ಹೊಳೆನರಸೀಪುರ-ರಿಯೋ ಪ್ರೀ ಸ್ಕೂಲ್,ಅರವಿಂದ ಕಣ್ಣಿನ ಆಸ್ಪತ್ರೆ,ಈರೋಡು ಲಯನ್ಸ್ ಕ್ಲಬ್ ಸಹಯೋಗದಲ್ಲಿ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ

ಹೊಳೆನರಸೀಪುರ:ಪಟ್ಟಣದ ರಿಯೋ ಪ್ರೀ ಸ್ಕೂಲ್ ನವರು ಕೊಯಮತ್ತೂರು ಅರವಿಂದ ಕಣ್ಣಿನ ಆಸ್ಪತ್ರೆ ಹಾಗೂ ಈರೋಡು ಲಯನ್ಸ್ ಕ್ಲಬ್ ಸಹಯೋಗದಲ್ಲಿ ಉಚಿತ ಕಣ್ಣಿನ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಿದ್ದು ಈ ಶಿಬಿರದಲ್ಲಿ 366 ಜನರು ಭಾಗವಹಿಸಿದ್ದರು.

ಇವರಲ್ಲಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಅವಶ್ಯಕತೆ ಇದ್ದ 60 ರೋಗಿಗಳನ್ನು ಉಚಿತವಾಗಿ ಕೊಯಮತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಶಸ್ತ್ರ ಚಿಕಿತ್ಸೆ ಮಾಡಸಿದ್ದರು. 16 ರಂದು ಬುಧವಾರ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಆಗಮಿಸಿದ ಜನರಿಗೆ ಇಲ್ಲಿನ ರಿಯೋ ಪ್ರೀ ಸ್ಕೂಲ್ನಲ್ಲಿ ಸಿಹಿ ಹಂಚಿ ಸಹಚರರೊಂದಿಗೆ ಮನೆಗೆ ಕಳುಹಿಸಿಕೊಡಲಾಯಿತು.

ಅರವಿಂದ್ ಆಸ್ಪತ್ರೆಯ ಡಾ. ವಿಜಯ್ ಹಾಗೂ ಸಿಬ್ಬಂದಿ ಚಿಕಿತ್ಸೆ ನಡೆಸಿದ್ದರು.

ರಿಯೋ ಫ್ರೀಸ್ಕೂಲಿನ ಸುಪ್ರೀತ್ ಪಾಸ್ವಾನ್, ಕರವೇ ತಾಲ್ಲೂಕು ಯುವ ಘಟಕದ ಅಧ್ಯಕ್ಷ ಎಂ.ಪಿ. ನವೀನ್, ಡಿ.ಕೆ. ಕುಮಾರಯ್ಯ, ಡಿ.ಕೆ. ಗೋಕುಲ್ಸಚ್ಚಿ, ಗೋಕುಲ್ ಸೆನ್, ಸಂತೋಷ್, ಮಂಜು, ರವಿ, ಸಾಗರ್, ಕುಮಾರ್, ಇತರರು ಶಸ್ತ್ರ ಚಿಕಿತ್ಸಾ ಶಿಬಿರದ ನೇತೃತ್ವಹಿಸಿದ್ದರು.

———————--ವಸಂತ್ ಕುಮಾರ್

Leave a Reply

Your email address will not be published. Required fields are marked *

× How can I help you?