ಹಾಸನ-ರಾಮಮಂದಿರ-ಮೈದಾನವೀಗ-ಅನೈತಿಕ-ಚಟುವಟಿಕೆಗಳ- ಹಾಟ್‌-ಸ್ಪಾಟ್

ಹಾಸನ – ದೇವಾಲಯವೆಂದರೆ ಪವಿತ್ರ  ಸ್ಥಳ. ದೇವಾಲಯದ ಸುತ್ತಮುತ್ತಲೂ  ಅದೇ ಪಾವಿತ್ರತೆ ಕಾಪಾಡಿಕೊಂಡು ಧಾರ್ಮಿಕ ಆಚರಣೆಯನ್ನು ಮಾಡಿಕೊಂಡು ಬರುತ್ತಿದ್ದೇವೆ. ಆದರೆ  ದೇವಾಲಯದ ಎದುರಿನ ಮೈದಾನವೇ ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎಂದರೆ ನಂಬಿತ್ತೀರಾ….?

ಹೌದು ನಂಬಲೇಬೇಕಾದ ಸಂಗತಿಯೊಂದು ಬೆಳಕಿಗೆ ಬಂದಿದೆ. ಹಾಸನದ ಎಂ.ಜಿ ರಸ್ತೆ ಹಾಗೂ ಆರ್.ಸಿ.ರಸ್ತೆಯ  ಹೃದಯಭಾಗದಲ್ಲಿರುವ ರಾಮಮಂದಿರದ ಮುಂಭಾಗದ  ಮೈದಾನ ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಡಾಗಿದೆ.  ಹಗಲು ರಾತ್ರಿಯೆನ್ನದೇ   ಈ ಮೈದಾನ  ಪುಂಡರ  ಹಾವಳಿಯಿಂದ ಇಲ್ಲಿನ ನಿವಾಸಿಗಳು ಬೇಸತ್ತಿದ್ದಾರೆ. ಎಲ್ಲಿ ನೋಡೊದರಲ್ಲಿ ಸಿಗೇರೆಟ್‌ – ಮಧ್ಯಪಾನದ ಪ್ಯಾಕ್‌, ಬಾಟಲಿಗಳು ಅಲ್ಲದೇ ಕಾಂಡೋಮ್‌ ಪ್ಯಾಕ್‌ ಗಳು ಕಾಣ ಸಿಗುತ್ತಿದೆ.

