ಹಾಸನ – ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ (ಮುನಿಸಿಪಾಲಟ) ಹಂತ-೪ ರಡಿ ಅನುಮೋದಿತ ಕ್ರಿಯಾ ಯೋಜನೆಯಂತೆ ಶೇ.24. ಶೇ.7.25 ಮತ್ತು ಶೇ5 ರ ನಿಧಿಯಡಿ ವೈಯಕ್ತಿಕ ಕಾರ್ಯಕ್ರಮದಡಿ ಫಲಾನುಭವಿಗಳಿಗೆ ಸವಲತ್ತು ಒದಗಿಸುವ ಸಂಬಂಧ, ಪರಿಶಿಷ್ಟ ಜಾತಿಯ ಫಲಾನುಭವಿಗಳು ನಿವೇಶನ ಹೊಂದಿದ್ದಲ್ಲಿ ಹೊಸದಾಗಿ ಪಕ್ಕ ಮನೆ ನಿರ್ಮಿಸಲು ಫಲಾನುಭವಿಗಳ ವಂತಿಕೆಯು ಸೇರಿದಂತೆ ಸಹಾಯಧನ ಪಾವತಿಗಾಗಿ, ಪರಿಶಿಷ್ಟ ಪಂಗಡದ ಫಲಾನುಭವಿಗಳು ನಿವೇಶನ ಹೊಂದಿದ್ದಲ್ಲ ಹೊಸದಾಗಿ ಪಕ್ಕ ಮನೆ ನಿರ್ಮಿಸಲು ಫಲಾನುಭವಿಗಳ ವಂತಿಕೆಯು ಸೇರಿದಂತೆ ಸಹಾಯಧನ ಪಾವತಿಗಾಗಿ, ಪರಿಶಿಷ್ಟ ಪಂಗಡದ ಜನಾಂಗದವರ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಹಾನಿಗೊಳಗಾದ ಮನೆಗಳಿಗೆ ರಿಪೇರಿಗಾಗಿ ಸಹಾಯಧನ, ಆರ್ಥಿಕವಾಗಿ ಹಿಂದುಳಿದ ವರ್ಗದ ಜನಾಂಗದ ಫಲಾನುಭವಿಗಳಿಗೆ ನಿವೇಶನ ಹೊಂದಿದ್ದಲ್ಲಿ ಹೊಸದಾಗಿ ಪಕ್ಕ ಮನೆ ನಿರ್ಮಿಸಲು ಫಲಾನುಭವಿಗಳ ವಂತಿಕೆಯು ಸೇರಿದಂತೆ ಸಹಾಯಧನ ಪಾವತಿಗಾಗಿ, ಆರ್ಥಿಕವಾಗಿ ಹಿಂದುಳಿದ ವರ್ಗದ ಜನಾಂಗದ ಫಲಾನುಭವಿಗಳಿಗೆ ಕಂಪ್ಯೂಟರ್ ತರಬೇತಿ ಪಡೆಯಲು, ವಿಕಲಚೇತನರಿಗೆ ತ್ರಿಚಕ್ರ ವಾಹನ ಖರೀದಿಸಲು ಸಹಾಯಧನ ಪಡೆಯಲು ಅರ್ಜಿ ಕರೆಯಲಾಗಿದೆ.
ಅರ್ಜಿಯ ಜೊತೆ ಫೋಟೋ, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ದೃಢೀಕರಣ, ವಾಸಸ್ಥಳ ದೃಢೀಕರಣ, ಮನೆಯ ಖಾತೆ ನಕಲು ಹಾಗೂ ಬಿ.ಪಿ.ಎಲ್. ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಲಗತ್ತಿಸಿ, (ಸಂಖ್ಯೆ.-6)ಕ್ಕೆ ಅಂಗವಿಕಲ ಪ್ರಮಾಣ ಪತ್ರವನ್ನು ಲಗತ್ತಿಸಿ) ಮಾ.20 ಒಳಗೆ ಪಟ್ಟಣ ಪಂಚಾಯಿತಿಗೆ ಅರ್ಜಿ ಸಲ್ಲಿಸಲು ಸೂಚಿಸಿದೆ.
ಹೆಚ್ಚಿನ ಮಾಹಿತಿಗಾಗಿ ಕಚೇರಿ ವೇಳೆಯಲ್ಲಿ ವಿಷಯ ನಿರ್ವಾಹಕರನ್ನು ಸಂಪರ್ಕಿಸಲು ಅರಕಲಗೂಡು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ತಿಳಿಸಿದ್ದಾರೆ.