ಹೊಳೆನರಸೀಪುರ:ಯೋಗದಿಂದ ದೈಹಿಕ ಆರೋಗ್ಯ,ಧ್ಯಾನ ದಿಂದ ನಮ್ಮ ಮೆದುಳಿನ ಆರೋಗ್ಯ ಸಕಾರಾತ್ಮಕ ಚಿಂತನೆಯಿಂದ ನಮ್ಮ ಮನಸ್ಸಿನ ಆರೋಗ್ಯ ಸದಾಕಾಲ ಉತ್ತಮವಾಗಿರುತ್ತದೆ. ಆದ್ದರಿಂದ ನಿತ್ಯ ಯೋಗಾಸನ, ಪ್ರಾಣಯಾಮ, ಧ್ಯಾನ ಮತ್ತು ಸಕಾರಾತ್ಮಕ ಚಿಂತನೆಗಳನ್ನು ಮಾಡುವ ಅಭ್ಯಾಸ ಮಾಡಿಕೊಳ್ಳಿ ಎಂದು ಯೋಗಶಿಕ್ಷಕ ಗಣೇಶ್ ಬಾಬು ತಿಳಿಸಿದರು.
ಶನಿವಾರ ಹನುಮಜಯಂತಿ ಅಂಗವಾಗಿ ಪತಂಜಲಿ ಯೋಗಕೂಟದಿಂದ ಆಯೋಜಿಸಿದ್ದ 108 ಗುರು ನಮಸ್ಕಾರ ಮಾಡಿಹನುಮನಿಗೆ ವಂದಿಸಿದ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ನಿತ್ಯ ಯೋಗಮಾಡುವುದರಿಂದ ನಾವು ಸದಾಕಾಲ ಯುವಕರಂತೆ ಉತ್ಸವಾದಿಂದ ಇರಬಹುದು.ನಮ್ಮಲ್ಲಿ 83,80,73 ವರ್ಷದವರೂ ಇಂದಿಗೂ ಯುವಕರಂತೆ ಯೋಗಾಸನ ಮಾಡುತ್ತಾ ಮಾದರಿ ಆಗಿದ್ದಾರೆ ಎಂದರು.
ವಾಸುದೇವ್ ಮೂರ್ತಿ ಮಾತನಾಡಿ ನಮ್ಮ ಯೋಗಕೂಟದಲ್ಲಿ ಪ್ರತಿದಿನ ಬೆಳಿಗ್ಗೆ 5.30 ರಿಂದ ಉಚಿತವಾಗಿ ಯೋಗಾಸನ ಕಲಿಸಲಾಗುತ್ತದೆ. ಯಾರು ಬೇಕಾದರೂ ನಮ್ಮಲ್ಲಿ ಬಂದು ಯೋಗಾಸನ ಕಲಿಯಬಹುದು. ನಮ್ಮಲ್ಲಿ ಯೋಗ ಕಲಿತು ಕೆಲವರು ಯೋಗಶಾಲೆ ತೆರೆದು ಸಂಪಾದನೆ ಮಾಡುತ್ತಿದ್ದಾರೆ. ಜೊತೆಗೆ ಆರೋಗ್ಯವನ್ನೂ ಕಾಪಾಡಿಕೊಂಡಿದ್ದಾರೆ. ನಮ್ಮ ಯೋಗಕೂಟದಲ್ಲಿ ಪ್ರಸ್ತುಕ 20 ಕ್ಕೂ ಹೆಚ್ಚು ಮಹಿಳೆಯರು 40 ಕ್ಕೂ ಹೆಚ್ಚು ಪುರುಷರು ನಿತ್ಯ ಯೋಗಾಭ್ಯಾಸ ಮಾಡುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಯೋಗಪಟು ಕರುಣಾಕರ ಗುಪ್ತಾ ಅವರನ್ನು ಸನ್ಮಾನಿಸಿದರು. ಯೋಗಶಿಕ್ಷಕರಾದ ದಿನೇಶ್, ಲೋಕೇಶ್, ನರಸಿಂಹ, ಪ್ರೇಮಾಮಂಜುನಾಥ್, ಸೌಮ್ಯ, ಲಲಿತಾ ದಯಾನಂದ್, ಧನಲಕ್ಮೀ, ಪ್ರಭಾ, ಸುಜಾತಾ, ಪ್ರತಿಮಾ, ರಮೇಶ್, ದರ್ಶನ್, ಕೃಷ್ಣಮೂರ್ತಿ , ಸತ್ಯನಾರಾಯಣಶೆಟ್ಟಿ, ಗೃಹವಿಜ್ಞಾನ ಕಾಲೇಜಿನ ಪ್ರಾಂಶುಪಾಲೆ ಆಶಾಜ್ಯೋತಿ ಭಾಗವಹಿಸಿದ್ದರು.
—-ಸುಕುಮಾರ್