ಹೊಳೆನರಸೀಪುರ:ಟಿ.ವಿ,ಮೊಬೈಲ್ ಬಳಕೆ ಹೆಚ್ಚಾದಂತೆ ನಮಗೆ ಮಾರ್ಗದರ್ಶನ ನೀಡುತ್ತಿದ್ದ ಸಾಮಾಜಿಕ, ಪೌರಾಣಿಕ, ಐತಿಹಾಸಿಕ ನಾಟಕಗಳು ಕಣ್ಮರೆ ಆಗುತ್ತಿವೆ. ನಾನು ಚಿಕ್ಕ ವನಿದ್ದಾಗ ನಮ್ಮ ಹಳ್ಳಿಯವರು ಇಂತಹ ನಾಟಕಗಳನ್ನು ಆಡುತ್ತಿದ್ದರು.ನಾಟಕಕ್ಕೆ ಮುನ್ನ ತಿಂಗಳು ಗಟ್ಟಲೆ ಅಭ್ಯಾ ಸ ಮಾಡುತ್ತಿದ್ದರು.ನಾಟಕ ಅಭಿನಯದ ದಿನ ಹಳ್ಳಿಯ ಎಲ್ಲ ಜನರಿಗೆ ಅದೊಂದು ದೊಡ್ಡ ಸಂಭ್ರಮ ಆಗಿರುತ್ತಿತ್ತು.ಅವರು ಆಡುವ ನಾಟಕ ಗಳು ನಮಗೆ ಇತಿಹಾಸವನ್ನು ತಿಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದವು ಎಂದು ದಕ್ಷಿಣ ವಲಯ ಡಿ.ಐ.ಜಿ.ಪಿ ಡಾ,ಬೋರಲಿಂಗಯ್ಯ ಹೇಳಿದರು.
ಹೊಳೆನರಸೀಪುರ ಪೋಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಂಗಳವಾರ ರಾತ್ರಿ ಆಯೋಜಿಸಿದ್ದ ಕುರುಕ್ಷೇತ್ರ ಪೌರಾಣಿಕ ನಾಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದಿನ ದಿನದಲ್ಲಿ ಟಿ.ವಿ, ಮೊಬೈಲ್ ನಲ್ಲಿ ಮುಳುಗುವ ಜನರು ನಾಟಕ ನೋಡುವುದನ್ನು ಬಿಟ್ಟಿರುವುದರಿಂದ ನಾಟಕ ಗಳನ್ನು ಆಡುವವರೂ ಕಡಿಮೆ ಆಗಿದ್ದಾರೆ. ಇಂತಹ ದಿನದಲ್ಲಿ ನಮ್ಮ ಹೊಳೆನರಸೀಪುರ ವೃತ್ತ ನಿರೀಕ್ಷಕರಾದ ಪ್ರದೀಪ್ ನೇತೃತ್ವದಲ್ಲಿ ನಮ್ಮ ಪೊಲೀಸರು ಪಾಂಡವರ, ಕೌರವರ ನಡುವಿನ ಕುರುಕ್ಷೇತ್ರವನ್ನು ತೆರೆಯಮೇಲೆ ನಿಮ್ಮ ಮುಂದೆ ತರುತ್ತಿದ್ದಾರೆ.ಎಲ್ಲರೂ ನೋಡಿ ಪ್ರೋತ್ಸಾಹಿಸಿ.ನಿಮ್ಮೂರಿನ ಪೊಲೀಸರು ಆಗಾಗ ಇಂತಹ ನಾಟಕಗಳನ್ನು ಆಡುತ್ತಾ ನಾಟಕ ಕಲೆಯನ್ನು ಉಳಿಸುತ್ತಿರುವುದು ಶ್ಲಾಘನೀಯ ಕಾರ್ಯ.ನಮ್ಮ ಇತರ ವಿಭಾಗಗಳ ಪೊಲೀ ಸರು ಇಂತಹ ಪ್ರಯತ್ನ ಮಾಡಿ ಎಂದು ಕರೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜೀತಾ ಮಾತನಾಡಿ ನಾನು ನಗರ ಪ್ರದೇಶದಿಂದ ಬಂದವಳು,ನನಗೆ ನಾಟಕಗಳ ಬಗ್ಗೆ ಗೊತ್ತಿಲ್ಲ.ನಾಟಕಗಳಲ್ಲಿನ ಸಾರ, ತತ್ವಗಳ ಬಗ್ಗೆ ನಮ್ಮ ಅಧಿಕಾರಿ ಬೋರಲಿಂಗಯ್ಯ ಸರ್ ತಿಳಿಸಿದ ಮೇಲೆ ನಾಟಕ ಮುಗಿಯುವವರೆಗೂ ಇದ್ದು ನೋಡಬೇಕು ಎನಿಸಿದೆ.ನೋಡುತ್ತೇನೆ.ಪೊಲೀಸರಿಗೆ ಕೆಲಸದ ಒತ್ತಡ ಹೆಚ್ಚಿರುತ್ತದೆ.ಸಮಯವೇ ಇರುವುದಿಲ್ಲ.ಆದರೂ ಸಿಕ್ಕ ಅಲ್ಪ ಸ್ವಲ್ಪ ಸಮಯದಲ್ಲಿ ಅಭ್ಯಾಸ ಮಾಡಿ ನಾಟಕ ಪ್ರದರ್ಶಿಸಿ ಸುತ್ತಿರುವುದು ನಮ್ಮ ಪೊಲೀಸರಿಗೆ ನಾಟಕದ ಮೇಲಿರುವ ಶ್ರದ್ದೆಯನ್ನು ತೋರಿಸುತ್ತದೆ ಎಂದರು .
