ಹಾಸನ-ಎಸ್ಸಿ-ಎಸ್ಟಿ-ಸರ್ಕಾರಿ-ಪ್ರಾಥಮಿಕ-ಮಾಧ್ಯಮಿಕ-ಶಾಲಾ- ಶಿಕ್ಷಕರ-ಸಂಘದಿಂದ-ಅರ್ಥಪೂರ್ಣವಾಗಿ-ಜರುಗಿದ-ಅಂತರಾಷ್ಟ್ರೀಯ- ಮಹಿಳಾ-ದಿನಾಚರಣೆ

ಹಾಸನ: ಎಸ್ಸಿ ಎಸ್ಟಿ ಸಮುದಾಯದ ಶಿಕ್ಷಕ- ಶಿಕ್ಷಕಿಯರು ಒಂದೇ ಕುಟುಂಬದ ಸದಸ್ಯರಂತೆ ಸಂಘಟಿತರಾಗಬೇಕು ಎಂದು ಕರ್ನಾಟಕ ರಾಜ್ಯ ಎಸ್ಸಿ ಎಸ್ಟಿ ಸರ್ಕಾರಿ ಪ್ರಾಥಮಿಕ ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರ ದೊಡ್ಡಮಗ್ಗೆ ತಿಳಿಸಿದರು.


ಅವರಿಂದ ನಗರದ ರಂಗೋಲಿಹಳ್ಳ ಸಂಘದ ಕಛೇರಿಯಲ್ಲಿಂದು ಶನಿವಾರ ಸಂಜೆ ಹಮ್ಮಿಕೊಂಡಿದ್ದ ಅಂತರಾಷ್ಟಿಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ  ವಹಿಸಿ  ಮಾತನಾಡಿದ ಅವರು, ಸಾಮಾಜಿಕ ನ್ಯಾಯದಡಿ ನಮ್ಮ  ಹಕ್ಕುಗಳ ಪಡೆದುಕೊಳ್ಳುವುದಕ್ಕಾಗಿ ಸಂಘ ಅಸ್ತಿತ್ವಕ್ಕೆ  ಬಂದಿದೆ.  ಸಂಘದ ಸದಸ್ಯರು ಒಗ್ಗಟ್ಟಿನಿಂದ ಇದ್ದಾಗ ಮಾತ್ರ  ಸಂಘವನ್ನು ದೊಟ್ಟಮಟ್ಟದಲ್ಲಿ ಕಟ್ಟಲು ಸಾಧ್ಯವಾಗುತ್ತದೆ ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಸದಸ್ಯರು ಯೋಚಿಸಿ   ಸಂಘ ಬೆಳೆಸುವಂತೆ ಮನವಿ ಮಾಡಿದರು.


ಈಗಾಗಲೇ ನಮ್ಮ ಸಮುದಾಯದ ಶಿಕ್ಷಕರಲ್ಲಿ ಪ್ರತಿಭೆಗಳಿದ್ದರೂ ಅನೇಕ ಗೌರವ ಪುರಸ್ಕಾರಗಳಿಂದ ವಂಚಿತರಾಗಿದ್ದೇವೆ.ನಾವು ಎಲ್ಲರಂತೆ ಸರಿಸಮವಾಗಿ ಇರಬೇಕು ಎಂಬುವುದು ನಮ್ಮ ಧ್ಯೇಯ ಉದ್ದೇಶವಾಗಿದೆ.ಮಹಿಳೆಯರು  ಕುಟುಂಬಕ್ಕೆ ಬೆನ್ನೆಲುಬು ಇದ್ದ ಹಾಗೆ  ಪುರುಷರ ಸಾಧನೆ ಹಿಂದೆ ಮಹಿಳೆಯರ ಪಾತ್ರ ಅತ್ಯಮೂಲ್ಯವಾಗಿದೆ ಸಂಘದಿ0ದ  ಮಹಿಳೆ ದಿನಾಚರಣೆ  ಆಚರಿಸುತ್ತಿರುವುದು ಖುಷಿಯ ವಿಚಾರವಾಗಿದೆ ಎಂದರು.


ನಮ್ಮ ಸಂಘದ ಮಹಿಳಾ ಸದಸ್ಯರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಸಾಮಾಜಿಕ ನ್ಯಾಯದಡಿ ಎಲ್ಲಾ ತಾಲ್ಲೂಕಿನಿಂದ   ಯಾರಿಗೂ ನೋವಾಗದಂತೆ, ಯಾರು ಬೇಸರ ಮಾಡಿಕೊಳ್ಳದಂತೆ ಶಿಕ್ಷಕಿಯರನ್ನು ಆಯ್ಕೆ ಮಾಡಿ ರಮಾಭಾಯಿ ಅಂಬೇಡ್ಕರ್ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಸಂಘದ ಹೆಮ್ಮೆ ಎಂದು ಹೇಳಿದರು.


 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಯಾಟ್ ಉಪನ್ಯಾಸಕಿ ಸುಜಾತ , ವೇತನದಲ್ಲಿ ತಾರತಮ್ಯ ಉಂಟಾದಾಗ ಹೋರಾಟ ಮಾಡಿ    ಪುರುಷರಂತೆ ಮಹಿಳೆಯರು ಸಮಾನ ವೇತನ ಪಡೆದ ದಿನ ಮಾರ್ಚ್ 8ನ್ನು  ಅಂತರಾಷ್ಟಿಯ ಮಹಿಳಾ ದಿನವಾಗಿ ಆಚರಣೆ ಮಾಡಲಾಗುತ್ತಿದೆ.ಲಿಂಗತಾರತಮ್ಯ ಹೋಗಲಾಡಿಸುವುದು ಮಹಿಳೆ ಸಬಲೀಕರಣ ಎಂಬ ದ್ಯೇಯೋದ್ಧೇಶದಿಂದ ೨೦೨೫ನೇ ಮಹಿಳಾ ದಿನಾಚರಣೆ ಆಚರಣೆ ಮಾಡಲಾಗುತ್ತಿದೆ ಇದು ಒಳ್ಳೆಯ ಬೆಳವಣಿಗೆ ಎಂದರು.


