ಹೊಳೆನರಸೀಪುರ-ಗ್ರಾಮೀಣ ಭಾಗದ ಸ್ವಸಹಾಯ ಸಂಘದ ಮಹಿಳೆಯರು ಉತ್ಪಾದಿಸುತ್ತಿರುವ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದ್ದು, ಎಲ್ಲರೂ ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಕಾರ್ಯನಿರ್ವಾಹಕ ಅಧಿಕಾರಿ ಜಿ.ಮುನಿರಾಜು ಸಲಹೆ ಮಾಡಿದರು.
ತಾಲೂಕಿನ ಹರಿಹರಪುರ ಗ್ರಾಮ ಪಂಚಾಯಿತಿಯಲ್ಲಿ ಕೃಷ್ಣ ಸಂಜೀವಿನಿ ಗ್ರಾ.ಪಂ ಮಟ್ಟದ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ಮಾಸಿಕ ಸಂತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ಥಳೀಯವಾಗಿ ಲಭ್ಯವಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಅದರೊoದಿಗೆ ಮಣ್ಣಿನ ಫಲವತ್ತತೆ ಹಾಗೂ ಗುಣಧರ್ಮ ಕಾಪಾಡಿ ಕೊಂಡು ಪರಿಸರ ಸ್ನೇಹ,ಜೈವಿಕ ವಿಧಾನಗಳಿಂದ ಕೀಟ ಮತ್ತು ರೋಗಗಳ ನಿರ್ವಹಣೆ ಕೈಗೊಂಡು ಗುಣಮಟ್ಟದ ಹಾಗೂ ಆರೋಗ್ಯಕರ ಆಹಾರ ಉತ್ಪಾದನೆ ಕೈಗೊಳ್ಳುವುದೆ ಸುಸ್ಥಿರ ಬೇಸಾಯ ಪದ್ಧತಿಯಾಗಿದೆ.ರೈತರು ಸಾವಯವ ಕೃಷಿಗೆ ಒತ್ತು ನೀಡುವಂತೆ ಮನವಿ ಮಾಡಿಕೊಂಡರು.
ಗ್ರಾಮೀಣ ಭಾಗದ ಸ್ವಸಹಾಯ ಸಂಘದ ಮಹಿಳೆಯರು ಉತ್ಪಾದಿಸುತ್ತಿರುವ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದ್ದು, ಎಲ್ಲರೂ ಇದರ ಉಪಯೋಗ ಪಡೆದುಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ರಾಸಾಯನಿಕ ವಸ್ತುಗಳಿಂದ ಬೆಳೆಯುತ್ತಿರುವ ವಸ್ತುಗಳನ್ನು ಉಪಯೋಗಿಸುತ್ತಿರುವುದು ಆರೋಗ್ಯಕ್ಕೆ ಹಾನಿಕಾರಕವಾಗುತ್ತಿರುವುದರಿಂದ ರೈತ ಬಾಂಧವರು ಸಾವಯವ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು. ಹಾಗೂ ಸ್ವ ಸಹಾಯ ಸಂಘದ ಮಹಿಳೆಯರು ಉತ್ಪಾದಿಸುವ ಉತ್ಪನ್ನಗಳಲ್ಲಿ ಯಾವುದೇ ರಾಸಾಯನಿಕ ಇಲ್ಲದಿರುವುದರಿಂದ ಇವುಗಳನ್ನು ಉಪಯೋಗಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಪ್ರೋತ್ಸಾಹ ನೀಡಲು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ಗೋಪಾಲ್ ಪಿ.ಆರ್ ಲೀಡ್ ಬ್ಯಾಂಕ್ ಮ್ಯಾನೇಜರ್ ಲತಾ ಸರಸ್ವತಿ, ಜಿಲ್ಲಾ ಪಂಚಾಯತ್ ಜಿಲ್ಲಾ ವ್ಯವಸ್ಥಾಪಕರು ವಿಜಯ್,ಕೆನರಾ ಬ್ಯಾಂಕ್ ಸ್ವ ಉದ್ಯೋಗ ಸಂಸ್ಥೆ ಸoಪನ್ಮೂಲ ವ್ಯಕ್ತಿ ಹರಿಪ್ರಸಾದ್, ತಾಲೂಕುಕಾರ್ಯಕ್ರಮ ವ್ಯವಸ್ಥಾಪಕರಾದ ನವೀನ್,ಗ್ರಾ.ಪಂ ಅಧ್ಯಕ್ಷರು ತ್ರಿವೇಣಿ, ಗ್ರಾ.ಪಂಒಕ್ಕೂಟದ ಅಧ್ಯಕ್ಷರಾದ ರೂಪ, ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಸುಬ್ಬರಾಯ್ ಶೆಟ್ಟಿ, ಕಾರ್ಯದರ್ಶಿ ಜಗದೀಶ್ ಹಾಗೂ ಗ್ರಾ.ಪಂ ಸಿಬ್ಬoದಿಗಳು ಮಹಿಳಾ ಸಂಘಗಳು ಎಂಬಿಕೆ, ಎಲ್ ಸಿ ಆರ್ ಪಿ, ಕೃಷಿ ಸಖಿ, ಪಶು ಸಖಿ, ಎನ್ ಆರ್ ಎಲ್ ಎಂ ಸಿಬ್ಬoದಿಗಳು ಹಾಗೂ ಸ್ವಸಹಾಯ ಗುಂಪಿನ ಮಹಿಳೆಯರು ಗ್ರಾಮಸ್ಥರು ಹಾಜರಿದ್ದರು.
————–—ಸುಕುಮಾರ್