ಮೈದಾನದಲ್ಲಿ ತಲೆ ಎತ್ತಿದೆ ಅನಾಮಧೇಯ ಶೆಡ್‌ -ಅಧಿಕಾರಿಗಳ ನಿರ್ಲಕ್ಷ

ರಾಮ ಮಂದಿರ ಎದರಿನ ಮೈದಾನದ ಮೂಲೆಯಲ್ಲೊಂದು ಅನಾಮಧೇಯ ಶೆಡ್‌ ನಿರ್ಮಾಣವಾಗಿದೆ.  ಶೆಡ್‌ ಒಳಹೊಕ್ಕರೆ, ಸಿಗೇರೆಟ್‌ – ಮಧ್ಯಪಾನದ ಪ್ಯಾಕ್‌, ಬಾಟಲಿಗಳು ಅಲ್ಲದೇ ಕಾಂಡೋಮ್‌ ಪ್ಯಾಕ್‌ ಎಲ್ಲೆಂದರಲ್ಲಿ ಬಿದ್ದಿರುವುದು ಕಾಣ ಸಿಗುತ್ತದೆ.ರಾಮ ಮಂದಿರ  ಸುತ್ತಾ-ಮುತ್ತಾ   ಪಿ.ಡಬ್ಲೂ ಡಿ ಕ್ವಾರರ್ಸ್‌ಗಳಿದ್ದು, ಹೊಸ  ಕಟ್ಟಣ ನಿರ್ಮಾಣ ಕಾರ್ಯವು ನಡೆಯುತ್ತಿದೆ. ಕಟ್ಟಣ ನಿರ್ಮಾಣ ಕಾರ್ಮಿಕರಿಗಾಗಿ  ಮೈದಾನದ ಮೂಲೆಯಲ್ಲಿ  ಶೆಡ್‌ ನಿರ್ಮಾಣ ಮಾಡಿದ್ದರು, ಎನ್ನಲಾದ ಶೆಡ್‌ ಈಗ ಅನೈತಿಕ ಚಟುವಟಿಕೆ ನಡೆಸಲು  ಇನ್ನೂ ಸುಲಭವಾದಂತಾಗಿದೆ.   ಯಾವುದೇ ಉಪಯೋಗಕ್ಕೂ ಬಾರದೇ ಇರುವ ಈ ಶೇಡ್‌ನ್ನು ತೆರವುಗೊಳಿಸುವಂತೆ , ಪಿ ಡಬ್ಲೂ ಡಿ ಕಛೇರಿಯ ಅಧಿಕಾರಿಗಳಲ್ಲಿ ಮನವಿ ಮಾಡಿದರೇ, ನಮ್ಮ ಸುಪರ್ದಿಗೆ ಬರುವುದಿಲ್ಲವೆಂದು ಹಾರಿಕೆಯ ಉತ್ತರ ನೀಡುತ್ತಾರೆ. ಇನ್ನೂ  ಕಟ್ಟಡ  ನಿರ್ಮಾಣ ಕಾರ್ಮಿಕರ ಬಳಿ ವಿಚಾರಿಸಿದರೆ,  ನಮಗೆ ತಿಳಿದಿಲ್ಲ, ನಮಗೆ ಗೊತ್ತಿಲ್ಲ ಎನ್ನುತ್ತಾರೆ.  ಒಟ್ಟಾರೆ  ಈ ಅನಾಮಧೇಯ ಶೆಡ್‌  ಪುಂಡರಿಗೆ ಮನೆ ಮಾಡಿ ಕೊಟ್ಟಂತಾಗಿದೆ. 

ಭದ್ರತೆಯ ಕೊರತೆ

ರಾತ್ರಿ ಹಗಲೇನ್ನದೇ ಪುಂಡರ ಹಾವಳಿ ಹೆಚ್ಚುತ್ತಿದ್ದು,  ಪೊಲೀಸ್‌ ರಿಗೆ ಕರೆ ಮಾಡಿದರೆ, ಕಂಪ್ಲೇಟ್‌ ಕೊಡಿ ಅಂತಾರೇ,  ಅಹಿತಕರ  ಚಟುವಟಿಕೆ ನಡೆಯುವಾಗ 112 ಗೆ ಕರೆ ಮಾಡಿ ಬರುತ್ತೇವೆ ಎಂದು ಬೇಜಾವಾಬ್ದಾರಿ ಉತ್ತರ ನೀಡುತ್ತಾರೆ.  ಅಹಿತಕರ ಘಟನೆ ನಡೆಯವ ಮುನ್ನ ಆ ಘಟನೆಗಳು ಸಂಭವಿಸಿದಂತೆ ನೋಡಿಕೊಳ್ಳಬೇಕಾದ ಪೋಲಿಸ ಸಿಬ್ಬಂದಿಗಳೇ ಹೀಗೇ ಬೇಜಾವಾಬ್ದಾರಿ ಉತ್ತರ ನೀಡಿದರೆ ಸಾರ್ವಜನಿಕರು ಎಲ್ಲಿ ಹೋಗಬೇಕು. ಮಂತ್ರಿಗಳು, ವಿವಿಐಪಿಗಳಿಗೆ ಯಾವುದೇ ಅಪಾಯ ಸಂಭವಿಸಬಾರದೆಂದು  ಮೊದಲೇ ಪೋಲಿಸ್‌  ಬಂದೋಬಸ್ತ್‌ ನೀಡುವ ಅಧಿಕಾರಿಗಳು, ಸಾರ್ವಜನಿಕ ಸ್ಥಳಗಳ ಸುರಕ್ಷತೆ ಮತ್ತು ಗೌರವವನ್ನು ಕಾಪಾಡಲು ಯಾವುದೇ ಕ್ರಮ ಕೈಗೊಳ್ಳದ ಇರುವುದು ಎಷ್ಟು ಸರಿ ಎಂದು ಇಲ್ಲಿನ ನಿವಾಸಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಜನವಸತಿ ಪ್ರದೇಶದಲ್ಲೇ ಇರುವ  ರಾಮ ಮಂದಿರ  ಹಾಗೂ ಎದುರಿನ  ಮೈದಾನದ ಸುತ್ತ ಮುತ್ತ ಕಾಪೌಂಡ ಇದೆ, ಗೇಟ್‌ ಇದೆ, ಆದರೂ ಪ್ರಯೋಜನವಿಲ್ಲ.   ಖಾಲಿ ಜಾಗ ಮೈದಾನವಾಗಿ ಮಾರ್ಪಡಾಗಿದೆ.  ಕೆಲ ಯುವಕರು ಕ್ರೀಡಾ ಮೈದಾನವನ್ನಾಗಿ ಮಾರ್ಪಡಿಸಿಕೊಂಡಿದ್ದಾರೆ.  ಇನ್ನಾ ಕೆಲ ಪುಂಡಾಡಿಗಳು ಕಾಮ ಕ್ರೀಡೆಗೆ, ಮೋಜು ಮಸ್ತಿಗೆ ಬಳಸಿಕೊಳ್ಳುತ್ತಿರುವುದು  ಸ್ಥಳೀಯ ಸಮುದಾಯದ ನೈತಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳಿಗೆ ಹಾನಿಕಾರಕವಾಗಿದೆ.

