ಹೊಳೆನರಸೀಪುರ:ಬಾಲಕಿಯರ ಪದವಿ ಪೂರ್ವ ಸರಕಾರಿ ಕಾಲೇಜಿನಲ್ಲಿ ನಡೆದ “ನಮನ ಸಂಗಮ”-ಪ್ರತಿಭಾ ಪುರಸ್ಕಾರ-ಸನ್ಮಾನ ಕಾರ್ಯಕ್ರಮ

ಹೊಳೆನರಸೀಪುರ:ನಮ್ಮ ಬಾಲಕಿಯರ ಪದವಿ ಪೂರ್ವ ಸರಕಾರಿ ಕಾಲೇಜು 1981 ರಲ್ಲಿ ದೇವೇಗೌಡರ ಪ್ರಯತ್ನದಿಂದ ಪ್ರಾರಂಭವಾಯಿತು. ಅದಕ್ಕೂ ಮುನ್ನ 1949 ರಲ್ಲಿ ಇಲ್ಲಿ ಹೈಸ್ಕೂಲ್ ಪ್ರಾರಂಭವಾಗಿತ್ತು, ಅಂದಿನಿಂದ ಇಂದಿನವರೆಗೆ ಸಮಾಜದ ಅನೇಕರ ಸಹಾಯದಿಂದ, ಶಾಸಕ ಎಚ್.ಡಿ. ರೇವಣ್ಣ ಸಹಕಾರಿದಿಂದ ಅತ್ಯುತ್ತಮ ಕಟ್ಟಡ ಹಾಗೂ ಸೌಲಭ್ಯಗಳನ್ನು ಹೊಂದಿದೆ. ಇಷ್ಟೆಲ್ಲಾ ಸೌಲಭ್ಯಗಳಿದ್ದು ಉಪನ್ಯಾಸಕರೆಲ್ಲಾ ಅತ್ಯುತ್ತಮವಾಗಿ ಭೋದಿಸುತ್ತಿರುವುದರಿಂದ ನಮ್ಮ ಕಾಲೇಜು ಹಾಸನ ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಪ್ರಾಂಶುಪಾಲ ದೇವರಾಜ್ ವಿವರಿಸಿದರು.

ಶನಿವಾರ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಹಿರಿಯ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಬೀಳ್ಕೊಡುಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ “ನಮನ ಸಂಗಮ” ಉದ್ಘಾಟಿಸಿ ಮಾತನಾಡಿದ ಅವರು, ನಾವು ಈದಿನ ನಮ್ಮ ಕಾಲೇಜಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ನಿವೃತ್ತ ಹಾಗೂ ವರ್ಗಾವಣೆಗೊಂಡ ಉಪನ್ಯಾಸಕರನ್ನು ಸಸ್ಮಾನಿಸಿ ಗೌರವಿಸಿ ಬೀಳ್ಕೊಡುತ್ತಿದೇವೆ. ನಮ್ಮ ಕಾಲೇಜಿನಲ್ಲಿ ಆರ್ಟ್ಸ್, ಸೈನ್ಸ್, ಕಾಮರ್ಸ್ ವಿಷಯದಲ್ಲಿ ಒಟ್ಟು 6 ವಿಷಯಗಳಿದ್ದು ಎಲ್ಲಾ ವಿಭಾದಲ್ಲೂ ಹೆಚ್ಚಿನ ವಿದ್ಯಾರ್ಥಿಗಳಿದ್ದಾರೆ ಎಂದರು.

ನಿವೃತ್ತ ಪ್ರಾಂಶುಪಾಲ ಎಚ್.ಎಸ್. ಪುಟ್ಟಸೋಮಪ್ಪ ಮಾತನಾಡಿ, ಈ ನಾನೂ ಈ ಕಾಲೇಜಿನಲ್ಲಿ 12 ವರ್ಷ ಪ್ರಾಂಶುಪಾಲನಾಗಿ ಸೇವೆ ಸಲ್ಲಿಸಿದ್ದೇನೆ. ಈ ಕಾಲೇಜಿನ ಉಪನ್ಯಾಸಕರು ಅಂದಿನಿಂದ ಇಂದಿನ ವರೆಗೂ ವಿದ್ಯಾರ್ಥಿಗಳಿಗೆ ಅತ್ಯುತ್ತಮವಾಗಿ ಭೋಧಿಸುತ್ತಿರುವುದರಿಂದ ಫಲಿತಾಂಶ ಹೆಚ್ಚಾಗಿದ್ದು ಈ ಕಾಲೇಜಿಗೆ ಸೇರುವ ವಿದ್ಯಾರ್ಥಿನಿಯರ ಸಂಖ್ಯೆಯೂ ಹೆಚ್ಚಿದೆ. ನಮ್ಮ ಈ ಕಾಲೇಜಿನಲ್ಲಿ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು ಹೆಚ್ಚಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿ ಕಲಿತ ಅನೇಕರು ಒಳ್ಳೆಯ ಕೆಲಸಗಳನ್ನು ಪಡೆದು ಬದುಕು ರೂಪಿಸಿ ಕೊಂಡಿದ್ದಾರೆ.ಕಾಲೇಜಿನಲ್ಲಿ 11 ಖಾಯಂ ಉಪನ್ಯಾಸಕರು ಹಾಗು 7 ಅತಿಥಿ ಉಪನ್ಯಾಕರಿದ್ದು ಅತ್ಯುತ್ತಮ ಫಲಿತಾಂಶ ತಂದುಕೊಡುತ್ತಿದ್ದಾರೆ ಎಂದು ಪ್ರಶಂಶಿಸಿದರು.

ಕಾರ್ಯಕ್ರಮದಲ್ಲಿ ಹಾಸನದ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ರಾಮಕೃಷ್ಣ, ನಿವೃತ್ತ ಇತಹಾಸ ಉಪನ್ಯಾಸಕ ಗಿರೀಶ್, ವರ್ಗಾವಣೆಗೊಂಡಿರುವ ಉಪನ್ಯಾಸಕರುಗಳಾದ ಆರ್ಥ ಶಾಸ್ತ್ರ ಉಪನ್ಯಾಸಕಿ ತೇಜಸ್ವಿನಿ, ಕನ್ನಡ ಉಪನ್ಯಾಸಕ ಆರ್.ಎನ್.ರವಿ ಅವರುನ್ನು ಸನ್ಮಾನಿಸಿ ಗೌರವಿಸಿದರು.

ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ನಗದು ಬಹುಮಾನ ನೀಡಲಾಯಿತು. ತರ್ಕ ಶಾಸ್ತ್ರ ಉಪನ್ಯಾಸಕಿ ನಿರ್ಮಲಾ ವಾರ್ಷಿಕ ವರದಿ ಓದಿದರು. ಉಪನ್ಯಾಸಕ ಸುದರ್ಶನ್ ಅವರು ಸ್ವಾಗತಿಸಿದರು. ವೀಣಾ ಕಾರ್ಯಕ್ರಮ ನಿರೂಪಿಸಿದರು.

ಪುರಸಭಾ ಸದಸ್ಯ ಎ. ಜಗನ್ನಾಥ್, ಪದ್ಮಜಾ, ಅವಿನಾಶ್, ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ವಿದ್ಯಾರ್ಥಿನಿಯರು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಆಕರ್ಷಕವಾಗಿ ಮೂಡಿಬಂತು.

—————-—–ಸುಕುಮಾರ್

Leave a Reply

Your email address will not be published. Required fields are marked *

× How can I help you?