ಗಣಪತಿ ಪೆಂಡಾಲ್ ಮುಂಭಾಗದಲ್ಲಿ ಲಕ್ಷ್ಮೀ ನರಸಿಂಹ ಕೃಪಾಪೋಷಿತ ನಾಟಕ ಮಂಡಳಿಯವರು ಹಾಕಿದ್ಧ ಭವ್ಯ ವೇದಿಕೆಯಲ್ಲಿ ಪೊಲೀಸರು ಮಂಗಳವಾರ ರಾತ್ರಿ 9 ರಿಂದ ಬೆಳಿಗಿನ 6 ಗಂಟೆಗೆವರೆಗೆ ಆಡಿದ ಕುರುಕ್ಷೇತ್ರ ನಾಟಕ ಜನಮನ ಸೂರೆಗೊಂಡಿತು.
ತಾಲ್ಲೂ ಕಿನ ಮಲ್ಲತಮ್ಮನಹಳ್ಳಿಯ ಎಂ .ಪಿ.ಪದ್ಮರಾಜ್ ನಿರ್ದೇಶನದ ಈ ನಾಟಕದಲ್ಲಿ ಬೆಂಗಳೂರಿನ ಚೈತ್ರಾ , ರುಕ್ಷ್ಮಿಣಿ ಹಾಗೂ ದ್ರೌಪದಿ ಪಾತ್ರದಲ್ಲಿ, ಶೋಭಾ ರೈ ಕುಂತಿ, ಗಾಂಧಾರಿ, ಸುಭದ್ರೆ ಪಾತ್ರದಲ್ಲಿ ಮಂಡ್ಯದ ಗಗನಾ ಉತ್ತರೆಯ ಪಾತ್ರದಲ್ಲಿ ಅಭಿನಯಿಸಿದ್ದಲ್ಲದೆ ಆಸ್ತಾನ ನರ್ತಕಿಯರಾಗಿದ್ದರು .
ಪೊಲೀಸ್ ಅಧಿಕಾರಿಗಳು ಹಾಗೂ ಪೇದೆಗಳಾದ ಸರ್ಕಲ್ ಇನ್ಸ್ಪೆಕ್ಟ ರ್ ಪ್ರದೀಪ್, ಎಸ್.ಐ. ರಂಗಸ್ವಾಮಿ, ಸಿಬ್ಬಂದಿ ಗಳಾದ ರಂಗೇಗೌಡ, ಮುತ್ತುರಾಜ್,ದೇವಯ್ಯ ,ಕೆ.ವಿ.ಮಹದೇವ್ ನಾಯಕ,ಅಶೋಕ್, ಮೋಹನ್ ಕುಮಾರ್,ಧನರಾಜ್,ರಮೇಶ್,ಕೆ.ಪಿ.ರವಿ, ಬಸವೇಗೌಡ, ಮಹೇಶ್,ನಾಗೇಶ್,ಪುರುಷೋತ್ತಮ್,ಬಿ.ಎಸ್.,ಚಿದಾನಂದ, ಎಚ್.ಎಸ್. ಮಂಜೇಗೌಡ ನಾಟಕದ ಪಾತ್ರದಾರಿಗಳಾಗಿದ್ದರು .
ನಾಟಕಕ್ಕೆ ಸಹೋದರರಾದ ಮಾರುತಿ, ರಂಗನಾಥ್, ನಟರಾಜ್ ನೀಡಿದ ಹಿನ್ನೆಲೆ ಸಂಗೀತ ನಾಟಕವನ್ನು ಶುಶ್ರಾವ್ಯಗೊಳಿಸಿತು .
ನಗರ ಠಾಣೆ ಎಸ್.ಐ.ಅಭಿಜಿತ್ ಸ್ವಾಗತಿಸಿದರು.ಗ್ರಾ ಮಾಂತರಠಾಣೆ ಎಸ್.ಐ. ಪಿ ರಮೇಶ್, ಹಳ್ಳಿಮೈಸೂರು ಠಾಣೆ ಎಸ್.ಐ.ಟಿ.ಸಲ್ಮಾ ನ್ ಖಾನ್ ಹಿರಿಯ ಅಧಿಕಾರಿಗಳನ್ನು ಸನ್ಮಾನಿಸಿದರು .ಮಂಗಳಾ ಮತ್ತು ತಂಡದವರು ಪ್ರಾ ರ್ಥಿಸಿದರು.ಡಿ.ಕೆ. ಕುಮಾರಯ್ಯ ಕಾರ್ಯಕ್ರಮ ನಿರೂಪಿಸಿದರು .
ಅಪರ ಅಧಿಕ್ಷಕರಾದ ತಮಯ್ಯ ,ಡಿ.ವೈ .ಎಸ್.ಪಿ ಗಳಾದ ಶಾಲೂ ,ವೆಂಕಟೇಶ್ ನಾಯ್ಡು ,ರವಿಪ್ರಸಾದ್, ಪಾಲಾಕ್ಷ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪೃಥ್ವಿ , ಭಾಗವಹಿಸಿದ್ದರು .
——-—ಸುಕುಮಾರ್