
ಹೊಳೆನರಸೀಪುರ:ಭಾರತ ಕಂಡ ಅತ್ಯುತ್ತಮ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ನಿಧನ ನಮ್ಮ ದೇಶಕ್ಕೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ನಷ್ಟ ಎಂದು ಸಂಸದ ಶ್ರೇಯಶ್ ಪಟೇಲ್ ತಿಳಿಸಿದರು.
ಪಟ್ಟಣದ ರಿವರ್ಬ್ಯಾಂಕ್ ರಸ್ತೆಯ ಜಯಲಕ್ಷ್ಮೀರೈಸ್ ಮಿಲ್ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಮಾಜಿ ಪ್ರಧಾನಿ ದಿವಂಗತ ಮನಮೋಹನ್ ಸಿಂಗ್ ಅವರ ಭಾವಚಿತ್ರಕ್ಕೆ ಸಂಸದ ಶ್ರೇಯಶ್ ಪಟೇಲ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪುಫ್ಫನಮನ ಅರ್ಪಿಸಿದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ,ಮಾನ್ಯರು ನಮ್ಮ ದೇಶಕ್ಕೆ ಹಲವು ಹತ್ತು ಯೋಜನೆಗಳನ್ನು ಜಾರಿಗೆ ತಂದ ಕಾರಣ ದೇಶದ ಜನರಿಗೆ ಅತ್ಯುತ್ತಮವಾದ ನೆರವು ಸಿಕ್ಕಿದೆ. ದೇಶ ಅಭಿವೃದ್ಧಿ ಪಥದಲ್ಲಿ ಸಾಗಲು ಹಾಗೂ ಆರ್ಥಿಕ ನೀತಿ ಉತ್ತಮವಾಗಲು ಮನಮೋಹನ್ ಸಿಂಗ್ ಜಾರಿಗೆ ತಂದ ಯೋಜನೆಗಳು ಸಹಕಾರಿ ಆದವು. ಮನಮೋಹನ್ ಸಿಂಗ್ ಅವರು ಸೌಮ್ಯ ಸ್ವಭಾವದವರಾಗಿದ್ದರೂ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡು ದೇಶವನ್ನು ಮುನ್ನೆಡೆಸಿದ್ದರು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ. ಲಕ್ಷ್ಮಣ, ಒಳಂಬಿಗೆ ನಾರಾಯಣ, ಲಕ್ಕೂರು ಬಸವರಾಜು, ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಪ್ರಸನ್ನ, ಕೆ.ಆರ್. ಸುದರ್ಶನ ಬಾಬು,ಲೋಕೇಶ್, ಓಲೆಕುಮಾರ್, ಗಂಗಾಧರಾಚಾರ್, ಮೆಕ್ಯಾನಿಕ್ ಮುಜಾಹಿದ್, ಚಿನ್ನಸ್ವಾಮಿ, ರಂಗಸ್ವಾಮಿ, ಕೃಷ್ಣ, ಧರ್ಮೇಗೌಡ, ಇತರರು ಭಾಗವಹಿಸಿದ್ದರು.
——–—ಸುಕುಮಾರ್