ಹಾಸನ : ಉಡುಪಿ ಅಂತರ್ ರಾಜ್ಯ ಉಡುಪಿ ವಕೀಲರು ವೆಲ್ಫೇರ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್, ಉಡುಪಿ ಜಿಲ್ಲೆಯು ಮಹಿಳೆಯರ ತ್ರೋಬಾಲ್ ಪಂದ್ಯವಳಿಯನ್ನು ಆಯೋಜಿಸಿದ್ದರು.
ಅದರಲ್ಲಿ 1೦ ತಂಡಗಳು ಭಾಗವಹಿಸಿದ್ದವು. ಅದರಲ್ಲಿ ಹಾಸನ ತಂಡವು ಎಲ್ಲಾ ತಂಡಗಳ ಮೇಲೆ ವಿಜಯ ಸಾಧಿಸಿ ಸೆಮಿಫೈನಲ್ಸ್ ಅನ್ನು ಮಂಗಳೂರು ತಂಡದ ವಿರುದ್ಧ ಆಡಿ ಜಯಗೊಳಿಸಿ ಫೈನಲ್ಸ್ ತಲುಪಿ, ಉಡುಪಿ ತಂಡದೊಂದಿಗೆ ಸೆಣೆಸಾಡಿ ದ್ವಿತೀಯ ಬಹುಮಾನವನ್ನು ಪಡೆದುಕೊಂಡು ಜಯಗಳಿಸಿತು.
ತಂಡದಲ್ಲಿ ಮ್ಯಾನೇಜ್ಮೆಂಟ್ ಬಿಂದು ರವರು ಮತ್ತು ರಾಧಾ, ರೋಷಿನಿ, ವಿಜಯಲಕ್ಷ್ಮಿ, ಭವ್ಯ, ಭೂಮಿಕಾ, ರಜಿನಿ, ಪ್ರಿಯದರ್ಶಿನಿ, ಪ್ರಗತಿ ಇದ್ದರು.
ಹಾಸನ ನ್ಯಾಯಲಯ ಸಂಘದ ಮಹಿಳಾ ವಕೀಲರು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.