ಹೊಳೆನರಸೀಪುರ-ಹಾಡುಹಗಲೇ ಮಹಿಳೆಯ ಸರ ಅಪಹರಿಸಿದ ದುಷ್ಕರ್ಮಿ-ಪೋಲೀಸರ ಭಯವೇ ಇಲ್ಲದಂತಾಗಿದೆ ಎಂದ ಸಾರ್ವಜನಿಕರು-ಪಾರ್ಕಿಂಗ್ ಸಮಸ್ಯೆ ಸರಿಪಡಿಸಲು ಆಗ್ರಹ

ಹೊಳೆನರಸೀಪುರ-ಪಟ್ಟಣದ ಮಹಿಳೆಯೊಬ್ಬರ ಮಾಂಗಲ್ಯ ಸರವನ್ನು ಹಾಡಹಗಲೇ ದುಷ್ಕರ್ಮಿಯೊಬ್ಬ ಕಿತ್ತು ಪರಾರಿಯಾಗಿರುವ ಘಟನೆ ಪಟ್ಟಣದ ದೇವಾಂಗ ಬಡಾವಣೆಯಲ್ಲಿ ನಡೆದಿದೆ.

ಬಡಾವಣೆಯ ನಿವಾಸಿ ದೇವಕಿ ಎಂಬ ಮಹಿಳೆಯು ದೇವಸ್ಥಾನಕ್ಕೆ ಹೋಗಿ ಪೂಜೆ ಮುಗಿಸಿ ಮನೆಯೊಳಗೇ ಹೋಗುವುದನ್ನೇ ಕಾಯುತ್ತಿದ್ದ ಆಗುಂತಕ ಮನೆಗೆ ನುಗ್ಗಿ ಸುಮಾರು 30 ಗ್ರಾಂ ಗು ಹೆಚ್ಚು ತೂಕದ ಮಾಂಗಲ್ಯ ಸರವನ್ನು ಅಪಹರಿಸಿ ಮಹಿಳೆಯನ್ನು ಕೊಠಡಿಗೆ ಕೂಡಿ ಹಾಕಿ ಪರಾರಿಯಾಗಿದ್ದಾನೆ.

ಮಧ್ಯಾಹ್ನ 1.15ರ ಸಮಯದಲ್ಲಿ ಈ ಘಟನೆ ನಡೆದಿದ್ದು ಪಟ್ಟಣದಾದ್ಯಂತ ಆತಂಕದ ವಾತಾವರಣ ಮಡುವುಗಟ್ಟಿದೆ.

ಸ್ಥಳಕ್ಕೆ ಎಸ್ ಐ ಅಭಿಜಿತ್,ಅಪರಾಧ ವಿಭಾಗದ ಎಸ್,ಐ ರಂಗಸ್ವಾಮಿ,ಮಂಜೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪಟ್ಟಣದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದು ಪುಂಡರಿಗೆ ಪೋಲೀಸರ ಭಯವೇ ಇಲ್ಲದಂತಾಗಿದೆ.ಬೈಕ್ ಕಳ್ಳತನ ಪ್ರಕರಣಗಳು ಸಹ ನಡೆಯುತ್ತಿದ್ದು ಒಟ್ಟಾರೆ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಳ್ಳ ಹಿಡಿದಿದೆ ಎಂಬ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಜೊತೆಗೆ ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ತೀವ್ರವಾಗಿದ್ದು ವಾಹನ ಸವಾರರು ತಮ್ಮ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುತ್ತಿದ್ದು ಇದರಿಂದ ಪಾದಚಾರಿಗಳ ಓಡಾಟಕ್ಕೆ ತೊಂದರೆಯಾಗಿದೆ.ಇದಕ್ಕೂ ಪೋಲೀಸರ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪಗಳಿವೆ.

ಇನ್ನು ಮುಂದಾದರು ಅಪರಾಧ ಪ್ರಕರಣಗಳ ಹತ್ತಿಕ್ಕಲು ಹಾಗು ಪಾರ್ಕಿಂಗ್ ಸಮಸ್ಯೆ ಸರಿಪಡಿಸಲು ಪೊಲೀಸರು ಮುಂದಾಗುತ್ತಾರ ಕಾದು ನೋಡಬೇಕಾಗಿದೆ.

——————-ವಸಂತ ಕುಮಾರ್

Leave a Reply

Your email address will not be published. Required fields are marked *

× How can I help you?