ಎಚ್ ಡಿ ಕೋಟೆ- ತಾಲೂಕು ಉಪಾಧ್ಯಾಯರ ಪತ್ತಿನ ಸಹಕಾರ ಸಂಘದ 2025-30 ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯು ಏ. 20 ಭಾನುವಾರ ಸಂಘದ ಕಚೇರಿಯಲ್ಲಿ ನಡೆಯಿತು.

ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಯಶವಂತ್ ಕುಮಾರ್ ಎಂ, ಪ್ರಕಾಶ್ ಎಂ, ಕೆಂಪರಾಜು, ನಾಗೇಶ ಬಿ ಎಮ್, ಪುಟ್ಟಚಾರಿ, ಮಂಜುನಾಥ್ ಎ ಆರ್, ಆನಂದ ಎನ್, ಚಿಕ್ಕದೇವಯ್ಯ ಎಚ್ ಜಿ, ಮಹದೇವ ಎ ಎಸ್, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಸೋಮಸುಂದರ್ ಎಸ್ ಬಿ, ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಹೊಸ ಮಾಳ ನಾಗನಾಯಕ, ಹಿಂದುಳಿದ ವರ್ಗಗಳ ಪ್ರವರ್ಗ ಎ ಕ್ಷೇತ್ರದಿಂದ ಮಹೇಶ್ ಎಸ್ ಬಿ ಅವಿರೋಧ ಆಯ್ಕೆ, ಹಿಂದುಳಿದ ವರ್ಗಗಳ ಪ್ರವರ್ಗ ಬಿ ಕ್ಷೇತ್ರದಿಂದ ಮಹದೇವಸ್ವಾಮಿ ಎನ್ ಅವಿರೋಧ ಆಯ್ಕೆ, ಮಹಿಳಾ ಮೀಸಲು ಕ್ಷೇತ್ರದಿಂದ ಸವಿತಾ ಎಂ ಎ ಮತ್ತು ಜೂಲಿಯಟ್ ವಿಲ್ಮಾ ಷಾ ಅವರು ಜಯಗಳಿಸಿದ್ದಾರೆ.

ಚುನಾವಣಾಧಿಕಾರಿಯಾಗಿ ಅನುಸೂಯ ಜಿ. ಮತ್ತು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಿಕ್ಕೆರೆಯೂರು ಶಿವಕುಮಾರ್ ಎಸ್. ಕರ್ತವ್ಯ ನಿರ್ವಹಿಸಿದ್ದಾರೆ.
- ಶಿವಕುಮಾರ, ಕೋಟೆ