ಹಾಸನ : ಹಾಸನಾಂಬ ವೆಲ್ಫೇರ್ ಸೊಸೈಟಿ ಹಾಗೂ ಮೆಡ್ ಕ್ರಾಂತಿ ಡಯಗ್ನೋಸ್ಟಿಕ್ ಹಾಸನ ಇವರ ವತಿಯಿಂದ ಶಾಂತಿಗ್ರಾಮ ಹೋಬಳಿಯ ಬೆಳ್ಳಿಕೊಪ್ಪಲು ಗ್ರಾಮದಲ್ಲಿ ಉಚಿತವಾಗಿ ಆಯೋಜಿಸಿದ್ದ ಆರೋಗ್ಯ ಮೇಳ ಹಾಗೂ ರಕ್ತ ಪರೀಕ್ಷಾ ಮೇಳ ಶಿಬಿರ ಯಶಸ್ವಿಯಾಗಿದೆ.
ಗ್ರಾಮೀಣ ಭಾಗಕ್ಕೂ ಉತ್ತಮ ಆರೋಗ್ಯದ ಕುರಿತು ಅರಿವು ಮೂಡಿಸುವ ದೃಷ್ಟಿಯಿಂದ ಹಾಗೂ ಉಚಿತವಾಗಿ ರಕ್ತ ಪರೀಕ್ಷೆ, ಆರೋಗ್ಯ ತಪಾಸಣೆಯನ್ನು ಶಿಬಿರದ ಮೂಲಕ ಜನರನ್ನು ತಲುಪುವ ಕೆಲಸವನ್ನು ಹಾಸನಾಂಬ ವೆಲ್ಫೇರ್ ಸೊಸೈಟಿ ಹಾಗೂ ಮೆಡ್ ಕ್ರಾಂತಿ ಡಯಗ್ನೋಸ್ಟಿಕ್ಸ್ ಯಶಸ್ವಿಯಾಗಿ ಮಾಡಿದೆ.
ಈ ಆರೋಗ್ಯ ಶಿಬಿರದಲ್ಲಿ 200 ಕ್ಕೂ ಜನರು ವಿವಿಧ ರೀತಿಯ ಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಂಡು ಶಿಬಿರದ ಸದುಪಯೋಗ ಪಡೆದುಕೊಂಡರು. ಇದರಲ್ಲಿ ಅನೇಕರು ಐರನ್ ಡಿ ಫಿಶೀಯನ್ಸಿ ಸೇರಿದಂತೆ ವಿವಿಧ ಸಮಸ್ಯೆಗಳು ಕಂಡು ಬಂದಿದ್ದು, ಸೂಕ್ತ ಪರಿಹಾರ ಕ್ರಮ ಸೂಚಿಸಲಾಯಿತು.

ಈ ಶಿಬಿರದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸಿಂಧೂ ಅಕ್ಷ್, ಉಪಾಧ್ಯಕ್ಷ ವೇಣುಗೋಪಾಲ್, ಡಾ.ಮನೋಜ್ ಕುಮಾರ್, ಶಾಹನವಾಝ್ ಮತ್ತು ಹನುಮಾನ್ ಉಪಸ್ಥಿತರಿದ್ದರು.