ಎಚ್ ಡಿ ಕೋಟೆ- ಎನ್.ಬೇಗೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ ಭೀಮನ ಕೊಲ್ಲಿಯಲ್ಲಿಂದು ತಾಲ್ಲೂಕು ಆರೋಗ್ಯಾಧಿಕಾರಿಗಳು ಮತ್ತು ತಂಡದವರು ಭೇಟಿ ನೀಡಿ ಪರಿಶೀಲಿಸಿ, ಸಾಂಕ್ರಮಿಕ ರೋಗಗಳು ಹರಡದಂತೆ ತೆಗೆದುಕೂಡಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಈ ವೇಳೆ ತಾಲ್ಲೂಕು ಆರೋಗ್ಯಾಧಿಕಾರಿ ಮಾತನಾಡಿ, ತಿಂಡಿ ತಿನಿಸುಗಳನ್ನು ಮಾರಾಟ ಮಾರುವವರು ಶುದ್ಧವಾದ ತಿಂಡಿಗಳನ್ನು ಮಾರಾಟ ಮಾಡಬೇಕು. ಹಾಗು ಹಣ್ಣುಗಳನ್ನು ಕೊಯ್ದು ಮಾರಾಟ ಮಾಡುವವರು ಮುಚ್ಚಿಕೊಂಡು ಮಾರಾಟ ಮಾಡಬೇಕು, ಹಣ್ಣುಗಳ ಮೇಲೆ ನೊಣಗಳು ಮತ್ತು ಕೀಟಗಳು ಕೂರದಂತೆ ಕ್ರಮ ಕೈಗೊಳ್ಳಬೇಕೆಂದರು.

ದಾಸೋಹ ಭವನಕ್ಕೆ ಭೇಟಿ ನೀಡಿದ ಅಧಿಕಾರಿಗಳು, ಭಕ್ತಾದಿಗಳಿಗೆ ಶುದ್ಧವಾದ ಆಹಾರ ನೀರು ಹಾಗೂ . ಅಡುಗೆ ಮಾಡುವಾಗ ಪಾತ್ರೆಗಳನ್ನು ಹಾಗೂ ಸೊಪ್ಪು ತರಕಾರಿಗಳನ್ನು ಶುದ್ಧವಾದ ನೀರಿನಿಂದ ತೊಳೆಯಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ಸ್ಥಳದ ಅಧ್ಯಕ್ಷರಾದ ಮೂರ್ತಿ ಕಾರ್ಯದರ್ಶಿ ಜಗದೀಶ್, ಶಿವರಾಜಪ್ಪ ,ದಯಾನಂದ್.ಗುರು ಮೂರ್ತಿ, ಕಾನ್ಸ್ಟೇಬಲ್ ಸುರೇಶ್, ಮುಖ್ಯಅಡುಗೆಯವರು ಮಾಧು, ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿಗಳಾದ ಡಾ. ಸೋಮಣ್ಣ, ರೇಷ್ಮೆ ಇಲಾಖೆ ಸಹ ನಿರ್ದೇಶಕರಾದ ಉಮೇಶ್ ,ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರಾದ ನಾಗೇಂದ್ರ, ರವಿರಾಜ್, ಪ್ರದೀಪ್ , ಶಿವಕುಮಾರಿ ಇನ್ನಿತರರು ಹಾಜರಿದ್ದರು.
*ಶಿವು ಕೋಟೆ