ಹೊಳೆನರಸೀಪುರ:ಸರ್ವಾಧಿಕಾರದಿಂದ ಹೊಳೆನರಸೀಪುರಕ್ಕೆ ಮುಕ್ತಿ-ತಾಲ್ಲೂಕಿನ ವಾಸ್ತು ಬದಲಾಯಿಸಿದ ಶ್ರೇಯಸ್ ಪಟೇಲ್-ಪ್ರೀತಮ್ ಗೌಡ ಜೆ

ಹೊಳೆನರಸೀಪುರ:ನಿಮ್ಮ ಊರಿನ ವಾಸ್ತು ಬದಲಿಸಿ ಊರಿಗೆ ಶ್ರೇಯಶ್ ತಂದಿದ್ದಾರೆ ಶ್ರೇಯಶ್ ಪಟೇಲ್.ನಿಮ್ಮ ತಾಲ್ಲೂ ಕಿನ ವಾಸ್ತು ಬದಲಾದ ಕಾರಣ ಒಳ್ಳೆಯ ದಿನಗಳು ಪ್ರಾರಂಭವಾಗಿ,ಸರ್ವಾಧಿಕಾರಿಗಳ ಆಡಳಿತದಿಂದ ಸಂಪೂರ್ಣ ಸ್ವಾತತ್ರ್ಯಸಿಕ್ಕಂತಾಗಿದೆ ಎಂದು ರಾಜ್ಯ ಬಿಜೆಪಿ ಮುಖಂಡ ಹಾಸನದ ಮಾಜಿ ಶಾಸಕ ಪ್ರೀತಂ ಗೌಡ ತಿಳಿಸಿದರು .

ಭಾನುವಾರ ಇಲ್ಲಿನ ಲಕ್ಷ್ಮೀ ನರಸಿಂಹ ಯುವಕ ಸಂಘದವರು ನವಂಬರ್ 21 ರಿಂದ ನಡೆಸುತ್ತಿರುವ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಕಡೆಯ ದಿನದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಕನ್ನಡ ರಾಜ್ಯೋತ್ಸವದ ಅಂ ಗವಾಗಿ ನಿಮ್ಮ ಊರನ್ನು ಅತಿಹೆಚ್ಚು ದೀಪಾಲಂಕಾರಗಳಿಂದ ಸಿಂಗರಿಸಿ ಇಡೀ ಊರೇ ಜಗಮಗಿಸುವಂತೆ ಮಾಡಿದ್ದಾರೆ. ಈ ಹಿಂದೆ ಯಾವುದೇ ಕಾರ್ಯಕ್ರಮದಲ್ಲಿ ಒಂದು ಮನೆ,ಮತ್ತೊಂದು ತೋಟದ ಮನೆ ಮಾತ್ರ ವಿದ್ಯುತ್ ದೀಪಗಳಿಂದ ಅಲಂಕಾರಗೊಳ್ಳುತ್ತಿತ್ತು ಎಂದು ಯಾರ ಹೆಸರನ್ನೂ ಹೇಳದೆ ವ್ಯಂಗ್ಯವಾಡಿದರು.ನಾನು ಬಿಜೆಪಿ ಯವನು.ಆದರೂ ಶ್ರೇ ಯಶ್ ಹಾಗೂ ಎಚ್.ವಿ.ಪುಟ್ಟರಾಜು ಅವರ ಆಹ್ವಾನಕ್ಕೆ ಗೌರವ ಕೊಟ್ಟು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬಂದಿದ್ದೇನೆ.ಇದಕ್ಕೆ ಬೇರೆ ಅರ್ಥ ಕಲ್ಪಿಸಿಕೊಳ್ಳಬೇಡಿ. ನಾನು ಎಲ್ಲೇ ಇದ್ದರೂ ಶ್ರೇಯಶ್ ಅವರ ಕಾರ್ಯಕ್ರಮಗಳಿಗೆ ಬರುತ್ತೇನೆ ಒಟ್ಟಿನಲ್ಲಿ ಮೊದಲ ಬಾರಿಗೆ ಒಂದು ಒಳ್ಳೆಯ ರಾಜ್ಯೋತ್ಸವ ಕಾರ್ಯಕ್ರಮ ಆಚರಿಸಿ ರಾಜ್ಯದ ಗಮನ ಸೆಳೆದಿದ್ದೀರಿ ಮುಂದಿನ ದಿನಗಳಲ್ಲೂ ಇಂತಹ ಕಾರ್ಯಕ್ರಮಗಳು ನಿರಂತರ ನಡೆಯುವಂತಾಗಲಿ.ಮಾಜಿ ಸಚಿವರಾದ ದಿವಂಗತ ಪುಟ್ಟಸ್ವಾಮಿಗೌಡರು ಕಂಡ ಅಭಿವೃದ್ಧಿ ಕನಸ್ಸುಗಳನ್ನು ಶ್ರೇಯಶ್ ನನಸು ಮಾಡಲಿ ಎಂದರು .

