ಹೊಳೆನರಸೀಪುರ:ಇಂದಿನ ದಿನದಲ್ಲಿ ಯಾವುದೇ ಒಳ್ಳೆಯ ಕೆಲಸವನ್ನು ಮಾಡಿಸಲು ಹೈ ಕೋರ್ಟ್ ಹಾಗೂ ಸುಪ್ರಿಂ ಕೋರ್ಟ್ ಕಟ್ಟು ನಿಟ್ಟಿನ ಸೂಚನೆ ನೀಡಬೇಕಾದ ಅನಿವಾರ್ಯತೆ ಉಂಟಾಗಿರುವುದು ವಿಷಾಧನೀಯ ಎಂದು ಸರಕಾರಿ ಗೃಹ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಬುಧವಾರ ಸರಕಾರಿ ಗೃಹ ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ “ವಿಶ್ವಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಕ್ಟೋಬರ್ 10ನ್ನು ವಿಶ್ವಮಾನಸಿಕ ಆರೋಗ್ಯ ದಿನ ಎಂದು ಆಚರಿಸಲಾಗುತ್ತಿದೆ. ಈ ವರ್ಷದ ಘೋಷವಾಕ್ಯ ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯ ಎಂಬುದಾಗಿದೆ.
ಭಾರತದಲ್ಲಿ ಶೇ 50ರಷ್ಟು ಜನರು ತಮ್ಮ ಕೆಲಸದ ಸ್ಥಳದಲ್ಲಿ ಖಿನ್ನತೆಗೆ,ಉದ್ವೇಗಕ್ಕೆ ಒಳಗಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎನ್ನುವ ಮಾಹಿತಿ ಇರುವುದರಿಂದ ನ್ಯಾಯಾಲಯ ಮಾನಸಿಕ ಆರೋಗ್ಯ ಜಾಗೃತಿ ದಿನವನ್ನು ಕಡ್ಡಾಯವಾಗಿ ಆಚರಿಸಿ ಎಂದು ಸೂಚಿಸಿದೆ ಎಂದರು.
ಇಂದಿನ ದಿನದಲ್ಲಿ ಅನೇಕರು ಆ ಕಡೆ ಕುಟುಂಬ, ಈ ಕಡೆ ಕೆಲಸವನ್ನು ಸಮರ್ತವಾಗಿ ನಿರ್ವಹಿಸಲು ಸಾಧ್ಯವಾಗದೆ ಕುಗ್ಗಿಹೋಗಿದ್ದಾರೆ. ಇಂತಹ ಪರಿಸ್ಥಿತಿಯಿಂದ ಹೊರಬಂದು ಬಂದದ್ದು ಬರಲಿ ಎದರಿಸುತ್ತೇನೆ ಎನ್ನುವ ಮಾನೋಭಾವ ಬೆಳೆಸಿಕೊಂಡರೆ ಜೀವನ ಉತ್ತಮವಾಗಿ ಸಾಗುತ್ತದೆ ಎಂದರು.
ಸರಕಾರಿ ಆಸ್ಪತ್ರೆಯ ಮಾಸಸಿಕ ರೋಗ ತಜ್ಞ ಡಾ. ಪ್ರಶಾಂತ್ ಯಾದವ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಕರಾತ್ಮಕವಾಗಿ ಚಿಂತಿಸುವ ಮನಸ್ಥಿತಿ, ತಪ್ಪನ್ನು ಖಂಡಿಸುವ ಹಾಗೂ ಒಳ್ಳೆಯದನ್ನು ಪ್ರಶಂಸಿಸುವ ಮನೋಭಾವ ಬೆಳೆಸಿಕೊಂಡು ಬೆಳೆಯಬೇಕು. ಪ್ರತಿನಿತ್ಯ ವ್ಯಾಯಾಮ ಮಾಡುವುದರಿಂದಲೂ ಮಾನಸಿಕ ಆರೋಗ್ಯ ಉತ್ತಮವಾಗುತ್ತದೆ. ಮಾನಸಿಕ, ದೈಹಿಕ ಆರೋಗ್ಯವನ್ನು ಉತ್ತಮ ಪಡಿಸಿಕೊಳ್ಳಲು ನಾವು ಸದಾ ಸಕಾರಾತ್ಮಕ ಚಿಂತನೆ ಹಾಗೂ ಒಳ್ಳೆಯವಾತಾವರಣವನ್ನು ಸೃಷ್ಠಿಸಿಕೊಳ್ಳಬೇಕು ಎಂದರು.
ಪ್ರಾಧ್ಯಾಪಕಿ ಫಕೀರಮ್ಮ ಮುರಗೋಡು ಮಾತನಾಡಿ, ಹಿಂದಿನ ದಿನದಲ್ಲಿ ಒಟ್ಟು ಕುಟುಂಬ ಇರುತ್ತಿತ್ತು. ಒಂದು ಕುಟುಂಬದಲ್ಲಿ ಹತ್ತಿಪ್ಪತ್ತು ಜನರು ಇರುತ್ತಿದ್ದರು. ಕುಟುಂಬದ ಹಿರಿಯರ ನಡವಳಿಕೆ ಕಿರಿಯರಿಗೆ ಮಾರ್ಗದರ್ಶನ ನೀಡುತ್ತಿತ್ತು. ಯಾರಾದರೂ ತಪ್ಪುಮಾಡಿದರೆ ಖಿನ್ನತೆಗೆ ಒಳಗಾದರೆ ಗಮನಿಸಿ ಸರಿಪಡಿಸುತ್ತಿದ್ದು.ಆದರೆ ಇಂದಿನ ದಿನದಲ್ಲಿ ಅಪ್ಪ ಅಮ್ಮನಿಗೇ ಮಕ್ಕಳ ಬಗ್ಗೆ ಗಮನಹರಿಸಲು ಸಾಧ್ಯ ಆಗುತ್ತಿಲ್ಲದ ಕಾರಣ ಮಾನಸಿಕ ಆರೋಗ್ಯ ಹದಗೆಡುತ್ತಿದೆ ಎಂದರು.
ಕಾಲೇಜಿನ ಪ್ರಾಧ್ಯಾಪಕರಾದ ಜಯಚಂದ್ರ ಉಪಸ್ಥಿತರಿದ್ದರು.ಅನುಶ ಸ್ವಾಗತಿಸಿದರು.
——————–ವಸಂತ್ ಕುಮಾರ್