 ಯಾವ ಇಲಾಖೆಯಲ್ಲಿದ್ದರೂ ಎಸ್ಸಿಎಸ್ಟಿ ಸಮುದಾಯದ ನೌಕರರು ಒಗ್ಗಟ್ಟಿನಿಂದ ಇರಬೇಕು. ಆ ಜಾತಿ ಈ ಜಾತಿ  ಎಂಬ ತಾರತಮ್ಯಭಾವನೆ ಇರಬಾರದು ಅಂಬೇಡ್ಕರ್ ಅವರಿಗೆ ಇರುವುದು ಒಂದೇ ಮಾನವ ಜಾತಿ ಎಂಬಂತೆ ನಾವು ಬಾಳಬೇಕು ಎಂದ ಅವರು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಬರುವ ಬಹುತೇಕ ಮಕ್ಕಳು ಎಸ್ಸಿಎಸ್ಟಿ ಸಮುದಾಯಕ್ಕೆ ಸೇರಿದ ಮಕ್ಕಳಾಗಿದ್ದು  ಇನ್ನು ಬಡತನದ ಬೇಗೆಯಲ್ಲಿ ಬಳಲುತ್ತಿದ್ದಾರೆ. ನಾನು ಶಿಕ್ಷಣ ಕ್ಷೇತ್ರದಲ್ಲಿದ್ದುಕೊಂಡು ಇಂತಹ ಸಂದರ್ಭಗಳನ್ನು ನೋಡಿದ್ದಾಗ ಕಣ್ಣಲ್ಲಿ ನೀರು ಬರುತ್ತಿತ್ತು. ಹಾಗಾಗಿ ಸಮುದಾಯದ ಮಕ್ಕಳ ಶಿಕ್ಷಣ ಅಭಿವೃದ್ದಿ ಶಿಕ್ಷಕ ಶಿಕ್ಷಕಿಯರು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ತಿಳಿಸಿದರು.

 ಕಾರ್ಯಕ್ರಮದಲ್ಲಿ ಮಹಿಳಾ ಶಿಕ್ಷಕಿಯರಿಗೆ ʼರಮಾಭಾಯಿ ಅಂಬೇಡ್ಕರ್ ಪ್ರಶಸ್ತಿʼ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪಡೆದುಕೊಂಡ ಶಿಕ್ಷಕಿಯರು ತಮ್ಮ ಅನಿಸಿಕೆ ಅಭಿಪ್ರಾಯದ ಜೊತೆಗೆ ಸಂಘ ಬಲಗೊಳಿಸುವ ಭರವಸೆ ನೀಡಿದರು. ಶಿಕ್ಷಕ ಸಂಘದ ಚುನಾವಣೆಯಲ್ಲಿ ಗೆಲುವು ಪಡೆದ ಶಿಕ್ಷಕರಿಗೂ ಈ ಸಂದರ್ಭದಲ್ಲಿ ಗೌರವ ಸಮರ್ಪಣೆ ಮಾಡಲಾಯಿತು.

ಶಿಕ್ಷಕಿ- ಶಿಕ್ಷಕರು ಹಾಡಿದ ಅಂಬೇಡ್ಕರ್ ಗೀತೆಗಳು ಗಮನ ಸೆಳೆದವು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷೆ ಶಾಂತಮ್ಮ, ಸಂಘಟನಾ ಕಾರ್ಯದರ್ಶಿ ಭಾರತಿ, ಕಾರ್ಯಧ್ಯಕ್ಷ ಸೋಮನಾಯಕ, ಉಪಾಧ್ಯಕ್ಷ ಧರ್ಮಪ್ಪನಾಯಕ, ಸಾಂಸ್ಕöÈತಿಕ ಕಾರ್ಯದರ್ಶಿ ಶಿವಕುಮಾರ್, ಹಾಸನ ತಾಲ್ಲೂಕು ಅಧ್ಯಕ್ಷ ಮಂಜುನಾಥ್,ಜಿಲ್ಲಾ ಪದಾಧಿಕಾರಿಗಳು, ತಾಲ್ಲೂಕು ಅಧ್ಯಕ್ಷರುಗಳು, ಕಾರ್ಯದರ್ಶಿಗಳು, ಪದಾಧಿಕಾರಿಗಳು ,ಶಿಕ್ಷಕ ವೃಂದದವರು ಇದ್ದರು.

ಜಿಲ್ಲಾ ಪದಾಧಿಕಾರಿಗಳಾದ ಎಚ್ ಡಿ ಸೋಮೇಶ್ವರ ವೀರೇಶು ಶಿವಕುಮಾರ್ ನಾಗರಾಜು ಕರುಣಾಕರು ನವೀನ ಕಾರ್ಯಕ್ರಮದಲ್ಲಿ ಹಾಜರಿದ್ದು ಕಾರ್ಯಕ್ರಮದ ಸ್ವಾಗತವನ್ನು ರಾಜು ಬಿ ಎಚ್ ಹಾಗೂ ಕಾರ್ಯಕ್ರಮದ ಸಮಸ್ತ ನಿರೂಪಣೆಯನ್ನು ಲೋಕೇಶ್ ಕುಮಾರ್ ಅವರು ನೆರವೇರಿಸಿದರು ವಿಶೇಷವಾಗಿ ಶಿವಪ್ಪ ನಾಯಕ ಅವರನ್ನ ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *

× How can I help you?