ಈ ಸಮಸ್ಯೆಯನ್ನು ಪರಿಹರಿಸಲು, ಸ್ಥಳೀಯ ಪೊಲೀಸರು ಮತ್ತು ಸ್ಥಳೀಯ ಸಮಿತಿಗಳು ಮತ್ತು ಸಂಘಟನೆಗಳು ಜಾಗೃತಿ ಮೂಡಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತಿನ ನಿರ್ವಹಣೆಗೆ ಸಹಕರಿಸಬೇಕು. ಅಧಿಕಾರಿಗಳು ಈ ವಿಷಯದಲ್ಲಿ ತಕ್ಷಣ ಕ್ರಮ ಕೈಗೊಂಡು, ಸಾರ್ವಜನಿಕ ಸ್ಥಳಗಳ ಸುರಕ್ಷತೆ ಮತ್ತು ಗೌರವವನ್ನು ಕಾಯ್ದುಕೊಳ್ಳಲು ಪ್ರಯತ್ನಿಸಬೇಕು.  ಆದರೆ ಇಲ್ಲಿನ ಸಮಸ್ಯೆಯನ್ನು  ಪರಿಹರಿಸುವುದಿರಲಿ, ಕೇಳಿಸಿಕೊಳ್ಳುವವರೇ ಇಲ್ಲದಂತಾಗಿ ಎನ್ನುತ್ತಾರೆ ಇಲ್ಲಿನ  ನಿವಾಸಿಗಳು.

ಒಟ್ಟಾರೆ  ಬಡವರ ಊಟಿ ಎಂದು ಪ್ರಸಿದ್ಧಿಯಾಗಿರುವ  ಹಾಸನ ಪುಂಡ ಪೋಕರಿಗಳಿಗೆ ಆವಾಸ ತಾಣದಂತೆ ಮಾರ್ಪಡಾಗುತ್ತಿರುವುದು ನಿಜಕ್ಕೂ ವಿಷಾದವೇ ಸರಿ.

  • ಮಾಲಾ ಹಾಸನ

Leave a Reply

Your email address will not be published. Required fields are marked *

× How can I help you?