ಎಚ್.ಡಿ.ಕೋಟೆ: ದಿವಂಗತ ಮಾಜಿ ಶಾಸಕ ಚಿಕ್ಕಮದು ಅವರ 76ನೇ ಹುಟ್ಟುಹಬ್ಬವನ್ನು ಚಿಕ್ಕಮಾದು ಅಭಿಮಾನಿ ಬಳಗದ ವತಿಯಿಂದ ಸರಳವಾಗಿ ಶಾಸಕ ಅನಿಲ್ ಚಿಕ್ಕಮಾದು ಅವರ ನಿವಾಸದಲ್ಲಿ ಆಚರಿಸಲಾಯಿತು.
ತಾಲೂಕು ಚಿಕ್ಕಮಾದು ಅಭಿಮಾನಿ ಬಳಗದವರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮುಖಂಡರು ದಿವಂಗತ ಚಿಕ್ಕಮಾದು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ನಂತರ ಚಿಕ್ಕಮಾದು ಅಭಿಮಾನಿ ಬಳಗದ ತಾಲೂಕು ಅಧ್ಯಕ್ಷ ಜಿನ್ನಹಳ್ಳಿ ರಾಜನಾಯಕ ಮಾತನಾಡಿ, 75ನೇ ವರ್ಷದ ಹುಟ್ಟುಹಬ್ಬವನ್ನು ತಾಲೂಕಿನ ಅಭಿಮಾನಿಗಳು ಸರಳವಾಗಿ ಆಚರಣೆ ಮಾಡುತ್ತಿದ್ದೇವೆ. ಶ್ರೀಯುತರ ಹುಟ್ಟುಹಬ್ಬವನ್ನು ಶಾಸಕ ಅನಿಲ್ ಚಿಕ್ಕಮಾದು ಉದ್ಯೋಗ ಮೇಳ ನಡೆಸಿ, ಹಲವರಿಗೆ ಉದ್ಯೋಗ ಕೊಡಿ ಆ ಮೂಲಕ ಅವರ ತಂದೆಯ ಹುಟ್ಟುಹಬ್ಬ ಆಚರಿಸುವ ಇಚ್ಛೆ ಹೊಂದಿದ್ದರು. ಆದರೆ, ರಾಜ್ಯ ಬಜೆಟ್ ಮಂಡನೆ ಇರುವುದರಿಂದ ಇಂದು ಸರಳವಾಗಿ ಹುಟ್ಟುಹಬ್ಬ ಆಚರಿಸುತ್ತಿದ್ದೇವೆ ಎಂದು ತಿಳಿಸಿದರು.
ಮುಂದಿನ ದಿಗಳಲ್ಲಿ ಮಾಜಿ ಶಾಸಕ ಚಿಕ್ಕಮಾದು, ಮಾಜಿ ಸಂಸದ ಧ್ರುವನಾರಾಯಣ್ ಅವರ ಹೆಸರಿನಲ್ಲಿ ಉದ್ಯೋಗ ಮೇಳ ಆಯೋಜಿಸಲು ಶಾಸಕ ಅನಿಲ್ ಚಿಕ್ಕಮಾದು ತೀರ್ಮಾನಿಸಿದ್ದಾರೆ. ಮಾಜಿ ಶಾಸಕ ಚಿಕ್ಕಮಾದು ಅವರು ತಾಲೂಕಿನಲ್ಲಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು ಎಂದು ತಿಳಿಸಿದರು.

ಪುರಸಭಾ ಸದಸ್ಯ ಎಚ್.ಸಿ. ನರಸಿಂಹಮೂರ್ತಿ ಮಾತನಾಡಿ, ಮಾಜಿ ಶಾಸಕ ಚಿಕ್ಕಮಾದು ಸಾಹೇಬರ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸುತ್ತಿದ್ದೇವೆ. ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ತೆಗೆದುಹಾಕಲು ಹಲವು ಹೋರಾಟಗಳನ್ನು ಮಾಡಿ, ಹೆಚ್ಚಿನ ಅನುದಾನಗಳನ್ನು ತಂದು ಹಲವು ಕಾಮಗಾರಿಗಳನ್ನು ನಡೆಸಿ ತಾಲೂಕಿನ ಅಭಿವೃದ್ಧಿಗೆ ಕಾರಣರಾಗಿದ್ದಾರೆ ಎಂದು ತಿಳಿಸಿದರು.
ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಕ್ಯಾತನಹಳ್ಳಿ ನಾಗರಾಜ್ ಮಾತನಾಡಿ, ಮಾಜಿ ಶಾಸಕ ಚಿಕ್ಕಮಾದು ಅವರು ಇಂದು ದೈಹಿಕವಾಗಿ ನಮ್ಮ ಜೊತೆ ಇಲ್ಲ. ನಾವು ಅವರನ್ನು ನಾವು ಮಾನಸಿಕವಾಗಿ ಉಳಿಸಿ ಕೊಂಡಿದ್ದೇವೆ. ಚಿಕ್ಕಮಾದು ಅವರು 40 ವರ್ಷಗಳ ಕಾಲ ಬಡವರು, ಹಿಂದುಳಿದವರು ಹಾಗೂ ನಿರ್ಗತಿಕರ ಪರ ಹೋರಾಟ ಮಾಡಿದ್ದರು. 1991ರಲ್ಲಿ ಹುಣಸೂರು ತಾಲೂಕಿನಲ್ಲಿ ಶಾಸಕರಾಗಿದ್ದಾಗ ರೈತರಿಗೆ 4.000 ಸಾಗುವಳಿ ಪತ್ರವನ್ನು ವಿತರಣೆ ಮಾಡಿದ್ದರು. ನಂತರ ಅಧಿಕಾರ ಇರಲಿ ಇಲ್ಲದಿರಲಿ ನಿರಂತರವಾಗಿ ಹೋರಾಟ ಮಾಡುತ್ತಾ ಬಂದ ಮಹಾ ನಾಯಕ ಎಂದರು.

ಚಿಕ್ಕಮಾದು ಅಭಿಮಾನಿ ಬಳಗದ ಪ್ರದಾನ ಕಾರ್ಯದರ್ಶಿ ಸಿದ್ದನಾಯಕ, ಖಜಾಂಚಿ ದಾಸನಾಯಕ, ನಿರ್ದೇಶಕ ರುಗಳಾದ ಜವರನಾಯಕ, ಗೋವಿಂದರಾಜು, ನಾಗರಾಜು, ಕೃಷ್ಣ, ಜವರನಾಕ, ಗೋವಿಂದ, ಸಿದ್ದನಾಯಕ, ಬಿ.ಪಿ.ಸಿದ್ದನಾಯಕ, ಮಣಿ, ಗ್ರಾ.ಪಂ.ಅದ್ಯಕ್ಷ ಮಹೇಶ್ ನಾಯಕ, ಗಣೇಶ್ ಆಚಾರ್, ಕೃಷ್ಣ ಸ್ವಾಮಿ ಬೆಟ್ಟ ನಾಯ್ಕ ಈರ ನಾಯಕ, ಮರಿ ತಿಮ್ಮನಾಯಕ, ನಾಗರಾಜು, ಗೋಪಲ, ರಮೇಶ, ಮಂಜು, ಜವರನಾಯಕ, ಉಮೇಶ್, ಚಿಕ್ಕಣ್ಣ, ಶಿವಕುಮಾರ್, ಶಿವರಾಮು, ಮಲ್ಲೇಶ್, ಚಲುವರಾಜು, ರವಿ, ಚಿಕ್ಕಣ್ಣ, ರವಿಶಂಕರ್, ಹಾಗೂ
ಚಿಕ್ಕಮಾದು ಅಭಿಮಾನಿ ಬಳಗದ ಸದಸ್ಯರು ಮುಖಂಡರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡರು ಇದ್ದರು.
- ಶಿವು,ಕೋಟೆ