ಹೊಳೆನರಸೀಪುರ-ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಚುನಾವಣೆ ವೇಳಾಪಟ್ಟಿ ಪ್ರಕಟ-ಅಕ್ಟೊಬರ್ 28 ಕ್ಕೆ ನಡೆಯಲಿರುವ ಚುನಾವಣೆ-ಕೆ.ಎಚ್.ಸಪ್ನರಿಂದ ಮಾಹಿತಿ

ಹೊಳೆನರಸೀಪುರ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಚುನಾವಣೆ ವೇಳಾಪಟ್ಟಿ ಪ್ರಕಟಗೊಂಡಿದ್ದು ಅಕ್ಟೋಬರ್ 9 ರಿಂದ ಅಕ್ಟೋಬರ್ 18 ರ ವರೆಗೆ ಬೆಳಿಗ್ಗೆ 11 ರಿಂದ ಸಂಜೆ 5 ಗಂಟೆವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ ಎಂದು ಚುನಾವಣಾಧಿಕಾರಿಯಾಗಿರುವ ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಎಚ್. ಸಪ್ನಾ ತಿಳಿಸಿದ್ದಾರೆ.

ಮಂಗಳವಾರ ಪತ್ರಿಕಾಘೋಷ್ಠಿ ನಡೆಸಿ ಮಾಹಿತಿ ತಿಳಿಸಿದ ಅವರು,19 ರಂದು ನಾಮಪತ್ರ ಪರಿಶೀಲನೆ, 21 ರಂದು ಸಂಜೆ 5.30 ರವರೆಗೆ ನಾಮಪತ್ರ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಚುನಾವಣೆ 28 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ನಡೆಯಲಿದೆ. ಈ ಚುನಾವಣೆಯ ಮತದಾನ ಸೇರಿದಂತೆ ಎಲ್ಲಾ ಮತದಾನ ಪ್ರಕ್ರಿಯೆಗಳು ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ನಡೆಯಲಿದೆ ಎಂದು ಹೇಳಿದರು.

ತಾಲ್ಲೂಕಿನಲ್ಲಿ 1800 ಜನ ಸರಕಾರಿ ನೌಕರರ ಸಂಘದ ಸದಸ್ಯರಿದ್ದು 33 ನಿರ್ದೇಶಕರುಗಳ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ತಾಲ್ಲೂಕಿನ ಕೃಷಿ ಇಲಾಖೆಯಿಂದ 1, ಪಶುಪಾಲನಾ ಇಲಾಖೆಯಿಂದ ೧, ಕಂದಾಯ ಇಲಾಖೆ, ತಾಲ್ಲೂಕು ಕಚೇರಿ, ಕ್ಷೇತ್ರ ಸಿಬ್ಬಂದಿಗಳಿಂದ 2, ಲೋಕೋಪಯೋಗಿ ಇಲಾಖೆ ಜಲಸಂಪನ್ಮೂಲ, ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆಯಿಂದ 1, ಪಂಚಾಯತ್ರಾಜ್ ಇಲಾಖೆಯಿಂದ 1, ಸಕರ್ಾರಿ ಪ್ರಾಥಮಿಕ ಶಾಲೆಯ 3, ಸರಕಾರಿ ಪ್ರೌಢಶಾಲೆಯ 1, ಸಾರ್ವಜನಿಕ ಶಿಕ್ಷಣ ಇಲಾಖೆ ಆಡಳಿತ ಕಚೇರಿಯ 1, ಸರಕಾರಿ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳ 1, ಸಮಾಜ ಕಲ್ಯಾಣ ಹಾಗು ಹಿಂದುಳಿದ ಮತ್ತು ಅಲ್ಪ ಸಂಖ್ಯಾತ ಇಲಾಖೆಯಿಂದ 1, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸಾರ್ವಜನಿಕ ಆಸ್ಪತ್ರೆ, ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ ಹಾಗೂ ಉಳಿದ ಸಿಬ್ಬಂದಿಗಳು 4, ತೋಟಗಾರಿಕೆ ಇಲಾಖೆ 1, ಖಜಾನೆ ಇಲಾಖೆ 1, ಭೂಮಾಪನ, ಭೂದಾಖಲೆ, ನೊದಂಣಿ ಹಾಗೂ ಮುದ್ರಾಂಕ ಇಲಾಖೆ 1 ನ್ಯಾಯಾಂಗ ಇಲಾಖೆ 1, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ 1 ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 1 ಮೀನುಗಾರಿಕೆ, ತೂಕ ಮತ್ತು ಅಳತೆ ಇಲಾಖೆ ಹಾಗೂ ಸಾರಿಗೆ ಇಲಾಖೆ 1, ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆ 1 ಅಬಕಾರಿ ಮತ್ತು ವಾಣಿಜ್ಯ ತೆರಿಗೆಗಳ ಇಲಾಖೆ 1, ನಗರಾಭಿವೃದ್ಧಿ ಪ್ರೌರಾಡಳಿತ ಇಲಾಖೆ, ಸಹಕಾರ ಮತ್ತು ಸಹಕಾರ ಸಂಘಗಳ ಲೆಕ್ಕಪರಿಶೋಧಕ ಹಾಗೂ ಸಾಂಖ್ಯಿಕ ಇಲಾಖೆ 1, ಇದಲ್ಲದೆ ಮೇಲೆ ಸೇರದಿರುವ ಇಲಾಖೆಯಿಂದ 2 ಅಭ್ಯರ್ಥಿಗಳಿಗೆ ಸ್ಪರ್ದಿಸಲು ಅವಕಾಶ ಇರುತ್ತದೆ.

