ಹೊಳೆನರಸೀಪುರ:ಅಂಬೇಡ್ಕರ್ ರವರು ಮಹಾತ್ಮ ಗಾಂಧೀಜಿಗೆ ನಿಷ್ಟರಾಗಿದ್ದರೆ ಪ್ರಧಾನಿ ಹುದ್ದೆಯನ್ನೂ ಪಡೆಯ ಬಹುದಿತ್ತೇನೋ-ಡಾ.ನಟರಾಜ್

ಹೊಳೆನರಸೀಪುರ:ಅಂಬೇಡ್ಕರ್ ಭಾರತದಲ್ಲಿ ಹುಟ್ಟಿ,ಹತ್ತಾರು ಧರ್ಮ,ನೂರಾರು ಬಗೆಯ ಆಚರಣೆಗಳನ್ನು ಹೊಂದಿರುವ ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತಕ್ಕೆ ತಕ್ಕ ಸಂವಿಧಾನ ನೀಡಿದ್ದರಿಂದ ದೇಶದ ಎಲ್ಲ ಜನರ ಬದುಕಿಗೆ ಬೆಳಕು ಸಿಕ್ಕಿದೆ. ಅವರು ನೀಡಿದ ಸಂವಿಧಾನದಿಂದ ದೇಶದ ಯಾರು ಬೇಕಾದರೂ ಪ್ರಧಾನಿ ಆಗಬಹುದು ಎಂಬುದನ್ನು ತೋರಿಸಿಕೊಟ್ಟಿದೆ ಎಂದು ಪ್ರಾದೇಶಿಕ ಸಾರಿಗೆ ಇಲಾಖೆಯ ಆಯುಕ್ತ ಸಿ.ಟಿ.ಮೂರ್ತಿ ಅಭಿಪ್ರಾಯಪಟ್ಟರು.

ಜಿಎಸ್ಟಿ ಸುವಿಧಾ ಹಾಗೂ ಭಾರತ್ ಒನ್ ಸೇವಾ ಕೇಂದ್ರದವರು ಡಾ.ಬಿ.ಆರ್ ಅಂಬೇಡ್ಕರ್ ಅವರ 69 ನೇ ಪರಿನಿರ್ವಾಣ ದಿನಾಚರಣೆ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರದಲ್ಲಿ ಸಂದೇಶ ನೀಡಿ ಕಲವರು ಇದ್ದೂ ಸತ್ತಂತಿರುತ್ತಾರೆ. ಮತ್ತೆ ಕೆಲವರು ಮರಣಹೊಂದಿದ್ದರೂ ಸದಾ ನಮ್ಮ ಜೊತೆಯಲ್ಲೇ ಇದ್ದಂತಿರುತ್ತಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭೂಮಿ ಇರುವವರೆಗೂ ಎಲ್ಲರ ಮನದಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ. ಅಂಬೇಡ್ಕರ್ ಅವರು ವೈವಿದ್ಯತೆಯಲ್ಲಿ ಏಕತೆಯನ್ನು ತಂದರು. ಭಾರತದಲ್ಲಿ ಅಂಬೇಡ್ಕರ್ ಇರದಿದ್ದರೆ ದೇಶದ ಜನರಲ್ಲಿ ಇನ್ನೂ ಸಮಾನತೆ ಸಾಧ್ಯ ಆಗುತ್ತಿರಲಿಲ್ಲ. ಇಂದು ಅಂಬೇಡ್ಕರ್ ಅವರ ಪುಣ್ಯ ಸ್ಮರಣೆಯ ದಿನ. ಈ ದಿನವನ್ನು ಪ್ರತಿಹಳ್ಳಿಯಲ್ಲೂ ಆಚರಿಸಿ ಅವರ ಸಂದೇಶಗಳನ್ನು ತಿಳಿಸಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಕೆ.ಆರ್. ನಗರ ತಾಲ್ಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಎದೆರೋಗ ತಜ್ಞ ಡಾ. ನಟರಾಜ್ ಡಾ. ಬಿ.ಆರ್. ಅಂಬೇಡ್ಕರ್ ಅವರು ಮಾನವ ತಾವಾದದ ವಿಜ್ಞಾನಿ,ಅಂಬೇಡ್ಕರ್ ಅವರ ಜೀವನ ಚರಿತ್ರೆ ಓದುತ್ತಿದ್ದರೆ ಅವರು ಅನಭವಿಸಿದ ನೋವು,ಅವಮಾನಗಳು,ಅವರು ಪಟ್ಟಕಷ್ಟ ನಮಗೆ ಕಣ್ಣೀರು ತರಿಸುತ್ತದೆ.ಅವರು ನಂಬಿರುವ ತತ್ವಹಾಗೂ ಸಿದ್ದಾಂತ ಬಿಟ್ಟು ಯಾರೊಂದಿಗೂ ರಾಜಿ ಮಾಡಿಕೊಳ್ಳಲಿಲ್ಲ. ಮಹಾತ್ಮ ಗಾಂಧಿಜಿ ಅವರ ಅನೇಕ ಸಲಹೆಗಳನ್ನು ಒಪ್ಪಿರಲಿಲ್ಲ. ಅವರು ಗಾಂಧಿಗೆ ನಿಷ್ಟರಾಗಿದ್ದರೆ ಪ್ರಧಾನಿ ಹುದ್ದೆಯನ್ನೂ ಪಡೆಯಬಹುದಿತ್ತೇನೋ.ಆದರೆ ಅವರು ತತ್ವ ಸಿದ್ದಾಂತಗಳಿಗೆ ಮಾತ್ರ ನಿಷ್ಟರಾಗಿದ್ದರು ಎಂದರು.

ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಮಾತನಾಡಿದರು.ಡಿ.ವೈ.ಎಸ್ಪಿ ಶಾಲೂ,ಪುರಸಭೆ ಮುಖ್ಯಾಧಿಕಾರಿ ನಾಗೇಂದ್ರ ಕುಮಾರ್,ಕಾಂಗ್ರೆಸ್ ಮುಖಂಡ ಎಚ್.ವಿ. ಪುಟ್ಟರಾಜು,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ. ಲಕ್ಷ್ಮಣ,ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರುತಿ ಗುಂಡೇಗೌಡ,ವಿಶ್ರಾಂತ ವಿಜ್ಞಾನಿ ಅಣ್ಣಯ್ಯ, ನುಗ್ಗೇಹಳ್ಳಿ ಸಬ್ಇನ್ಸ್ಪೆಕ್ಟರ್ ಯತೀಶ್,ಸಂಸ್ಥೆಯ ಡೋನಾಲ್ಡ್ ರಂಗಸ್ವಾಮಿ ಭಾಗವಹಿಸಿದ್ದರು.

ಲಕ್ಮೀಕಾರ್ಯಕ್ರಮ ನಿರೂಪಿಸಿದರು.ಇದೇ ಸಂದರ್ಭದಲ್ಲಿ ಮೂರ್ತಿ ದಂಪತಿಗಳನ್ನು ಸನ್ಮಾನಿಸಲಾಯಿತು.

————-ಸುಕುಮಾರ್

Leave a Reply

Your email address will not be published. Required fields are marked *

× How can I help you?