ಹೊಳೆನರಸೀಪುರ:ತಾಲ್ಲೂಕಿನಲ್ಲಿ ಶ್ರೀರಾಮ ಸೇನೆ ಪ್ರಾರಂಭಿಸುತ್ತಿದ್ದು ತಾಲ್ಲೂಕು ಪದಾಧಿಕಾರಿಗಳನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ.ಸದ್ಯದಲ್ಲಿ ತಾಲ್ಲೂಕು ಘಟಕ ಉದ್ಘಾಟಿಸಲಾಗುವುದು ಎಂದು ಹಾಸನ ಜಿಲ್ಲಾ ಶ್ರೀ ರಾಮಸೇನೆ ಅಧ್ಯಕ್ಷ ಜಾನೇಕೆರೆ ಹೇಮಂತ್ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದತ್ತಮಾಲಾ ಕಾರ್ಯಕ್ರಮದ ಬಗ್ಗೆ ವಿವರಿಸಿ,ದತ್ತಮಾಲಾ ಅಭಿಯಾನ ನವಂಬರ್ 4 ರಿಂದ 10 ರ ವರೆಗೆ ನಡೆಯಲಿದ್ದು ಜಿಲ್ಲೆಯ ಪ್ರತೀ ತಾಲ್ಲೂಕಿನಿಂದ ಶ್ರೀರಾಮ ಸೇನೆಯ ಸದಸ್ಯರು ಭಾಗವಹಿಲಿದ್ದಾರೆ.
ನವಂಬರ್ 4 ರಂದು ತಾಲ್ಲೂಕಿನ ಶ್ರೀರಾಮಸೇನೆಯ ಸದಸ್ಯರು ಮಾಲಧಾರಣೆ ಮಾಡುತ್ತಾರೆ. ನವಂಬರ್ 10 ರಂದು ಬೆಳಿಗ್ಗೆ 6 ಗಂಟೆಗೆ ಎಲ್ಲಾ ಮಾಲಾಧಾರಿಗಳು ಚಿಕ್ಕಮಗಳೂರಿಗೆ ತೆರಳಿ ಅಲ್ಲಿನ ದತ್ತಪೀಠ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಈ ವರ್ಷದ ದತ್ತಮಾಲಾ ಅಭಿಯಾನದಲ್ಲಿ ರಾಜ್ಯದ ನಾನಾ ಭಾಗಗಳಿಂದ ಅಸಂಖ್ಯಾತ ಹಿಂದುಗಳು ಭಾಗವಹಿಸುತ್ತಿದ್ದಾರೆ.
ಪ್ರಮುಖವಾಗಿ ಸಿದ್ದಲಿಂಗಮಹಾಸ್ವಾಮಿ, ವಿವೇಕ ಚಿಂತಾಮಣಿ ಮಹರಾಜ್, ಪ್ರಮೋದ್ ಮುತಾಲಿಕ್, ಮಾಧವಿ ಲತಾ, ಸಿ.ಟಿ. ರವಿ ಸೇರಿದಂತೆ ದೇಶದ ನಾನಾ ಭಾಗಗಳಿಂದ ಬರುವ ಶ್ರೀರಾಮ ಸೇನೆಯ ಮುಖ್ಯಸ್ಥರು ಹಾಜರಿರಲಿದ್ದಾರೆಂದು ವಿವರಿಸಿದರು.
ಶ್ರೀ ರಾಮಸೇನೆ ಜಿಲ್ಲಾ ಕಾರ್ಯಾಧ್ಯಕ್ಷ ಮಹೇಶ್ ಕುಮಾರ್, ಮನೋಜ್ ಜಗತ್, ಉಪಾಧ್ಯಕ್ಷ ಕೆ.ಕೆ. ಪುನೀತ್, ತಾ. ಅಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷ ಅಭಿಷೇಕ್, ಅರಕಲಗೂಡು ಅಧ್ಯಕ್ಷ ಅಮಿತ್ ಕುಮಾರ್, ಪುನೀತ್ ಇತರರು ಸುದ್ದಿ ಗೋಷ್ಟಿಯಲ್ಲಿ ಭಾಗವಹಿಸಿದ್ದರು.
—————–-ವಸಂತ್ ಕುಮಾರ್