ಸಂಸದ ಶ್ರೇಯಶ್ ಪಟೇಲ್ ಮಾತನಾಡಿ ಪ್ರೀತಂ ಅಣ್ಣ ನಮ್ಮ ಆಹ್ವಾನಕ್ಕೆ ಬಂದು ನಮ್ಮ ಊರಿನ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮನ್ನೆಲ್ಲಾ ಗೌರವಿಸಿದ್ದಾರೆ. ನನ್ನ ಮಡದಿ ಪ್ರೀತಂ ಅಣ್ಣನ ಸಂಬಂಧಿ.ನಾನು ಮೊದಲಿನಿಂದಲೂ ಅವರ ಬಗ್ಗೆ ಅಪಾರ ಗೌರವ ಹೊಂದಿದ್ದೇನೆ.

ಹೊಳೆನರಸೀಪುರ ಇತಿಹಾಸದಲ್ಲಿ ಮೊದಲ ಬಾರಿಗೆ ಇಂತಹ ರಾಜ್ಯೋತ್ಸವ ಕಾರ್ಯಕ್ರಮ ನಡೆದಿದೆ. ಮುಂದಿನ ವರ್ಷ ಇದಕ್ಕಿಂತಲೂ ಇನ್ನೂ ಅದ್ದೂರಿಯಾಗಿ ರಾಜ್ಯೋ ತ್ಸವ ಆಚರಿಸೋಣ ಎಂದರು .

ಪುರಸಭೆ ಮಾಜಿ ಅಧ್ಯಕ್ಷ ಎಚ್.ವಿ.ಪುಟ್ಟರಾಜು ಮಾತನಾಡಿ ಈ ಹಿಂದಿನ ಜನಪ್ರತಿನಿಧಿಗಳು ನಮಗೆ ಒಂದು ಉತ್ಸವ ಮಾಡಲು ಅವಕಾಶ ನೀಡಲಿಲ್ಲ. ಇದರಿಂದ ಪ್ರೇರಣೆಗೊಂಡ ನಾವು ಅದ್ದೂರಿಯಾ ಗಿ ಕನ್ನಡ ರಾಜ್ಯೋತ್ಸವ ಆಚರಿಸಿದ್ದೇವೆ. ಇದಕ್ಕೆ ಅನೇಕರು ಸಹಕಾರ ನೀಡಿದ್ದಾರೆ ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.ಇದೇ ಸಂದರ್ಭ ದಲ್ಲಿ ಶ್ರೇಯಶ್ ಪಟೇಲ್ ಪ್ರೀತಂ ಗೌಡರನ್ನು ಸನ್ಮಾನಿಸಿ ಗೌರವಿಸಿದರು .

ಕನ್ನಂಡಾಬೆಯ ವಿಗ್ರಹವನ್ನು ದೀಪಾಲಂಕೃತ ವಾಹನದಲ್ಲಿ ಇರಿಸಿ 20 ಕ್ಕೂ ಹೆಚ್ಚು ಕಲಾತಂಡಗಳ ಜೊತೆಯಲ್ಲಿ, ಮೋಬೈಲ್ ಆರ್ಕೆಸ್ಟ್ರಾದೊಂದಿಗೆ ಪಟ್ಟ ಣದ ಪ್ರಮುಖ ಬೀದಿಗಳಲ್ಲಿ ಭುವನೇಶ್ವರಿ ಉತ್ಸವ ನಡೆಸಿದರು’.

ಮಾಯಣ್ಣ,ಬಾಳ್ಳು ಗೋಪಾಲ್, ಮಳಲಿ ಶರತ್, ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಬಿಜೆಪಿ ಸೋಲಿಗೆ ಅನೇಕ ಕಾರಣ.

ಇದೇ ಸಂದರ್ಭದಲ್ಲಿ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿ ಪ್ರೀತಮ್ ಗೌಡ ಮೂರು ಕ್ಷೇತ್ರ ಗಳಲ್ಲಿ ಬಿಜೆಪಿ ಸೋತಿದೆ ಇದಕ್ಕೆ ಕೆಲವು ತಪ್ಪು ನಿರ್ಧಾರಗಳು ಕಾರಣ. ಚನ್ನಪಟ್ಟಣದಲ್ಲಿ ಯೋಗೇಶ್ವರ್ಗೆ ಬಿಜೆಪಿ ಟಿಕೆಟ್ ನೀಡಿದ್ದರೆ ಇನ್ನೂ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುತ್ತಿದ್ದರು . ಸಂಡೂರಿಲ್ಲಿ ಮತದಾರರಿಗೆ ನಿರೀಕ್ಷೆಗಿಂತ ಹೆಚ್ಚು ಹಣ ನೀಡಿ ನಮ್ಮ ಪಕ್ಷದ ಅಭ್ಯರ್ಥಿ ಯನ್ನು ಸೋಲಿಸಿದರು . ಮತದಾರರ ತೀರ್ಪನ್ನು ಒಪ್ಪಿಗೊಂಡಿರುವ ನಾವು ಮುಂದಿನ ದಿನಗಳಲ್ಲಿ ಎಚ್ಚರಿಕೆಯ ಹೆಜ್ಜೆ ಇಟ್ಟು ಮತ್ತೆ ಆ ಸ್ಥಾನಗಳನ್ನು ಮರಳಿ ಪಡೆಯುತ್ತೇವೆ ಎಂದರು .

——————–ವಸಂತ್ ಕುಮಾರ್

Leave a Reply

Your email address will not be published. Required fields are marked *

× How can I help you?