ಹೊಳೆನರಸೀಪುರ:ಶ್ರೀ ಲಕ್ಷ್ಮೀನರಸಿಂಹ ಯುವಕರ ಸಂಘದ ವತಿಯಿಂದ ನವೆಂಬರ್ 21ರಿಂದ 24ರವರೆಗೆ ಕನ್ನಡ ಹಬ್ಬ

                                                                                                                                                                                                                                                                                                                                                                                                                                                                                                                                                                                                                                                                                                 ಹೊಳೆನರಸೀಪುರ:ಪಟ್ಟಣದ ಶ್ರೀ ಲಕ್ಷ್ಮೀನರಸಿಂಹ ಯುವಕರ ಸಂಘದ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಾಲ್ಕುದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದ್ದು ನವಂಬರ್ 22 ರಂದು ರಾಜ್ಯ ಮತ್ತು ರಾಷ್ಟ್ರಮಟ್ಟದ ಮಹಿಳೆಯರ 10 ಹಾಗೂ ಪುರುಷರ 35 ಜೋಡಿಗಳ ಕುಸ್ತಿ ಸ್ಪರ್ಧೆಯನ್ನು  ಏರ್ಪಡಿಸಲಾಗಿದೆ ಎಂದು ಎಸ್.ಎಲ್.ಎನ್.ಸಿ ಯುವಕ ಸಂಘದ ಸದಸ್ಯ, ಪುರಸಭೆ ಮಾಜಿ ಅಧ್ಯಕ್ಷ ಎಚ್.ವಿ.ಪುಟ್ಟರಾಜು ತಿಳಿಸಿದ್ದಾರೆ. 

ಸೋಮವಾರ ಪತ್ರಿಕಾ ಗೋಷ್ಟಿ ನೆಡೆಸಿ ಕಾರ್ಯಕ್ರಮದ ಬಗ್ಗೆ ವಿವರಿಸಿ, ಸಾಂಸ್ಕೃತಿಕ ಕಾರ್ಯಕ್ರಮಗಳು ನವೆಂಬರ್ 21 ರಿಂದ 24 ರ ವರೆಗೆ ನಾಲ್ಕು ದಿನಗಳ ನಡೆಯುತ್ತದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ನಾಡಹಬ್ಬದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದು ವಿನಂತಿಸಿದರು.

ನವಂಬರ್ 21ರ ಗುರುವಾರ ಸಂಜೆ ಜೀ ಕನ್ನಡ ವಾಹಿನಿಯ ಸರಿಗಮಪ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ, ಬಸವನಗುಡಿ ಬೀದಿಯಲ್ಲಿ ನಿರ್ಮಿಸುತ್ತಿರುವ ಪುನೀತ್ ರಾಜ್ ಕುಮಾರ್ ವೇದಿಕೆಯಲ್ಲಿ ನಡೆಯುತ್ತದೆ.

ನ.22 ರ ಶುಕ್ರವಾರ ಸಂಜೆ ಹೊಳೆನರಸೀಪುರದ ಶ್ರೀ ಜೈ ವೀರಹನುಮಾನ್ ದೊಡ್ಡಗರಡಿಯ ಅಧ್ಯಕ್ಷರು, ಸದಸ್ಯರು ಹಾಗೂ ಉಸ್ತಾದರ ಸಹಕಾರದಲ್ಲಿ 35 ಜೊತೆ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿಯನ್ನು (ಪುರುಷರ ಹಾಗೂ ಮಹಿಳಾ ವಿಭಾಗದಲ್ಲಿ) ಬಯಲು ರಂಗಮಂದಿರ ಮೈದಾನದಲ್ಲಿ ನಿರ್ಮಿಸಿರುವ ರಣಧೀರ ಕಂಠೀರವ ವೇದಿಕೆಯಲ್ಲಿ ನಡೆಸಲಾಗುತ್ತದೆ ಎಂದರು.

ನ.23 ರ ಶನಿವಾರ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಸ್ಥಾನದ ಮುಂಭಾಗ ನಿರ್ಮಿಸಿರುವ ರಾಷ್ಟ್ರಕವಿ ಕುವೆಂಪು ವೇದಿಕೆಯಲ್ಲಿ ಸುಗಮ ಸಂಗೀತ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ ನಡೆದರೆ,24 ರ ಭಾನುವಾರ ಸಂಜೆ ಭವ್ಯವಾಗಿ ಅಲಂಕರಿಸಿದ ರಥದಲ್ಲಿ ತಾಯಿ ಶ್ರೀ ಭುವನೇಶ್ವರಿಯ ಉತ್ಸವವನ್ನು ವಿವಿಧ ಜಾನಪದ ಕಲಾಮೇಳ ಹಾಗೂ 10 ಕ್ಕೂ ಹೆಚ್ಚು ಕಲಾ ತಂಡಗಳೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ವೈಭವದಿಂದ ನಡೆಸಲಾಗುತ್ತದೆ ಎಂದು ವಿವರಿಸಿದರು.

ನಾಲ್ಕು ದಿನಗಳ ಕಾಲ ಊರಹಬ್ಬದಂತೆ ನಡೆಸುತ್ತಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಎಚ್.ವಿ.ಪುಟ್ಟರಾಜು ಮಾಡಿಕೊಂಡರು.

ಪತ್ರಿಕಾಘೋಷ್ಠಿಯಲ್ಲಿ ಪುರಸಭೆ ಮಾಜಿ ಸದಸ್ಯ ಎಚ್.ಜೆ. ಓಲೆ ಕುಮಾರ, ಪೈಲ್ವಾನ್ ಧನಂಜಯ, ಉಮೇಶ್ ಲಕ್ಕೇಗೌಡ, ಕಾರ್ತಿಕ್ ಹಾಗೂ ಭರತ್ ಭಾಗವಹಿಸಿದ್ದರು.

—————ವಸಂತ್ ಕುಮಾರ್

Leave a Reply

Your email address will not be published. Required fields are marked *

× How can I help you?