
ಹೊಳೆನರಸೀಪುರ:ಪಟ್ಟಣದ ಬಯಲುರಂಗಮಂದಿರ ಆವರಣದಲ್ಲಿ ನಿರ್ಮಿಸಲಾಗುವ ಭವ್ಯ ವೇದಿಕೆಯಲ್ಲಿ ನಾಳೆ/ ಭಾನುವಾರ ಜಿಲ್ಲಾ ಮಟ್ಟದ ಭರತನಾಟ್ಯ ಮತ್ತು ಪಾಶ್ಚಾತ್ಯ ನೃತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು “ಎಫ್ ಸ್ಕ್ವೇರ್ ಡ್ಯಾನ್ಸ್ ಅಂಡ್ ಫಿಟ್ ನೆನ್ಸ್ ಡೆನ್ ಸಂಸ್ಥೆಯ” ಕೀರ್ತನಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಈಗಾಗಲೇ 12 ಕ್ಕೂ ಹೆಚ್ಚು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲು ನೊಂದಾಯಿಸಿಕೊಂಡಿದ್ದಾರೆ.ಭಾನುವಾರವೂ ಬೆಳಿಗ್ಗೆ 9 ಗಂಟೆಯಿಂದ ನೊಂದಾಯಿಸಿಕೊಂಡು 1 ಗಂಟೆ ನಂತರ ಸ್ಪರ್ಧೆಯನ್ನು ಪ್ರಾರಂಭಿಸುತ್ತೇವೆ. ನೊಂದಾಯಿತ ತಂಡಗಳ ಪ್ರದರ್ಶನ ಮುಗಿಯುವವರೆಗೂ ಸ್ಪರ್ಧೆ ಮುಂದುವರಿಯಲಿದೆ ಎಂದು ವಿವರಿಸಿದ್ದಾರೆ. ಸ್ಪರ್ಧೆಯನ್ನು ನಮ್ಮ ಊರಿನ ಜನಪ್ರತಿನಿಧಿಗಳು ಹಾಗೂ ಗಣ್ಯರು ಉದ್ಘಾಟಿಸಲಿದ್ದಾರೆ. ವಿಜೇತ ತಂಡಗಳಿಗೆ ಸೂಕ್ತ ಬಹುಮಾನ ಹಾಗೂ ಪ್ರಮಾಣಪತ್ರ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
—-–ಸುಕುಮಾರ್