ಹಾಸನ:ವೈಜ್ಞಾನಿಕ ಸಮ್ಮೇಳನದ ಅಂಗವಾಗಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ಕೊಡಮಾಡುವ ರಾಜ್ಯ ಮಟ್ಟದ ‘ಚೈತನ್ಯ ಪ್ರಶಸ್ತಿ’ಗೆ ಎಚ್.ಸಿ ನಂದಿನಿ, ಹಾಗೂ ಹೆಚ್.ಎನ್ ಗಂಗೇಗೌಡ ಆಯ್ಕೆಯಾಗಿದ್ದಾರೆ.
ಡಿ.28 ಮತ್ತು 29 ರಂದು ಬೆಂಗಳೂರಿನ ಯಲಹಂಕ ಬಾಗಲೂರು ವಿ.ಜೆ ಇಂಟರ್ನಾಷನಲ್ ಶಾಲಾ ಮೈದಾನದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನದಲ್ಲಿ ಇಬ್ಬರಿಗೂ ಸನ್ಮಾನಿಸಿ ಗೌರವಿಸಲಾಗುವುದು ಎಂದು ವೈಜ್ಞಾನಿಕ ಸಂಶೋಧನಾ ಪರಿಷತ್ ನ ಜಿಲ್ಲಾಧ್ಯಕ್ಷ ಯು.ಜೆ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.