ಚುನಾವಣೆಗೆ ಸ್ಪರ್ಧೆ ಬಯಸುವ ಸರಕಾರಿ ನೌಕರರು 100 ರೂ ಪಾವತಿಸಿ ಅರ್ಜಿ ಪಡೆದುಕೊಳ್ಳಬೇಕು. ಚುನಾವಣೆಗೆ ಸ್ಪರ್ದಿಸುವವರು 2000 ಸಾವಿರ ಠೇವಣಿ ಚುನಾವಣಾಧಿಕಾರಿ ಕಚೇರಿಗೆ ಪಾವತಿಸಿ ರಶೀತಿ ಪಡೆಯಬೇಕು.

ಸಂಘದ ಬೈಲಾ ನಿಯಮದಂತೆ 5 ವರ್ಷಗಳ ಸದಸ್ಯತ್ವ ಹೊಂದಿರುವ ಎಲ್ಲಾ ರಾಜ್ಯ ಸರಕಾರಿ ರಿ ನೌಕರರು 2024 ರಿಂದ 2029 ರ ಸಂಘದ ಚುನಾವಣೆಯಲ್ಲಿ ಸ್ಪರ್ದಿಸಲು ಅರ್ಹರಾಗಿರುತ್ತಾರೆ. ನಾಮ ಪತ್ರಕ್ಕೆ 5 ವರ್ಷದ ಸದಸ್ಯತ್ವ ಇರುವ ಸದಸ್ಯರಲ್ಲಿ ಒಬ್ಬರು ಸೂಚಕರಾಗಿ ಮತ್ತೊಬ್ಬರು ಅನುಮೋಧಕರಾಗಿ ಒಬ್ಬ ಅಭ್ಯರ್ಥಿಗೆ ಮಾತ್ರ ಸಹಿಹಾಕಬೇಕು. ಸೂಚಕರಾಗಿ, ಅನುಮೋಧಕರಾಗಿ, ಸಹಿಹಾಕಿದವರು ಚುನಾವಣೆಗೆ ಸ್ಪರ್ದಿಸಲು ಅವಕಾಶ ಇರುವುದಿಲ್ಲ.

ಆಯಾಯಾ ಇಲಾಖೆಯ ಸದಸ್ಯರು ತಮ್ಮ ಇಲಾಖೆಯಿಂದ ಸ್ಪರ್ದಿಸಿರುವ ಅಭ್ಯರ್ಥಿಗೆ ಮಾತ್ರ ಮತದಾನ ಮಾಡಬೇಕು ಎಂದು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *

× How can I help you?