ಎಚ್ ಡಿ ಕೋಟೆ- ಪಟ್ಟಣದ ಹನುಮಂತನಗರದ ನಿವಾಸಿಯಾದ ಕರಿಘಟ್ಟ ನಾಯಕ ಸನ್ ಆಫ್ ಲೇಟ್ ದಾಸ ನಾಯಕ ರವರ ಮನೆಯಲ್ಲಿ ಅಡುಗೆಯನ್ನು ಮಾಡುವಾಗ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಆಫ್ ಮಾಡದೆ ಹಾಗೆ ಮನೆಗೆ ಬೀಗ ಹಾಕಿ ಬೇರೆ ಊರಿಗೆ ತೆರಳಿದ್ದರಿಂದ ಸುಮಾರು ಎರಡುವರೆ ಗಂಟೆಗಳ ಕಾಲ ಗ್ಯಾಸ್ ಉರಿದು ಮನೆ ತುಂಬಾ ಹೊಗೆ ಆವರಿಸಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಯವರು ಸಿಲಿಂಡರ್ ನ ರೆಗ್ಯುಲೇಟರ್ ಅನ್ನು ಆಫ್ ಮಾಡಿ ಹೆಚ್ಚಿನ ಅನಾಹುತವಾಗುವುದನ್ನು ತಡೆದಿದ್ದಾರೆ.
ಕಾರ್ಯಾಚರಣೆಯಲ್ಲಿ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾದ ಎಂ.ಜಿ ಸೋಮಣ್ಣ ಸಿಬ್ಬಂದಿಯವರಾದ ಗಣೇಶ್ ಮಾದರ್, ಮಂಜು, ಅರುಣ್ ಕುಮಾರ್, ರಂಜಿತ್ ಹಾಗೂ ಪುಂಡಲೀಕ ಲಮಾಣಿ ಭಾಗವಹಿಸಿದ್ದರು.
-ಶಿವಕುಮಾರ