ಹೊಳೆನರಸೀಪುರ:ಸೋಷಿಯಲ್ ಕ್ಲಬ್ ನಲ್ಲಿ ಹೊಸವರ್ಷದ ಅದ್ಧೂರಿ ಸಂಭ್ರಮಾಚರಣೆ

ಹೊಳೆನರಸೀಪುರ:ಪಟ್ಟಣದ ಸೋಷಿಯಲ್ ಕ್ಲಬ್ ಸದಸ್ಯರು ಮಂಗಳವಾರ ರಾತ್ರಿ ಸಂಭ್ರಮದಿಂದ ಹೊಸವರ್ಷ ಆಚರಿಸಿದರು.

ಇದರ ಅಂಗವಾಗಿ ಕ್ಲಬ್ ಆವರಣವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದರು. ಕ್ಲಬ್ ಸದಸ್ಯರು ಹಾಗೂ ಸದಸ್ಯರೊಂದಿಗೆ ಒಬ್ಬರು ಅಥಿತಿಗೆ ಹೊಸ ವರ್ಷಾಚರಣೆಯಲ್ಲಿ ಭಾಗವಹಿಸಲು ಅವಕಾಶ ಕಲಿಸಿದ್ದು ಕ್ಲಬ್ ಆವರಣ 150 ಕ್ಕೂ ಹೆಚ್ಚು ಜನರಿಂದ ತುಂಬಿತ್ತು.

ಹೊರ ಆವರಣದಲ್ಲಿ ದ್ವನಿವರ್ಧಕದ ವ್ಯವಸ್ಥೆ ಮಾಡಿದ್ದು ಕೆಲವು ಸದಸ್ಯರು ಕನ್ನಡ ಹಾಡುಗಳಿಗೆ ನರ್ತಿಸಿದರು. ಮಳಲಿ ನಾರಾಯಣ ಜನಪದ ಗೀತೆ ಮತ್ತು ಭಾವಗೀತೆಗಳನ್ನು ಹಾಡಿ ರಂಜಿಸಿದರು. ಸದಾ ರಾಜಕೀಯವನ್ನೇ ಹೊದ್ದು ಮಲಗಿರುವ ಈ ಊರಿನ ಸೋಷಿಯಲ್ ಕ್ಲಬ್ ನಲ್ಲಿ ಕಾಂಗ್ರೆಸ್, ಜೆಡಿಎಸ್,ಬಿಜೆಪಿ ಸದಸ್ಯರು ಸದಸ್ಯರಾಗಿದ್ದು ಹೊಸವರ್ಷಾಚರಣೆಯಲ್ಲಿ ಪಕ್ಷ ಭೇದ ಮರೆತು ಕನ್ನಡ ಹಾಡುಗಳಿಗೆ ಒಟ್ಟಿಗೆ ಕುಣಿದು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಸಂಘದ ಅಧ್ಯಕ್ಷ ಕೆ.ಎಂ. ಹೊನ್ನಪ್ಪ ಕೇಕ್ ಕತ್ತರಿಸಿ ಶುಭಾಶಯ ತಿಳಿಸಿದರು.ಸದಸ್ಯರು ಹಾಗೂ ಅತಿಥಿಗಳಿಗೆ ಮಾಂಸಾಹಾರ, ಸಸ್ಯಾಹಾರದ ಊಟದ ವ್ಯವಸ್ಥೆ ಮಾಡಿದ್ದರು.ಕಾರ್ಯದರ್ಶಿ ಕೆ.ಆರ್. ಸುದರ್ಶನ್ ಬಾಬು, ಉಪಾಧ್ಯಕ್ಷರಾದ ವನ್ನಿಕೊಪ್ಪಲು ಮಂಜು, ರಂಗಸ್ವಾಮಿ, ಖಜಾಂಚಿ ವಿಜಿ, ಸಹಕಾರ್ಯದರ್ಶಿ ಮುರುಳಿ, ಮಾಯಣ್ಣ, ಮಳಲಿನಾರಾಯಣ, ಎಚ್.ಪಿ. ಶ್ರೀಕಂಠ, ಅಣ್ಣಪ್ಪ, ಅನಿಲ್, ಶ್ರೀನಿವಾಸ್, ನಟೇಶ್, ಕೆ.ಎಂ. ಜಗದೀಶ್, ಕೆ.ವಿ. ನಾಗರಾಜ, ಇತರರು ಭಾಗವಹಿಸಿದ್ದರು.

———–—ಸುಕುಮಾರ್

Leave a Reply

Your email address will not be published. Required fields are marked *

× How can I help you?