರೀತಿಯ ನಮಗಾಗಿ ಏರ್ಪಡಿಸಿದ್ದು ಉತ್ತಮ ಕಾರ್ಯಕ್ರಮವಾಗಿದೆ ಇಲ್ಲಿಯೇ ಚಿಕಿತ್ಸೆ ನೀಡಿ ಇದೇ ಆಸ್ಪತ್ರೆಯಲ್ಲಿ ಹಲವರಿಗೆ ವೈದ್ಯರು ಉದ್ಯೋಗ ನೀಡಿರುವುದು ಮಾನವೀಯತೆ ಹಿಡಿದ ಕನ್ನಡಿಯಾಗಿದೆ ಎಂದು ಆಸ್ಪತ್ರೆಯ ಕಾರ್ಯವೈಖರಿಯನ್ನು ಪ್ರಶಂಸೆ ಮಾಡಿದರು.

ಕಾರ್ಯಕ್ರಮ ಉದ್ಘಾಟನೆ ಮಾಡಿದ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾಕ್ಟರ್ ಶ್ರೀರಂಗ ಅವರು ಮಾತನಾಡಿ ಜನಪ್ರಿಯ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ಸೇವೆಯನ್ನು ಗುಣಗಾನ ಮಾಡಿದರು. ಇನ್ನು ಡಾ|| ಬಷೀರ್ ಅವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ನಾಲ್ವರಿಗೆ ‘ಜನಪ್ರಿಯ ಸೇವಾ ಸಿರಿ’ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಜನಪ್ರಿಯ ಬಳಗದಿಂದ ಮನರಂಜನ ಕಾರ್ಯಕ್ರಮಗಳು ಜರುಗಿದ್ದು ನೋಡುಗರನ್ನು ರಂಜಿಸಿದರು. ಇದೇ ವೇಳೆ ಕ್ರೀಡಾಕೂಟದಲ್ಲಿ ವಿಜೇತರಾದ ಆಸ್ಪತ್ರೆಯ ಸಿಬ್ಬಂದಿಗಳಿಗೆ ಬಹುಮಾನ ನೀಡಿದರು. ಆಸ್ಪತ್ರೆಯಲ್ಲಿ 10 ವರ್ಷಕ್ಕೂ ಅಧಿಕ ಸೇವೆ ಮಾಡಿದರನ್ನು ಗೌರವಿಸಲಾಯಿತು.ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ ಸಿಬ್ಬಂದಿಗಳಿಗೆ ಬಿಳ್ಕೊಡುಗೆ ನೀಡಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು. ಆಸ್ಪತ್ರೆಯ ವೈದ್ಯರು ಸಿಬ್ಬಂದಿಗಳು ಹಾಜರಿದ್ದರು.
– ನೂರು