ಹಾಸನ : ಸೋಷಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಹಾಸನ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಹಾಸನ ನಗರದ ಪೆನ್ಷನ್ ಮೊಹಲ್ಲಾ ದಲ್ಲಿರುವ DSM-Hall ನಲ್ಲಿ ಆಯೋಜಿಸಿದ್ದ ಇಫ್ತಾರ್ ಕೂಟ. (Iftar Get to Gether Programe) ಯಶಸ್ವಿಯಾಗಿ ನೆರವೇರಿತು.
ಅಪರಾಹ್ನ 3 ಘಂಟೆಗೆ ನಡೆದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಸ್ ಡಿ ಪಿ ಐ ರಾಜ್ಯ ಉಪಾಧ್ಯಕ್ಷರಾದ ಅಬ್ದುಲ್ ಹನ್ನಾನ್ ಹಾಗೂ ರಾಜ್ಯ ಪ್ರದಾನ ಕಾರ್ಯದರ್ಶಿ ಆಫ್ಸರ್ ಕೊಡ್ಲಿಪೇಟೆ ರವರು, ಬಿಜೆಪಿ ನೇತೃತ್ವದ NDA ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ವಕ್ಫ್ ತಿದ್ದುಪಡಿ ಮಸೂದೆ 2024 ರಲ್ಲಿರುವ ಮಾರಕ ಅಂಶಗಳು ಯಾವುವು?, ಇದರ ಹಿಂದಿ ಅಡಗಿರುವ ಶಡ್ಯಂತರ ಏನು? ಇದನ್ನು ವಿರೋಧಿಸುವ ವಿಧಾನ ಹೇಗೆ.? ಮತ್ತು ಮಸೂದೆಯನ್ನು ತಿರಸ್ಕಾರ ಮಾಡಲು ಮುಸ್ಲಿಮರಿಗೆ ಮುಂದಿರುವ ಮಾರ್ಗೋಪಾಯಗಳು ಯಾವುವು ? ಎಂಬ ವಿಷಯದ ಬಗ್ಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ, ಹಾಸನ ನಗರದ ಸಮುದಾಯದ ನೇತಾರರು, ಧಾರ್ಮಿಕ ಗುರುಗಳು, ಸಾಮಾಜಿಕ ಚಿಂತಕರು ಹಾಗೂ ವಿವಿಧ ಪಕ್ಷಗಳ ಮುಖಂಡರುಗಳೊಂದಿಗೆ ಸಂವಾದ ನಡೆಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಆಫ್ಸರ್ ಕೊಡ್ಲಿಪೇಟೆ “ವಕ್ಫ್ ತಿದ್ದುಪಡಿ ಮಸೂದೆ ಭಾರತದ ಧರ್ಮನಿರಪೇಕ್ಷ ಮತ್ತು ಪ್ರಜಾಪ್ರಭುತ್ವ ಸಿದ್ಧಾಂತಗಳ ವಿರುದ್ಧವಾಗಿದೆ. ಇದು ಭಾರತದ ಸಂವಿಧಾನದ 12 ರಿಂದ 35ನೇ ವಿಧಿಗಳಲ್ಲಿ ನಿರ್ದಿಷ್ಟಗೊಳಿಸಿರುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಈ ಮಸೂದೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 25 ಕೋಟಿ ನಾಗರಿಕರ ಭಾವನೆಗಳಿಗೆ ತೀವ್ರ ಹಾನಿ ಉಂಟುಮಾಡುತ್ತದೆ” ಎಂದು ಅಭಿಪ್ರಾಯಪಟ್ಟರು.

ರಾಜ್ಯ ಉಪಾಧ್ಯಕ್ಷರಾದ ಅಬ್ದುಲ್ ಹನ್ನಾನ್ ರವರು “ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷರ ಬಂಧನ ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ಆಂದೋಲನವನ್ನು ಹಿಮ್ಮೆಟ್ಟಿಸುವ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರ್ಕಾರದ ಷಡ್ಯಂತ್ರದ ಭಾಗವಾಗಿದೆ. ಬಿಜೆಪಿ ನೇತೃತ್ವದ NDA ಸರಕಾರ ED, NIA ಮೂಲಕ ನಮ್ಮನ್ನು ಈ ಹೋರಾಟದಿಂದ ಒಂದು ಇಂಚನ್ನು ಸಹ ಹಿಂದೆ ಸರಿಸಲು ಸಾಧ್ಯವಿಲ್ಲ.ನಮ್ಮ ಹೋರಾಟ ಇನ್ನಷ್ಟು ಬಲಗೊಳ್ಳಲಿದೆ.
SDPI ಈ ರೀತಿಯ ದಬ್ಬಾಳಿಕೆಯ ಹಾಗೂ ಪ್ರಜಾಪ್ರಭುತ್ವವಿರೋಧಿ ನಡೆಗಳ ವಿರುದ್ಧ ತನ್ನ ಸಂಪೂರ್ಣ ಶಕ್ತಿ ಮತ್ತು ದೃಢ ಸಂಕಲ್ಪದೊಂದಿಗೆ ಹೋರಾಟವನ್ನು ಮುಂದುವರಿಸಲಿದ್ದು, ಸಮುದಾಯದ ಎಲ್ಲಾ ಸಂಘಟನೆಗಳ ಮತ್ತು ರಾಜಕೀಯ ಪಕ್ಷಗಳ ನಾಯಕರು ಒಗಟ್ಟಿನೊಂದಿಗೆ ಈ ಹೋರಾಟವನ್ನು ಮುನ್ನಡೆಸಬೇಕಿದೆ” ಎಂದು ಕರೆ ನೀಡಿದರು.

ಚರ್ಚಾ ಕೂಟ ಮತ್ತು ನಂತರ ನಡೆದ ಇಫ್ತಾರ್ ಕೂಟದಲ್ಲಿ ಜಿಲ್ಲಾಧ್ಯಕ್ಷ ಇಮ್ರಾನ್ ಅರೇಹಳ್ಳಿ,ಹಾಸನ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಶಜೀಲ್ ಅಹ್ಮದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೈಯದ್ ಇರ್ಫಾನ್, ಎಸ್ಡಿಪಿಐ ಹಾಸನ ಜಿಲ್ಲಾ ಸಮಿತಿ ಸದಸ್ಯರುಗಳು ಜಿಲ್ಲೆಯ ಎಲ್ಲಾ ಅಸೆಂಬ್ಲಿ ಸಮಿತಿ ಗಳ ಸದಸ್ಯರು ಕಾರ್ಯಕರ್ತರು ಹಾಗೂ ಪಕ್ಷ, ಸಂಘಟನಾ ಭೇದವಿಲ್ಲದೆ ಕಾಂಗ್ರೆಸ್, ಜೆಡಿಎಸ್, AIMIM ಪಕ್ಷಗಳು ಸೇರಿದಂತೆ ಮುಸ್ಲಿಂ ಸಮುದಾಯದ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.