ಹೊಳೆನರಸೀಪುರ-ಜೈವೀರ ಹನುಮಾನ್ ದೊಡ್ಡಗರಡಿಯಲ್ಲಿ ‘ಮಟ್ಟಿ ಪೂಜೆ’-ಮೈಸೂರು ಮಹಾರಾಜರಿಂದ ನಿರ್ಮಾಣವಾಗಿರುವ ಗರಡಿ ಮನೆ

ಹೊಳೆನರಸೀಪುರ:ಪಟ್ಟಣದ ಜೈವೀರಹನುಮಾನ್ ದೊಡ್ಡಗರಡಿಯಲ್ಲಿ ನವರಾತ್ರಿ ಪೂಜೆ ನಡೆದ ನಂತರದ ಮಟ್ಟಿಪೂಜೆಯನ್ನು ಮಂಗಳವಾರ ನಡೆಸಲಾಯಿತು.

ನವರಾತ್ರಿ ಸಮಯದಲ್ಲಿ 9 ದಿನ ಗರಡಿಯಲ್ಲಿ ಯಾವುದೇ ತರಬೇತಿ ಇರುವುದಿಲ್ಲ.9 ದಿನ ನವರಾತ್ರಿ ಪೂಜೆ ಸಲ್ಲಿಸಿದ್ದೆವು.ಇಂದು ಮಟ್ಟಿಪೂಜೆ ಸಲ್ಲಿಸಿ ಬಲಿ ಅರ್ಪಿಸಿದ್ದೇವೆ. ನಾಳೆಯಿಂದ ಗರಡಿಯಲ್ಲಿ ಕುಸ್ತಿ ತರಬೇತಿ ನೀಡಲಾಗುವುದು ಎಂದು ಜೈ ವೀರ ಹನುಮಾನ್ ದೊಡ್ಡಗರಡಿಯ ಅಧ್ಯಕ್ಷ ಪೈ. ಎಚ್.ವಿ. ಪುಟ್ಟರಾಜು ತಿಳಿಸಿದರು.

ಗರಡಿಯಲ್ಲಿ 35 ಹುಡುಗರು ಕುಸ್ತಿ ತರಬೇತಿ ಪಡೆಯುತ್ತಿದ್ದು ತರಬೇತಿಗೆ ಮುನ್ನ ಅವರಿಗೆ ಚೆನ್ನಾಗಿ ವ್ಯಾಯಾಮ ಮಾಡಿಸಿ. ಕೈಕಾಲುಗಳು ಶಕ್ತಿಯುತವಾದ ನಂತರ ಕುಸ್ತಿ ತರಬೇತಿ ನೀಡಲಾಗುವುದು. ನಮ್ಮ ಗರಡಿಯ ಯುವಕ ಪ್ರಜ್ವಲ್ ನನ್ನು ರಾಷ್ಟ್ರೀಯ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಲು ಅನುಕೂಲಾಗುವಂತೆ ಹಚ್ಚಿನ ತರಬೇತಿಗೆ ಕಳುಹಿಸಲಾಗುತ್ತಿದೆ.

ಮೈಸೂರು ದೊರೆ ಕೃಷ್ಣರಾಜ ಒಡೆಯರ್ ಆಗಿನ ಕುಸ್ತಿಪಟುಗಳನ್ನು ಪ್ರೋತ್ಸಾಹಿಸಲು ತರಬೇತಿಗಾಗಿ ಒಂದು ದೊಡ್ಡ ನಿವೇಶನದಲ್ಲಿ ಗರಡಿ ಮನೆ ಕಟ್ಟಿಸಿಕೊಟ್ಟಿದ್ದು ಕಳೆದ ಸುಮಾರು 80 ವರ್ಷಗಳಿಂದ ಇಲ್ಲಿ ಕುಸ್ತಿ ತರಬೇತಿ ನಡೆಯುತ್ತಿದೆ ಎಂದರು.

ದಸರಾ ಸಮಯದಲ್ಲಿ ಅರಮನೆಯ ಅಖಾಡದಲ್ಲಿ ನಮ್ಮ ಗರಡಿಯ ಪೈಲ್ವಾನರು ಕುಸ್ತಿ ಆಡುತ್ತಿದ್ದರು ಎಂದು ನಮಗೆ ಕುಸ್ತಿ ಕಲಿಸುತ್ತಿದ್ದ ಗುರುಗಳು ಹೇಳುತ್ತಿದ್ದರು. ನಮ್ಮ ಗರಡಿಯಲ್ಲಿ ಕುಸ್ತಿ ಆಡುತ್ತಾ, ತರಬೇತಿ ನೀಡುತ್ತಾ ಇದ್ದವರು ಇಂದು ವಯಸ್ಸಾಗಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರಲ್ಲಿ 40 ಕ್ಕೂ ಹೆಚ್ಚು ಜನರು ಪೈಲ್ವಾನರ ಮಾಸಾಸನ ಪಡೆಯುತ್ತಿದ್ದಾರೆ ಎಂದು ಗರಡಿಯ ಕಾರ್ಯದರ್ಶಿ ಪೈ.ಎಚ್.ವಿ. ಸುರೇಶ ಕುಮಾರ್ ವಿವರಿಸಿದರು.

ಪೈ. ಧನಂಜಯ, ಓಲೆ ಕುಮಾರ್, ಉಮೇಶ್, ಪುರಸಭಾ ಸದಸ್ಯ ಮಂಜು, ಕುಸ್ತಿಪಟುಗಳಾದ ಶಶಿಕುಮಾರ್, ಕಿರಣ್, ರಾಘವೇಂದ್ರ, ಚರಣ್, ದಿಲೀಪ್, ಪವನ್ರಾಜ್, ಮಹಿಳಾ ಕುಸ್ತಿಪಟು ತಿರುಮಲಪ್ರಿಯಾ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

—————————-ವಸಂತಕುಮಾರ್

Leave a Reply

Your email address will not be published. Required fields are marked *

× How can I help you?