ಎಚ್.ಡಿ.ಕೋಟೆ: ಪಟ್ಟಣದ ಗದ್ದಿಗೆ ಸರ್ಕಲ್ ನಿಂದ ಗಾಂಧಿನಗರ ಗ್ರಾಮದ ವರೆಗೆ ತೀರಾ ಹದಗೆಟ್ಟ ರಸ್ತೆ ಸರಿಪಡಿಸದೆ ನಿರ್ಲಕ್ಷ್ಯ ತೋರುತ್ತಿರುವ ಪಿಡಬ್ಲ್ಯೂಡಿ ಅಧಿಕಾರಿ ವಿರುದ್ಧ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಸಂಘಟನೆಯಿಂದ ಕಾಲ್ನಡಿಗೆ ಜಾಥಾ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಲಾಯಿತು.
ಪಕ್ಷದ ಸುಮಾರು 150 ಕ್ಕೂ ಹೆಚ್ಚು ಕಾರ್ಯಕರ್ತರು ಗಾಂಧಿನಗರ-ಸವ್ವೇಮಾಳ ಗ್ರಾಮದ ಮಾರ್ಗದಿಂದ ಸುಮಾರು 12 ಕಿ.ಮೀ ಜಾಥಾದಲ್ಲಿ ಸಾಗಿ ಬಂದು, ಜನಪ್ರತಿನಿಧಿಗಳು ಹಾಗೂ ಪಿಡಬ್ಲ್ಯೂಡಿ ಅಧಿಕಾರಿ ಬೋರಯ್ಯ ವಿರುದ್ಧ ಘೋಷಣೆ ಕೂಗಿ ಗದ್ದಿಗೆ ಸರ್ಕಲ್ ನಲ್ಲಿ ಸಮಾವೇಶಗೊಂಡು ಉಪ ತಹಸೀಲ್ದಾರ್ ಶ್ರೀಧರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸಿಪಿಎಂ ಶಿವಣ್ಣ ಮಾತನಾಡಿ, ಈ ರಸ್ತೆಯನ್ನು ಅವಲಂಭಿಸಿರುವ ಸಾವಿರಾರು ಪ್ರಯಾಣಿಕರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಹಲವು ವರ್ಷಗಳಿಂದ ರಸ್ತೆ ಸರಿಪಡಿಸದಿರುವುದರಿಂದ ವಯೋವೃದ್ಧರು, ಗರ್ಭಿಣಿ, ಬಾಣಂತಿಯರು, ಶಾಲಾ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.

ಕಳೆದ ಒಂದು ವರ್ಷದ ಹಿಂದೆ ರಸ್ತೆಯನ್ನು ಹಗೆದು ಹದಗೆಡಿಸಲಾಗಿದೆ. ಇದರಿಂದ ಧೂಳಿನಿಂದ ಪ್ರಯಾಣಿಕರು ಅನಾರೋಗ್ಯಕ್ಕೀಡಾಗಿದ್ದಾರೆ. ಈ ಭಾಗದಲ್ಲಿ ಬಸ್ ಸೌಲಭ್ಯವೂ ಇಲ್ಲ. ರಸ್ತೆ ಸರಿಯಿಲ್ಲದ ಕಾರಣ ಖಾಸಗೀ ವಾಹನಗಳೂ ಕೂಡ ಓಡಾಡುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಸಿಪಿಎಂ ಶಿವಣ್ಣ ಮಾತನಾಡಿ, ಈ ರಸ್ತೆಯನ್ನು ಅವಲಂಭಿಸಿರುವ ಸಾವಿರಾರು ಪ್ರಯಾಣಿಕರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಹಲವು ವರ್ಷಗಳಿಂದ ರಸ್ತೆ ಸರಿಪಡಿಸದಿರುವುದರಿಂದ ವಯೋವೃದ್ಧರು, ಗರ್ಭಿಣಿ, ಬಾಣಂತಿಯರು, ಶಾಲಾ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.
ಈ ವೇಳೆ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ಶಾಖಾ ಕಾರ್ಯದರ್ಶಿ ದೇವರಾಜಮ್ಮ, ,ಫಾರೂಕ್ ಆಲಿ, ಪ್ರಶಾಂತ್, ಪ್ರಪುಲ್ಲನ್, ಬಾಬು, ಅಂಬುಜಾಕ್ಷ, ಗ್ರಾಯತ್ರಿ, ಶೇರ್ಲಿ, ಜನಾರ್ಧನ್, ರವಿ, ಮುನಿಸ್ವಾಮಿ, ಪಿ.ರವಿ, ಅಂಬಿಕಾ, ಪ್ರಶೂಬ್ ಸೇರಿದಂತೆ ಹಲವರಿದ್ದರು.
-ಶಿವು ಕೋಟೆ