ಎಚ್.ಡಿ.ಕೋಟೆ:ಮಕ್ಕಳ ಜಾಗೃತಿ ಸಂಸ್ಥೆ ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೆಚ್.ಡಿ.ಕೋಟೆಯ ಶಿಶು ಯೋಜನಾಭಿವೃದ್ಧಿ ಅಧಿಕಾರಿ ದೀಪಾ ಅಧ್ಯಕ್ಷತೆಯಲ್ಲಿ ‘ಉತ್ತಮ ಆರೋಗ್ಯ ಶಿಕ್ಷಣದ ಕಡೆಗೆ ನಮ್ಮ ನಡೆ’ ಎಂಬ ಕಾರ್ಯಾಗಾರವನ್ನು ಹ್ಯಾಂಡ್ ಪೋಸ್ಟ್ ನ ಮೈರಾಡ ಪ್ಲಾನ್ ಕಚೇರಿ ಆವರಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಾಗಾರದಲ್ಲಿ ತಾಲೂಕಿನ 408 ಅಂಗನವಾಡಿ ಕೇಂದ್ರಗಳಲ್ಲಿ ಶಾಲಾ ಪೂರ್ವ ಶಿಕ್ಷಣವನ್ನು ಬಲಪಡಿಸಲು ಮತ್ತು ಮಾದರಿ ಅಂಗನವಾಡಿಗಳನ್ನಾಗಿ ರೂಪಿಸಲು ಹಲವು ಸಲಹೆ, ಸೂಚನೆಗಳನ್ನು ನೀಡಲಾಯಿತು.
ಅಂಗನವಾಡಿ ಶಿಕ್ಷಕಿಯರು ತಮ್ಮ ಕನಸಿನ ಅಂಗನವಾಡಿ ಹೇಗಿರಬೇಕೆಂದು ಕಾರ್ಯತಂತ್ರವನ್ನು ರೂಪಿಸಿದರು. ಪ್ರತೀ ಮಗುವಿನ ಉತ್ತಮ ಗುಣಮಟ್ಟದ ಆರಂಭಿಕ ಶಿಕ್ಷಣವನ್ನು ನೀಡುತ್ತೇವೆಂದು ಪ್ರತಿಜ್ಞೆ ಮಾಡಿ ಹಸ್ತಪ್ರತಿಗಳನ್ನು ಮುದ್ರಿಸಿ ಹಲವು ಚಟುವಟಿಕೆಗಳನ್ನು ಮಾಡಿದರು.
ತರಬೇತಿದಾರರಾದ ಜಾಯ್ ಶ್ರೀನಿವಾಸ್,ರೋಹಿತ್ ಸೇರದಂತೆ ಮಕ್ಕಳ ಜಾಗೃತಿ ಸಂಸ್ಥೆಯ ಸಂಯೋಜಕರು ಇದ್ದರು.
———–ಶಿವು ಕೋಟೆ