ಹೊಳೆನರಸೀಪುರ:ನಿಮ್ಮ ಮನೆಯಲ್ಲೇ ಒಬ್ಬ ಸಂಸದನಿದ್ದಾನೆ ಎಂದು ತಿಳಿಯಿರಿ-ಆರ್ಯವೈಶ್ಯ ಸಮಾಜದವರಿಗೆ ಅಭಯ ನೀಡಿದ ಸಂಸದ ಶ್ರೇಯಸ್ ಪಟೇಲ್

ಹೊಳೆನರಸೀಪುರ:ಆರ್ಯವೈಶ್ಯ ಸಮಾಜದವರು ನಿರಂತರವಾಗಿ ಒಂದಿಲ್ಲೊಂದು ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದನ್ನು ನಾನು ನನ್ನ ಸಣ್ಣ ವಯಸ್ಸಿನಿಂದಲೂ ನೋಡಿಕೊಂಡು ಬರುತ್ತಿದ್ದೇನೆ.ಪ್ರತೀ ಶುಕ್ರವಾರ ಸಂಜೆ ದೇವಸ್ಥಾನದಲ್ಲಿ ನಡೆಯುವ ಪೂಜೆಗೆ ನಿಮ್ಮ ಸಮಾಜದ ಎಲ್ಲ ಮನೆಯವರೂ ಭಾಗವಹಿಸಿ ಪ್ರಸಾದ ಸ್ವೀಕರಿಸುತ್ತಾರೆ ಎನ್ನುವ ವಿಷಯ ನಿಮ್ಮ ಸಂಘಟನೆಗೆ ಸಾಕ್ಷಿ ಆಗಿದೆ ಎಂದು ಸಂಸದ ಶ್ರೇಯಸ್ ಪಟೇಲ್ ಪ್ರಶಂಶಿಸಿದರು.

ಕನ್ನಿಕಾಪರಮೇಶ್ವರಿ ದೇವಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಆಯುಷ್ಮಾನ್ ಭಾರತ್ ಕಾರ್ಡ್ ವಿತರಣಾ ಕಾರ್ಯಕ್ರಮದಲ್ಲಿ ಹಿರಿಯ ನಾಗರೀಕರಿಗೆ ಕಾರ್ಡ್ ವಿತರಿಸಿ ಮಾತನಾಡಿ, ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಈ ಬಾರಿ ಸಂಸದನಾಗಿ ಆಯ್ಕೆ ಆಗಿದ್ದೇನೆ. ನನ್ನ ಮೇಲೆ ನಂಬಿಕೆ ಇಟ್ಟು ಗೆಲ್ಲಿಸಿದ ನಿಮ್ಮ ಜೊತೆ ಸದಾ ನಾನಿರುತ್ತೇನೆ. ನೀವೆಲ್ಲಾ ನಿಮ್ಮ ಮನೆಯಲ್ಲೇ ಒಬ್ಬ ಸಂಸದನಿದ್ದಾನೆ ಎಂದು ತಿಳಿಯಿರಿ. ಸಾಮಾಜಿಕ ಜವಾಬ್ದಾರಿಯಿಂದ ನಿಮ್ಮ ವಾರ್ಡ್ ನಲ್ಲಿ ಏನಾದರು ಸಮಸ್ಯೆ ಇದ್ದರೆ ನನ್ನ ಗಮನಕ್ಕೆ ತನ್ನಿ ಪರಿಹರಿಸುತ್ತೇನೆ ಎಂದು ಭರವಸೆ ನೀಡಿದರು.

ವಾಸವಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಬಾಲಾಜಿ ಮಾತನಾಡಿ, ನಮ್ಮ ಶಾಲೆಯ ಪಕ್ಕದಲ್ಲಿ ಸಂಬಂಧ ಪಡದ ಕೆಲವರು ನಾವು ಊಟದ ಹಾಲ್ ಕಟ್ಟಲು ತೊಂದರೆ ನೀಡುತ್ತಿದ್ದರು. ಸಂಸದರಿಗೆ ತಿಳಿಸಿದೆವು. ತಕ್ಷಣ ಸಮಸ್ಯೆ ಬಗೆಹರಿಸಿಕೊಟ್ಟರು ಎಂದು ವಿವರಿಸಿದರು.

ಆರ್ಯವೈಶ್ಯಸಮಾಜ, ವಾಸವಿ ಯುವಕರ ಸಂಘ, ಯುವತಿಯರ ಸಂಘ, ಮಹಿಳಾ ಸಂಘ, ವಾಸವಿ ಕ್ಲಬ್, ವಾಸವಾಂಭ ಕೋ ಆಪರೇಟೀವ್ ಬ್ಯಾಂಕ್ ಸದಸ್ಯರು ಸಂಸದರನ್ನು ಸನ್ಮಾನಿಸಿ ಗೌರವಿಸಿದರು.

ಆರ್ಯವೈಶ್ಯ ಸಮಾಜದ ಅಧ್ಯಕ್ಷ ಎ. ಆರ್. ರವಿಕುಮಾರ್, ಕಾರ್ಯದರ್ಶಿ ಎಚ್.ಪಿ. ರಮೇಶ್, ಉಪಾಧ್ಯಕ್ಷ ಮಂಜುನಾಥ್, ಮುರಳಿಧರ ಗುಪ್ತಾ, ಎಸ್.ಎಸ್. ಮಂಜುನಾಥ್ ಗುಪ್ತಾ ಸೇರಿದಂತೆ ಆರ್ಯವೈಶ್ಯ ಹಾಗೂ ಇತರ ಸಮಾಜಗಳ 300 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು

—————ಸುಕುಮಾರ್

Leave a Reply

Your email address will not be published. Required fields are marked *

× How can I help you?