ಎಚ್.ಡಿ.ಕೋಟೆ: ಪಟ್ಟಣದ ಪುರಸಭೆ 2025 / 26 ನೇ ಸಾಲಿಗೆ ಬಜೆಟ್ ಮಂಡನೆ ಮಾಡುತ್ತಿದ್ದು ಈ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಬಜೆಟ್ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.
ಈ ಸಭೆಯನ್ನು ಉದ್ದೇಶಿಸಿ ಮುಖ್ಯಾಧಿಕಾರಿ ಪಿ. ಸುರೇಶ್ ಮಾತಾನಾಡಿ ಪುರಸಭೆಯ ಈ ಸಾಲಿನ ಆಯವ್ಯಯ ಪತ್ರವನ್ನು ಮಂಡಿಸಲಾಗುತ್ತಿದ್ದು ಈ ಸಲುವಾಗಿ ನಾವು ಪಟ್ಟಣದ ಸಾರ್ವಜನಿಕರನ್ನ ವರ್ತಕರನ್ನ ಹಾಗೂ ಸಂಘ ಸಂಸ್ಥೆಗಳ ಮುಖಂಡರನ್ನ ಆಹ್ವಾನಿಸಿ ಮುಂದಿನ ಬಜೆಟ್ ಗೆ ಅನುಗುಣವಾಗಿ ಸಲಹೆ ಸಹಕಾರ ನೀಡಿ ಎಂದು ಮನವಿ ಮಾಡಿದರು.
ನಂತರ ಮಾತನಾಡಿದ ಪುರಸಭಾ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಐಡಿಯಾ ವೆಂಕಟೇಶ್ ಕಳೆದ ವರ್ಷ ನೀವು ಬಜೆಟ್ ಮಂಡಿಸಿದ್ದಿರಿ ಅದರಲ್ಲಿ ನೀವು ಎಷ್ಟು ಪೂರೈಸಿದಿರಿ ಎಷ್ಟು ಪೂರೈಸಿಲ್ಲ ಅದನ್ನ ಸಾರ್ವಜನಿಕರಿಗೆ ಮಾಹಿತಿ ಕೊಡಬೇಕು ನೀವು ಏಕೆಂದರೆ ಇದು ಸಾರ್ವಜನಿಕರು ಕಟ್ಟಿದಂತ ತೆರಿಗೆ ಹಣ ಎಂದು ಪುರಸಭೆ ಮುಖ್ಯ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದರು.

ನಂತರ ಸಾರ್ವಜನಿಕರು ಪಟ್ಟಣದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ ಅದರಲ್ಲೂ ಕುಡಿಯುವ ನೀರು, ಚರಂಡಿ, ರಸ್ತೆ, ಉದ್ಯಾನವನ ಮತ್ತು ಸಾರ್ವಜನಿಕ ಶೌಚಾಲಯಗಳ ಸಮಸ್ಯೆಗಳು ಹೆಚ್ಚಾಗಿವೆ ಇದನ್ನು ಕಳೆದ ಐದಾರು ವರ್ಷಗಳಿಂದ ನಿಮ್ಮ ಗಮನಕ್ಕೆ ತಂದರು ಯಾವುದೇ ಪ್ರಯೋಜನ ವಾಗಿಲ್ಲ ಎಂದು ಮುಖಂಡರಾದ ಸ್ಟುಡಿಯೋ ಸ್ವಾಮಿ, ವಿನಯ್, ಶಿವಲಿಂಗು, ವೆಂಕಟೇಶ, ಪ್ರಮೋದ್ ಮಂಜುನಾಥ್, ಉಮೇಶ್, ಮಿಲ್ ನಾಗರಾಜ್, ಮುಂತಾದವರು ಆಕ್ಷೇಪ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಉಪಾಧ್ಯಕ್ಷ ಅಸೀಪ್ ಇಕ್ಬಾಲ್ ಮಾತಾನಾಡಿ ಕಳೆದ ಸಾಲಿನಲ್ಲಿ ನಮಗೆ ಸರ್ಕಾರದ ಅನುದಾನದ ಕೊರತೆ ಹಾಗೂ ಸಾರ್ವಜನಿಕರಿಂದ. ಸರಿಯಾಗಿ ತೆರಿಗೆ ಸಂಗ್ರಹವಾಗದ ಹಿನ್ನೆಲೆಯಲ್ಲಿ ಕೆಲವು ಕಾಮಗಾರಿಗಳನ್ನ ಕೈಗೆತ್ತಿಕೊಳ್ಳಲಾಗಿಲ್ಲ ಇದರಿಂದ ಸಾರ್ವಜನಿಕರಿಗೆ ಅನಾನುಕೂಲ ವಾಗಿದ್ದು ಇದನ್ನ ಈ ಸಾಲಿನ ಗಂಭೀರವಾಗಿ ಪರಿಗಣಿಸಿ ಮೊದಲ ಆದ್ಯತೆ ಮೇರೆಗೆ ಸಮಸ್ಯೆ ಪರಿಗರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತವೆ ಎಂದರು.

ಸಭೆಯಲ್ಲಿ ಪುರಸಭಾ ಸದಸ್ಯರು, ಸರ್ಕಾರದ ನಾಮ ನಿರ್ದೇಶನ ಸದಸ್ಯರು ವರ್ತಕರ ಸಂಘದ ಪದಾಧಿಕಾರಿಗಳು, ಹಿರಿಯ ಮುಖಂಡರು ವಿವಿಧ ಸಂಘ ಸಂಸ್ಥೆಯ ಮುಖಂಡರು ಭಾಗವಹಿಸಿದ್ದರು.
– ಶಿವು ಕೋಟೆ